For Quick Alerts
  ALLOW NOTIFICATIONS  
  For Daily Alerts

  Vedha Booking Open: ಬೆಳಗ್ಗೆ 5, 6, 6.30ಕ್ಕೆ ಎಲ್ಲೆಲ್ಲಿ ಶೋ? ಬುಕ್ಕಿಂಗ್‌ಗೆ ರೆಸ್ಪಾನ್ಸ್ ಹೇಗಿದೆ?

  |

  ಎ. ಹರ್ಷ ನಿರ್ದೇಶನದಲ್ಲಿ ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ನಟನೆಯ 'ವೇದ' ಸಿನಿಮಾ ಭಾರೀ ನಿರೀಕ್ಷೆ ಮೂಡಿಸಿದೆ. ಈಗಾಗಲೇ ಚಿತ್ರದ ಟೀಸರ್, ಟ್ರೈಲರ್, ಸಾಂಗ್ಸ್ ಹಿಟ್ ಆಗಿದೆ. ಶುಕ್ರವಾರ ಸಿನಿಮಾ ತೆರೆಗಪ್ಪಳಿಸ್ತಿದ್ದು, ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಶುರುವಾಗಿದೆ.

  'ವೇದ' ಸಿನಿಮಾ ಟ್ರೈಲರ್ ನೋಡಿದ ಸಿನಿರಸಿಕರು ಬೆರಗಾಗಿದ್ದಾರೆ. ಹೆಚ್ಚು ಡೈಲಾಗ್‌ಗಳಿಲ್ಲದೇ ಮೈ ಜುಮ್ ಎನಿಸುವ ಆಕ್ಷನ್ ಸೀಕ್ವೆನ್ಸ್ ಮಿಕ್ಸ್ ಮಾಡಿ ಜಬರ್ದಸ್ತ್ ಸ್ಯಾಂಪಲ್ ಝಲಕ್ ರಿಲೀಸ್ ಮಾಡಿದ್ದಾರೆ. 'ಬೈರಾಗಿ' ನಂತರ ಶಿವಣ್ಣ 'ವೇದ' ಆಗಿ ಸಿನಿರಸಿಕರನ್ನು ರಂಜಿಸೋಕೆ ಬರ್ತಿದ್ದಾರೆ. ಗಾನವಿ ಲಕ್ಷ್ಮಣ್, ಅದಿತಿ ಅರುಣ್ ಸಾಗರ್, ಶ್ವೇತಾ ಚೆಂಗಪ್ಪ, ಉಮಾಶ್ರೀ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಸಿನಿಮಾ ರಿಲೀಸ್‌ಗೆ ದಿನಗಣನೆ ಶುರುವಾಗಿದೆ.

  ಪಕ್ಕಾ ಆಕ್ಷನ್ ಎಂಟರ್‌ಟೈನರ್ ಸಿನಿಮಾ 'ವೇದ'. ಈ ಬಾರಿ ಫ್ಯಾಂಟಸಿ, ಮೈಥಾಲಜಿ ಬಿಟ್ಟು 60ರ ದಶಕದ ಒಂದು ಕಾಲ್ಪನಿಕ ಕಥೆಯನ್ನು ನಿರ್ದೇಶಕ ಎ. ಹರ್ಷ ಚಿತ್ರದಲ್ಲಿ ಹೇಳಿದ್ದಾರೆ. ಶಿವಣ್ಣ 2 ಶೇಡ್‌ಗಳಿರೋ ಪಾತ್ರದಲ್ಲಿ ಅಬ್ಬರಿಸಿದ್ದಾರೆ. ಸ್ಯಾಂಪಲ್‌ಗಳಲ್ಲಿ ಸೆಂಚುರಿ ಸ್ಟಾರ್ ಲುಕ್ಕು, ಎನರ್ಜಿ ನೋಡಿ ಅಭಿಮಾನಿಗಳು ಕಳೆದೋಗಿದ್ದಾರೆ.

  ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಶುರು

  ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಶುರು

  ಹ್ಯಾಟ್ರಿಕ್ ಹೀರೊ ಶಿವರಾಜ್‌ಕುಮಾರ್ ಸಿನಿಮಾಗಳಿಗೆ ಇರುವ ಕ್ರೇಜ್ ಬಗ್ಗೆ ಬಿಡಿಸಿ ಹೇಳುವುದು ಬೇಕಾಗಿಲ್ಲ. 'ವೇದ' ಸಿನಿಮಾ ಕೂಡ ಭಾರೀ ಹೈಪ್ ಕ್ರಿಯೇಟ್ ಮಾಡಿದೆ. 5 ದಿನ ಮೊದ್ಲೆ 'ವೇದ' ಚಿತ್ರದ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಶುರುವಾಗಿದೆ. ಬುಕ್‌ಮೈ ಶೋನಲ್ಲಿ ಪ್ರೇಕ್ಷಕರು ಟಿಕೆಟ್ ಬುಕ್ ಮಾಡಲು ಮುಗಿಬಿದ್ದಿದ್ದಾರೆ. ಹಾಗಾಗಿ ಟಿಕೆಟ್ ಬುಕ್ಕಿಂಗ್‌ಗೆ ಭರ್ಜರಿ ರೆಸ್ಪಾನ್ಸ್ ಸಿಕ್ತಿದೆ. ಅಭಿಮಾನಿಗಳು ಅರ್ಲಿ ಮಾರ್ನಿಂಗ್ ಶೋ ನೋಡಲು ಉತ್ಸುಕರಾಗಿರುವುದು ಗೊತ್ತಾಗುತ್ತಿದೆ.

  ಬೆಳಗ್ಗೆ 5 ಗಂಟೆಗೆ ಸಿನಿಮಾ ಪ್ರದರ್ಶನ ಆರಂಭ

  ಬೆಳಗ್ಗೆ 5 ಗಂಟೆಗೆ ಸಿನಿಮಾ ಪ್ರದರ್ಶನ ಆರಂಭ

  ಸ್ಯಾಂಡಲ್‌ವುಡ್‌ನಲ್ಲಿ ದೊಡ್ಡ ಸಿನಿಮಾಗಳಿಗೆ ಮಿಡ್‌ನೈಟ್ ಶೋ, ಅರ್ಲಿ ಮಾರ್ನಿಂಗ್‌ ಶೋಗಳು ಕಾಮನ್. ಪದ್ಮನಾಭನಗರದ ಶ್ರೀನಿವಾಸ, ಮಾಗಡಿ ರಸ್ತೆಯ ಪ್ರಸನ್ನ, ಜೆ.ಪಿ ನಗರದ ಸಿದ್ದೇಶ್ವರ ಥಿಯೇಟರ್‌ಗಳಲ್ಲಿ ಬೆಳಗ್ಗೆ 5 ಗಂಟೆಗೆ ಶೋ ಆರಂಭವಾಗುತ್ತಿದೆ. ಸಂಜಯ ನಗರದ ವೈಭವ್, ತಾವರೆಕೆರೆಯ ಬಾಲಾಜಿ ಸೇರಿದಂತೆ ಹಲವೆಡೆ 6 ಗಂಟೆಗೆ 'ವೇದ'ನ ದರ್ಶನ ಆಗಲಿದೆ. ಈಗಾಗಲೇ ಶ್ರೀನಿವಾಸ ಚಿತ್ರಮಂದಿರದ 5 ಗಂಟೆ ಶೋ ಸೋಲ್ಡೌಟ್ ಆಗಿದೆ. ಪ್ರಸನ್ನ, ಸಿದ್ದೇಶ್ವರ ಕೆಲವೇ ನಿಮಿಷಗಳಲ್ಲಿ ಸೋಲ್ಡೌಟ್ ಆಗುವ ಸುಳಿವು ಸಿಕ್ತಿದೆ. ಇನ್ನುಳಿದಂತೆ ಬೇರೆ ಕಡೆಗಳಲ್ಲಿ ಫಸ್ಟ್ ಡೇ ಶೋಗಳು ಫಾಸ್ಟ್ ಫಿಲ್ಲಿಂಗ್ ಆಗ್ತಿದೆ.

  ಫಸ್ಟ್ ಡೇ ಥಿಯೇಟರ್‌ಗೆ ಶಿವಣ್ಣ ಭೇಟಿ

  ಫಸ್ಟ್ ಡೇ ಥಿಯೇಟರ್‌ಗೆ ಶಿವಣ್ಣ ಭೇಟಿ

  ಇನ್ನು ಅಭಿಮಾನಿಗಳು 'ವೇದ' ಚಿತ್ರವನ್ನು ಭರ್ಜರಿಯಾಗಿ ಸ್ವಾಗತಿಸಲು ಸಿದ್ಧತೆ ನಡೆಸಿದ್ದಾರೆ. ಪದ್ಮನಾಭನಗರದ ಶ್ರೀನಿವಾಸ, ಜೆಪಿ ನಗರದ ಸಿದ್ದೇಶ್ವರ ಹಾಗೂ ಕೆಜಿ ರಸ್ತೆಯ ನರ್ತಕಿ ಥಿಯೇಟರ್‌ನಲ್ಲಿ ಸೆಲೆಬ್ರೇಷನ್ ಜೋರಾಗಿ ಇರುತ್ತದೆ. ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಕೂಡ ಫಸ್ಟ್ ಡೇ ಬೆಳ್ಳಂಬೆಳಗ್ಗೆ ಆಯ್ದ ಥಿಯೇಟರ್‌ಗಳಿಗೆ ಭೇಟಿ ಕೊಟ್ಟು ಅಭಿಮಾನಿಗಳ ಜೊತೆ ಸಿನಿಮಾ ವೀಕ್ಷಿಸಲಿದ್ದಾರೆ.

  ಶಿವಣ್ಣನ 125ನೇ ಸಿನಿಮಾ 'ವೇದ'

  ಶಿವಣ್ಣನ 125ನೇ ಸಿನಿಮಾ 'ವೇದ'

  ಭಜರಂಗಿ, ವಜ್ರಕಾಯ, ಭಜರಂಗಿ- 2 ನಂತರ ಎ. ಹರ್ಷ ಹಾಗೂ ಶಿವಣ್ಣ ಕಾಂಬಿನೇಷನ್‌ನಲ್ಲಿ ಬರ್ತಿರೋ 4ನೇ ಸಿನಿಮಾ 'ವೇದ'. ಇನ್ನು ಇದು ಸೆಂಚುರಿ ಸ್ಟಾರ್ ಕರಿಯರ್‌ನ 125ನೇ ಸಿನಿಮಾ ಎನ್ನುವುದು ವಿಶೇಷ. ಗೀತಾ ಪಿಕ್ಚರ್ಸ್ ಬ್ಯಾನರ್‌ನಲ್ಲಿ ಸ್ವತಃ ಹ್ಯಾಟ್ರಿಕ್ ಹೀರೊ ಸಿನಿಮಾ ನಿರ್ಮಿಸಿದ್ದಾರೆ. ಜೀ ಸಂಸ್ಥೆ ಕೈ ಜೋಡಿಸಿದೆ.

  English summary
  Shivarajkumar Starrer Vedha advance booking has started. A. harsha Directed Vedha is slated for December 23 Release. Know more.
  Sunday, December 18, 2022, 19:34
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X