»   » ಸಂತನಾಗಿ 'ಸಂತೆಯಲ್ಲಿ ನಿಂತ ಕಬೀರ' ಶಿವಣ್ಣ

ಸಂತನಾಗಿ 'ಸಂತೆಯಲ್ಲಿ ನಿಂತ ಕಬೀರ' ಶಿವಣ್ಣ

Posted By:
Subscribe to Filmibeat Kannada

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ 'ಸಂತೆಯಲ್ಲಿ ನಿಂತ ಕಬೀರ' ಚಿತ್ರಕ್ಕೆ ಇದೇ ಯುಗಾದಿ ಅಂದು ಅದ್ಧೂರಿ ಮುಹೂರ್ತ ಸಮಾರಂಭ. ಹೊಸ ವರ್ಷದ ಪ್ರಯುಕ್ತ ಹೊಸ ಪ್ರಯೋಗದೊಂದಿಗೆ, ಹೊಸ ಲುಕ್ ನಲ್ಲಿ ಶಿವಣ್ಣ ಕಬೀರನಾಗಿದ್ದಾರೆ.

ದಶಕಗಳ ಹಿಂದೆ ನಟಸಾರ್ವಭೌಮ ಡಾ.ರಾಜ್ ಕುಮಾರ್ ಮಹಾತ್ಮ ಕಬೀರನಾಗಿ ದೋಹಾಗಳನ್ನ ಹೇಳಿದ್ರು. ಈಗ ಇದೇ ಹಾದಿಯಲ್ಲಿ ಅಣ್ಣಾವ್ರ ಮಗ ಕೂಡ ಸಾಗುತ್ತಿರುವುದು ವಿಶೇಷ. [ಯುಗಾದಿ ಹಬ್ಬದಂದು ಶಿವಣ್ಣ ಸಂತ 'ಕಬೀರ' ಶುರು]

Shivarajkumar starrer Santheyalli Ninta Kabira all set to go on floors

ಚಿತ್ರದ ಶೀರ್ಷಿಕೆ ಸೂಚಿಸುವ ಹಾಗೆ, ಇದು 'ಸಂತ ಕಬೀರ್ ದಾಸ್'ನ ಜೀವನ ಚರಿತ್ರೆ. ಭೀಷ್ಮ ಸಹಾನಿ ಅವರ 'ಕಬೀರ ಕಡಾ ಭಾಝಾರ್' ಕೃತಿಯನ್ನಾಧರಿಸಿ 'ಸಂತೆಯಲ್ಲಿ ನಿಂತ ಕಬೀರ' ಚಿತ್ರಕಥೆ ರಚಿಸಲಾಗಿದೆ.

ಕಬೀರ್ ದಾಸ್ ಆಗಿ ಶಿವಣ್ಣ ಕಾಣಿಸಿಕೊಳ್ಳುತ್ತಿದ್ದರೆ, ಅವರ ತಂದೆ ಪಾತ್ರದಲ್ಲಿ ಓಂ ಪುರಿ ಮತ್ತು ತಾಯಿಯಾಗಿ ಅಕ್ಷತಾ ರಾವ್ ಅಭಿನಯಿಸಲಿದ್ದಾರೆ. ಶಿವಣ್ಣನಿಗೆ ಜೋಡಿಯಾಗಿ ಮಲೆಯಾಳಂ ನಟಿ ಸನುಷ ಇದ್ದಾರೆ. ಕಾಲಿವುಡ್ ನಟ ಶರತ್ ಕುಮಾರ್, ಅವಿನಾಷ್, ಶರತ್ ಲೋಹಿತಾಶ್ವ, ದತ್ತಣ್ಣ ಸೇರಿದಂತೆ ದೊಡ್ಡ ತಾರಾಬಳಗ ಚಿತ್ರದಲ್ಲಿದೆ. ['ಗೀತಾ' ಖ್ಯಾತಿಯ ಅಕ್ಷತಾ ರಾವ್ ಸೆಕೆಂಡ್ ಇನ್ನಿಂಗ್ಸ್]

Shivarajkumar starrer Santheyalli Ninta Kabira all set to go on floors

ಕಬೀರ್ ದಾಸ್ ಯಶೋಗಾಥೆಯನ್ನ ಕಲಾತ್ಮಕವಾಗಿ ಕಟ್ಟಿಕೊಡುವುದಕ್ಕೆ ರೆಡಿಯಾಗಿರುವುದು ಇಂದ್ರಬಾಬು ಅಂತ ಇದೀಗ ಹೆಸರು ಬದಲಾಯಿಸಿಕೊಂಡಿರುವ 'ಕಬ್ಬಡಿ' ಖ್ಯಾತಿಯ ನರೇಂದ್ರ ಬಾಬು. [ಹ್ಯಾಟ್ರಿಕ್ ಹೀರೋ 'ಕಬೀರ' ಫಸ್ಟ್ ಲುಕ್ ಔಟ್]

ಕುಮಾರಸ್ವಾಮಿ ಪೆತ್ತಿಕೊಂಡ 'ಸಂತೆಯಲ್ಲಿ ನಿಂತ ಕಬೀರ' ಚಿತ್ರಕ್ಕೆ ಬಂಡವಾಳ ಹಾಕುತ್ತಿದ್ದಾರೆ. ಯುಗಾದಿ ಹಬ್ಬದ ಶುಭ ಸಂದರ್ಭದಲ್ಲಿ ಮುಹೂರ್ತ ನೆರವೇರಲಿದ್ದು, ಫಸ್ಟ್ ಶಾಟ್ ಗೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕ್ಲಾಪ್ ಮಾಡಲಿದ್ದಾರೆ. (ಫಿಲ್ಮಿಬೀಟ್ ಕನ್ನಡ)

English summary
Hat-Trick Hero Shivarajkumar starrer new movie 'Santheyalli Ninta Kabira' muhoortha is scheduled on Ugadi festival (March 21st). Narendra Babu of 'Kabbadi' fame is directing this movie. The film features Akshatha Rao, Om Puri, Sarath Kumar and others.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada