»   » ಶಿವಣ್ಣ ಕೈಯ್ಯಲ್ಲಿ ನಾಲ್ಕು ವರ್ಷಕ್ಕಾಗುವಷ್ಟು ಚಿತ್ರಗಳು

ಶಿವಣ್ಣ ಕೈಯ್ಯಲ್ಲಿ ನಾಲ್ಕು ವರ್ಷಕ್ಕಾಗುವಷ್ಟು ಚಿತ್ರಗಳು

Posted By:
Subscribe to Filmibeat Kannada

ಈಗ ಕನ್ನಡದ ಮೋಸ್ಟ್ ಬಿಜಿ ಸ್ಟಾರ್ ಯಾರು ಅಂತ ಹುಡುಕಿದರೆ ಅದು ಸ್ಯಾಂಡಲ್ ವುಡ್ ಕಿಂಗ್ ಶಿವಣ್ಣ. ಸತತವಾಗಿ ಐದಾರು ಸಿನಿಮಾಗಳು ಹ್ಯಾಟ್ರಿಕ್ ಹೀರೋಗಾಗಿ ಕಾಯುತ್ತಿವೆ. ಆದರೆ ಎಲ್ಲೂ ಎಡವದೇ ಒಂದಾದ ನಂತರ ಮತ್ತೊಂದು ಸಿನಿಮಾ ಮಾಡುವತ್ತ ಹೆಜ್ಜೆ ಇಡುತ್ತಿದ್ದಾರೆ.

ವರ್ಷಕ್ಕೆ ಐದಾರು ಸಿನಿಮಾ ಶೂಟಿಂಗ್ ನಲ್ಲಿ ಬಿಸಿ ಇರುತ್ತಿದ್ದ ಶಿವಣ್ಣ ಈಗ ಒಂದಾದ ನಂತರ ಮತ್ತೊಂದು ಸಿನಿಮಾ ಬಗ್ಗೆ ತಲೆ ಕೆಡಿಸಿಕೊಳ್ತಿದ್ದಾರೆ. ಹುಣಸೆ ಮುಪ್ಪಾದರೂ ಹುಳಿಮುಪ್ಪೆ ಅನ್ನೋ ಹಾಗೆ ಶಿವಣ್ಣನ ಸಿನಿಮಾಗಳು ಸೋತರೂ ನಿರ್ದೇಶಕರಿಗೆ ನಿರ್ಮಾಪಕರಿಗೆ ಶಿವಣ್ಣನಿಗೆ ಸಿನಿಮಾ ಮಾಡ್ಬೇಕು ಅನ್ನೋ ಆಸೆ ಇದ್ದೇ ಇರುತ್ತೆ.

ಇದರ ನಡುವೆ ಮತ್ತೊಂದಷ್ಟು ನಿರ್ಮಾಪಕರು ಶಿವಣ್ಣನಿಗೆ ಸಿನಿಮಾ ಮಡೋಕೆ ಕಾತುರರಾಗಿದ್ದಾರೆ. ಆದರೆ ಹ್ಯಾಟ್ರಿಕ್ ಹೀರೋ 52 ಏಜ್ ನಲ್ಲೂ ಯಂಗ್ ಹೀರೋಗಳಿಗಿಂತ ಚಾರ್ಮಿಂಗ್ ಆಗಿ ಮಿಂಚ್ತಿದ್ದು ಫುಲ್ ಬಿಜಿಯಾಗಿದ್ದಾರೆ.

ಈಗಾಗ್ಲೇ ಇರೋ ಸಿನಿಮಾಗಳ ಜೊತೆ ಭಜರಂಗಿ ಗೆಲ್ತಿದ್ದ ಹಾಗೆ ಮತ್ತೊಂದಷ್ಟು ನಿರ್ಮಾಪಕರು ಶಿವಣ್ಣನ ನಂಬರ್ ಹುಡುಕ್ತಿದ್ದಾರೆ. ಸದ್ಯ ಶಿವಣ್ಣನ ಕೈಲಿರೋ ಸಾಲು ಸಾಲು ಸಿನಿಮಾಗಳನ್ನ ನೋಡ್ಕೊಂಡ್ ಬರೋಣ.

'ಬಾದ್ ಷಾ' ಆಗ್ತಿದ್ದಾರೆ ಸ್ಯಾಂಡಲ್ ವುಡ್ ಕಿಂಗ್

'ಮೈಲಾರಿ' ಚಿತ್ರದ ನಂತರ ಆರ್.ಚಂದ್ರು ಶಿವಣ್ಣನನ್ನ 'ಬಾದ್ ಷಾ'ನ ರೂಪದಲ್ಲಿ ತೋರಿಸೋಕೆ ಹೊರಡ್ತಿದ್ದಾರೆ. 'ಬಾದ್ ಷಾ' ಅನ್ನೋ ಟೈಟಲ್ ಸ್ಯಾಂಡಲ್ ವುಡ್ ಕಿಂಗ್ ಶಿವಣ್ಣನಿಗೆ ಸೂಪರ್ ಅಂತ ಈಗಾಗ್ಲೇ ಗಾಂಧಿನಗರ ಹೇಳ್ತಿದೆ.

ಮತ್ತೆ ಒಂದಾಗುತ್ತಿರುವ ಅಣ್ಣ ತಂಗಿ

ಸ್ಯಾಂಡಲ್ವುಡ್ ನ 'ಅಣ್ಣ ತಂಗಿ' ಮತ್ತೆ ಒಂದಾಗ್ತಿರೋ ಚಿತ್ರ ಕೂಡ ಸದ್ಯದಲ್ಲೇ ಶುರುವಾಗಲಿದೆ. ಈ ಚಿತ್ರದ ಟೈಟಲ್ ಇನ್ನೂ ಪಕ್ಕಾ ಆಗದಿದ್ರೂ 'ಅಣ್ಣ ತಂಗಿ' ಸೆಂಟಿಮೆಂಟ್ ನಲ್ಲಿ ಶಿವಣ್ಣ-ರಾಧಿಕಾರನ್ನ ನೋಡೋ ಕಾತರ ಅಭಿಮಾನಿಗಳಿಗೆ ಶುರುವಾಗಿದೆ.

ಶಿವಣ್ಣನಿಗಾಗಿ ಕಾಯ್ತಿದೆ ಮನಮೋಹಕ

'ಮನಮೋಹಕ ಸಿನಿಮಾ ಒಂದು ಶಿವಣ್ಣನಿಗಾಗಿ ಕಾಯ್ತಿದೆ. ಮೊದಲ ಸಿನಿಮಾದಲ್ಲೇ ಭರ್ಜರಿ ಯಶಸ್ವಿ ನಿರ್ದೇಶಕನಾದ ಸಿಂಪಲ್ ಸುನಿ ನಿರ್ದೇಶನದಲ್ಲಿ ಬರ್ತಿರೊ ಚಿತ್ರ ಇದು. ಅಂದಹಾಗೆ ಈ ಸಿನಿಮಾದ ಟೈಟಲ್ಲೇ 'ಮನಮೋಹಕ'.

ಕಬೀರನಿಗಾಗಿ ಶಿವಣ್ಣ ಕಾತುರ

ಶಿವಣ್ಣ ಬಹಳ ಇಷ್ಟಪಟ್ಟು ಮಾಡಲಿರೋ ಚಿತ್ರ 'ಕಬೀರ'. ಈ ಮಹತ್ವಾಕಾಂಕ್ಷೆಯ 'ಕಬೀರ' ಚಿತ್ರದಲ್ಲಿ ಅಭಿನಯಿಸೋಕೆ ಸ್ವತಃ ಶಿವಣ್ಣ ಕಾತುರರಾಗಿದ್ದಾರೆ.

ಬೆಳ್ಳಿತೆರೆ ಬೆಳಗಲಿರುವ 'ಬೆಳ್ಳಿ'

ಈಗಾಗ್ಲೇ ಶಿವಣ್ಣ ಮತ್ತೊಂದು ಸಿನಿಮಾವನ್ನ ಒಪ್ಪಿಕೊಂಡಿದ್ದಾರೆ ಸಿನಿಮಾದ ಟೈಟಲ್ 'ಬೆಳ್ಳಿ'. ಈ ಬೆಳ್ಳಿ ಯಾವಾಗ ಬೆಳ್ಳಿತೆರೆಗೆ ಬರುತ್ತೋ ಗೊತ್ತಿಲ್ಲ.

ನಿರ್ದೇಶಕ ಹರ್ಷ ಜೊತೆಗೆ ಮತ್ತೊಂದು?

ಇದರ ಜೊತೆಗೆ ನಾಲ್ಕು ಸೋಲಿನ ನಂತರ ಒಂದು ಭರ್ಜರಿ ಗೆಲುವು ತಂದುಕೊಟ್ಟಿರೋ 'ಭಜರಂಗಿ' ನಿರ್ದೇಶಕ ಹರ್ಷ ಮೇಲಿ ನಂಬಿಕೆಯಿಂದ ಮತ್ತೊಂದು ಸಿನಿಮಾಗೆ ಓಕೆ ಅಂದ್ರೂ ಅಚ್ಚರಿಯಿಲ್ಲ.

ಆರ್ಯನ್ ಸಹ ಬಹುನಿರೀಕ್ಷಿತ ಚಿತ್ರ

ಈ ಎಲ್ಲ ಸಿನಿಮಾಗಳು ಬರೋಕೂ ಮೊದಲು 'ಆರ್ಯನ್' ಚಿತ್ರ ತೆರೆಗೆ ಬರ್ಬೇಕು. ವಿಭಿನ್ನ ಗೆಟಪ್ ಮತ್ತು ಇಮೇಜ್ ನೀಡಲಿರೋ ಆರ್ಯನ್ ಕೂಡ ಬಹು ನಿರೀಕ್ಷಿತ ಚಿತ್ರ.

English summary
After 'Bhajarangi' gets rave reviews Century Star Shivrajkumar have been becomes busy for four years. The actor gets handful of offers from Sandalwood. Belli, Kabeera, Manamohaka, Anna Tangi, Baadshah are Shivanna's upcoming movies. At present he is busy in Aaryan.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada