For Quick Alerts
  ALLOW NOTIFICATIONS  
  For Daily Alerts

  ಲಾಕ್‌ಡೌನ್ ಸಮಯದಲ್ಲಿ ಶಿವಣ್ಣ ಪ್ರತಿದಿನ ತಪ್ಪದೆ ಮಾಡುವ ಕಾರ್ಯ

  |

  ಇನ್ನೆರಡು ತಿಂಗಳು ಕಳೆದರೆ ಶಿವರಾಜ್‌ ಕುಮಾರ್ ಅವರಿಗೆ 58 ವರ್ಷ ವಯಸ್ಸಾಗುತ್ತದೆ. ಈಗಲೂ ಶಿವರಾಜ್ ಕುಮಾರ್ ಅವರ ಫಿಟ್‌ನೆಸ್ ಯುವಕರನ್ನೂ ನಾಚಿಸುವಂತಿದೆ.

  ತಮ್ಮ ಕನಸಿನ ಚಿತ್ರಕ್ಕೆ ರಶ್ಮಿಕಾ ಬೇಕು ಅಂದ್ರು ಚಿರಂಜೀವಿ | Chiranjeevi | Rashmika mandanna

  60 ವರ್ಷಕ್ಕೆ ಸನಿಹವಾದರೂ ಸಹ ಇನ್ನೂ ಯುವಕರನ್ನು ನಾಚಿಸುವಂತೆ ನೃತ್ಯ ಮಾಡುತ್ತಾರೆ, ಫೈಟ್ ದೃಶ್ಯಗಳಲ್ಲಿ ಭಾಗವಹಿಸುತ್ತಾರೆ. ದಣಿವಿಲ್ಲದೆ ಹಲವು ಶೆಡ್ಯೂಲ್‌ಗಳ ಚಿತ್ರೀಕರಣದಲ್ಲಿ ಭಾಗವಹಿಸುತ್ತಾರೆ.

  ಶಿವಣ್ಣ ಅವರ ಆರೋಗ್ಯದ ಗುಟ್ಟೇನು, ಅವರು ಮಾಡುವ ವ್ಯಾಯಾಮವೇನು, ತಿನ್ನುವ ಆಹಾರವೇನು? ಹೀಗೆ ಹಲವು ಅನುಮಾನುಗಳು ಅವರ ಅಭಿಮಾನಿಗಳಿಗಿದೆ. ಇವಕ್ಕೆಲ್ಲಾ ಉತ್ತರವೆಂಬಂತೆ ಶಿವಣ್ಣ ಇಂದು ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ.

  ವ್ಯಾಯಾಮ ಮರೆತಿಲ್ಲ ಶಿವರಾಜ್ ಕುಮಾರ್

  ವ್ಯಾಯಾಮ ಮರೆತಿಲ್ಲ ಶಿವರಾಜ್ ಕುಮಾರ್

  ಪ್ರಸ್ತುತ ಲಾಕ್‌ಡೌನ್‌ ನಿಂದ ಮನೆಯಲ್ಲಿರುವ ಶಿವರಾಜ್ ಕುಮಾರ್ ಅವರು, ಮನೆಯಲ್ಲಿದ್ದರೂ ಸುಮ್ಮನೆ ಕೂತಿದ್ದರೂ ಸಹ ಫಿಟ್‌ನೆಸ್, ವ್ಯಾಯಾಮ ಮರೆತಿಲ್ಲವಂತೆ. ಸೀಮಿತ ಸ್ಥಳದಲ್ಲಿಯೇ, ಸರಳವಾದ ವ್ಯಾಯಾಮದ ಮೂಲಕ ಫಿಟ್‌ನೆಸ್ ಮೇಂಟೇನ್ ಮಾಡುತ್ತಿದ್ದಾರೆ ಶಿವರಾಜ್ ಕುಮಾರ್.

  ಪ್ರತಿದಿನವೂ ತಪ್ಪದೆ ಸೈಕ್ಲಿಂಗ್ ಮಾಡುವ ಶಿವರಾಜ್‌ ಕುಮಾರ್

  ಪ್ರತಿದಿನವೂ ತಪ್ಪದೆ ಸೈಕ್ಲಿಂಗ್ ಮಾಡುವ ಶಿವರಾಜ್‌ ಕುಮಾರ್

  ಜಿಮ್‌ಗಳೆಲ್ಲಾ ಬಾಗಿಲು ಹಾಕಿಕೊಂಡಿರುವ ಈ ಸಮಯದಲ್ಲಿ ಶಿವರಾಜ್‌ ಕುಮಾರ್ ಅವರು ತಮ್ಮ ಮನೆಯ ಕಾಂಪೌಂಡ್ ಒಳಗಡೆಯೇ ಸೈಕ್ಲಿಂಗ್ ಮಾಡುತ್ತಿದ್ದಾರೆ. ಇದನ್ನು ಒಂದು ದಿನವೂ ತಪ್ಪದೆ ಮಾಡುತ್ತಿದ್ದಾರಂತೆ ಶಿವರಾಜ್‌ ಕುಮಾರ್.

  ಕೊರೊನಾ ವಿರುದ್ಧ ಜಾಗೃತಿ ಮೂಡಿಸುವ ಕಾರ್ಯ

  ಕೊರೊನಾ ವಿರುದ್ಧ ಜಾಗೃತಿ ಮೂಡಿಸುವ ಕಾರ್ಯ

  ಶಿವರಾಜ್ ಕುಮಾರ್ ಅವರು ಕೊರೊನಾ ಲಾಕ್‌ಡೌನ್ ನಿಂದಾಗಿ ಮನೆಯಲ್ಲಿಯೇ ಉಳಿದಿದ್ದಾರೆ. ಅಷ್ಟೆ ಅಲ್ಲದೆ ಕೊರೊನಾ ವಿರುದ್ಧ ಜಾಗೃತಿ ಮೂಡಿಸುವ ಕಾರ್ಯವನ್ನೂ ಮಾಡುತ್ತಿದ್ದಾರೆ. ಕೊರೊನಾ ಹೋರಾಟಕ್ಕೆ ಸಹಾಯವನ್ನೂ ಶಿವರಾಜ್ ಕುಮಾರ್ ಮಾಡುತ್ತಿದ್ದಾರೆ.

  ಹಲವು ಸಿನಿಮಾಗಳಲ್ಲಿ ನಟಿಸಲಿದ್ದಾರೆ ಶಿವಣ್ಣ

  ಹಲವು ಸಿನಿಮಾಗಳಲ್ಲಿ ನಟಿಸಲಿದ್ದಾರೆ ಶಿವಣ್ಣ

  ಲಾಕ್‌ಡೌನ್ ಮುಗಿದ ಕೂಡಲೇ ಸಾಲು-ಸಾಲು ಸಿನಿಮಾಗಳಲ್ಲಿ ಶಿವರಾಜ್ ಕುಮಾರ್ ನಟಿಸಲಿದ್ದಾರೆ. ತಮಿಳಿನ ಅಸುರನ್ ಸಿನಿಮಾದ ಕನ್ನಡ ರೀಮೇಕ್‌ನಲ್ಲಿ ಶಿವರಾಜ್ ಕುಮಾರ್ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಇದರ ಜೊತೆಗೆ ತೆಲುಗಿನ ರಾಮ್ ಧುಲಿಪುಡಿ ನಿರ್ದೇಶನದ ಸಿನಿಮಾದಲ್ಲೂ ಶಿವಣ್ಣ ನಟಿಸಲಿದ್ದಾರೆ.

  English summary
  Actor Shivraj Kumar shared cycling video in Instagram said this is his daily routine. He is 57 and still fit and fine.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X