»   » ಬಾಕ್ಸ್ ಆಫೀಸಲ್ಲಿ ಶಿವಣ್ಣ 'ಓಂ' ಭರ್ಜರಿ ಓಪನಿಂಗ್

ಬಾಕ್ಸ್ ಆಫೀಸಲ್ಲಿ ಶಿವಣ್ಣ 'ಓಂ' ಭರ್ಜರಿ ಓಪನಿಂಗ್

By: ಉದಯರವಿ
Subscribe to Filmibeat Kannada

ಹ್ಯಾಟ್ರಿಕ್ ಹೀರೋ, ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅಭಿನಯದ 'ಓಂ' ಚಿತ್ರದ ಮ್ಯಾಜಿಕ್ ತ್ರಿವೇಣಿ ಚಿತ್ರಮಂದಿರದಲ್ಲಿ ಮುಂದುವರೆದಿದೆ. ಆಗಸ್ಟ್ 2ರಂದು ಪ್ರೇಕ್ಷಕರ ಒತ್ತಾಯದ ಮೇರೆಗೆ ಈ ಚಿತ್ರ ಪುನರ್ ಬಿಡುಗಡೆಯಾಗಿದ್ದು ಭರ್ಜರಿ ಓಪನಿಂಗ್ ಪಡೆದುಕೊಂಡಿದೆ.

ಮೂರು ದಿನಗಳಲ್ಲಿ 'ಓಂ' ಚಿತ್ರ ಒಟ್ಟಾರೆ ರು.3.56 ಲಕ್ಷ ಗಳಿಸಿದೆ. ಕೇಸ್ ನಂ.18/9, ಸಿಲ್ಕ್ ಸಖತ್ ಹಾಟ್ ಸೇರಿದಂತೆ ಹಲವು ಹೊಸ ಚಿತ್ರಗಳ ನಡುವೆಯೂ ಓಂ ಚಿತ್ರ ಪೈಪೋಟಿ ನೀಡಿರುವುದು ವಿಶೇಷ ಎನ್ನುತ್ತಾರೆ ವಿತರಕ ಎನ್ ಕುಮಾರ್.

ರಿಯಲ್ ಸ್ಟಾರ್ ಉಪೇಂದ್ರ ಆಕ್ಷನ್ ಕಟ್ ಹೇಳಿರುವ ಈ ಚಿತ್ರ ಹಲವಾರು ಬಾರಿ ರೀ ರಿಲೀಸ್ ಆಗಿದೆ. ಈ ಮೂಲಕ ಅತಿ ಹೆಚ್ಚು ಪ್ರದರ್ಶನ ಕಂಡಿರುವ ಚಿತ್ರವಾಗಿಯೂ ದಾಖಲೆ ನಿರ್ಮಿಸಿದೆ. ಈ ಚಿತ್ರದ ಸ್ಯಾಟಲೈಟ್ ಹಕ್ಕುಗಳಿಗಾಗಿ ಈಗಲೂ ಡೀಲ್ ನಡೆಯುತ್ತಲೇ ಇದೆ. ಆದರೆ ಮಾರಾಟವಾದ ಬಗ್ಗೆ ಖಚಿತ ಮಾಹಿತಿ ಇಲ್ಲ.

Om film box office report


ಚಿತ್ರ ತೆರೆಕಂಡ (1995) ಹದಿನೆಂಟು ವರ್ಷಗಳಲ್ಲಿ 500ಕ್ಕೂ ಹೆಚ್ಚು ಪ್ರದರ್ಶನಗಳನ್ನು ಕಂಡಿರುವುದು ಓಂ ಚಿತ್ರದ ವಿಶೇಷ. ಉಪೇಂದ್ರ ಹಾಗೂ ಶಿವಣ್ಣ ಅವರ ವೃತ್ತಿಜೀವನದಲ್ಲಿ ತಿರುವು ನೀಡಿದ ಚಿತ್ರವಿದು. ಬಿಡುಗಡೆಯಾದಾಗಲೆಲ್ಲಾ ಅತ್ತ ಉಪ್ಪಿ ಇತ್ತ ಶಿವಣ್ಣ ಅಭಿಮಾನಿಗಳು ನೋಡುತ್ತಲೇ ಇದ್ದಾರೆ.

ಬೆಂಗಳೂರು ಭೂಗತ ಜಗತ್ತನ್ನು ಮೊಟ್ಟ ಮೊದಲ ಬಾರಿಗೆ ತೆರೆಗೆ ತಂದಂತಹ ಚಿತ್ರ ಓಂ. ಈ ಚಿತ್ರದಲ್ಲಿ ಉಪೇಂದ್ರ ಅವರು ರಿಯಲ್ ರೌಡಿಗಳನ್ನು ಬಳಸಿಕೊಂಡಿದ್ದರು. ಕುಖ್ಯಾತ ರೌಡಿಗಳಾದ ಜೇಡರಹಳ್ಳಿ ಕೃಷ್ಣಪ್ಪ, ಬೆಕ್ಕಿನ ಕಣ್ಣು ರಾಜೇಂದ್ರ, ಕೊರಂಗು ಮತ್ತು ತನ್ವೀರ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.

ಜೈಲಿನಲ್ಲಿದ್ದ ಎಷ್ಟೋ ಮಂದಿ ರೌಡಿಗಳು ಜಾಮೀನ ಮೇಲೆ ಹೊರಬಂದು ಈ ಚಿತ್ರದಲ್ಲಿ ನಟಿಸಿದ್ದು ವಿಶೇಷ. ಹಾಗಾಗಿ 'ಓಂ' ಚಿತ್ರಕ್ಕೆ ವಿವಾದವೂ ಸುತ್ತುಕೊಂಡಿತ್ತು. ಹಂಸಲೇಖ ಸಂಗೀತ ಸಂಯೋಜಿಸಿದ್ದ ಚಿತ್ರದ ಹಾಡುಗಳು ಜನಪ್ರಿಯವಾಗಿದ್ದವು. ಏ ದಿನಕರ... ಹಾಗೂ ಓ ಗುಲಾಬಿಯೆ...ಗಾನಗಂಧರ್ವ ಡಾ.ರಾಜ್ ಕುಮಾರ್ ಹಾಡಿದ ಹಾಡುಗಳು ಸೂಪರ್ ಹಿಟ್ ಆಗಿದ್ದವು.

1995ರಲ್ಲಿ ತೆರೆಕಂಡಿದ್ದ ಈ ಚಿತ್ರ ಹಿಂದಿ ಮತ್ತು ತೆಲುಗು ಭಾಷೆಗೆ ರೀಮೇಕ್ ಆಗಿದೆ. ರಾಮ್ ಗೋಪಾಲ್ ವರ್ಮಾ ಅವರ 'ಸತ್ಯ' ಚಿತ್ರದಲ್ಲಿ ನಮ್ಮ ಕನ್ನಡದ 'ಓಂ' ಚಿತ್ರದ ನೆರಳು ಸಾಕಷ್ಟಿದೆ. ಓಂ ಬಳಿಕ ಕನ್ನಡದಲ್ಲಿ ಸಾಕಷ್ಟು ಲಾಂಗು ಮಚ್ಚುಗಳ ಚಿತ್ರಗಳು ಬಂದವು.

English summary
Shivaraj Kumar starrer classic Om has done the magic once again. The movie, which was released once again on August 2, has made good business at the Box Office.
Please Wait while comments are loading...