'ಬಾಲಿಕಾ ವಧು' ಪ್ರತ್ಯೂಷಾ ಆತ್ಮಹತ್ಯೆಗೆ ಏನು ಕಾರಣ?
ಹಿಂದಿ ಕಿರುತೆರೆಯ ಜನಪ್ರಿಯ ಧಾರಾವಾಹಿ 'ಬಾಲಿಕಾ ವಧು' ಖ್ಯಾತಿಯ ಪ್ರತ್ಯೂಷಾ ಬ್ಯಾನರ್ಜಿ ಶುಕ್ರವಾರ(ಏಪ್ರಿಲ್ 01) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 24ವರ್ಷ ವಯಸ್ಸಿನ ನಟಿ ಪ್ರತ್ಯೂಷಾ ಅವರು ಮುಂಬೈನ ಕಂಡಿವಿಲಿಯ ಬಂಗೂರ್ ನಗರ್ ನ ಫ್ಲಾಟ್ ನಲ್ಲಿ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾರೆ.
ನೇಣು ಬಿಗಿದ ಸ್ಥಿತಿಯಲ್ಲಿದ್ದ ಪ್ರತ್ಯೂಷರನ್ನು ತಕ್ಷಣವೇ ಕೊಕಿಲಾಬೆನ್ ಅಂಬಾನಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಅಸ್ಪತ್ರೆಗೆ ಬರುವಷ್ಟರಲ್ಲೇ ಆಕೆ ಮೃತಪಟ್ಟಿದ್ದರು. [ಚಿತ್ರರಂಗಕ್ಕೆ ಕಾಡುತ್ತಿರುವ ಆತ್ಮಹತ್ಯೆ ಎಂಬ ಭೂತ!]

ಬಾಲಿಕಾ ವಧು ಧಾರಾವಾಹಿಯ ಆನಂದಿ ಪಾತ್ರದ ಮೂಲಕ ಮನೆ ಮಾತಾಗಿದ್ದ ಪ್ರತ್ಯೂಷಾ ಅವರು ಕೆಲಕಾಲದಿಂದ ಮಾನಸಿಕ ಖಿನ್ನತ ಅನುಭವಿಸುತ್ತಿದ್ದರು. ಇದಲ್ಲದೆ ಆಕೆಯ ತನ್ನ ಬಾಯ್ ಫ್ರೆಂಡ್ ರಾಹುಲ್ ರಾಜ್ ಸಿಂಗ್ ಜೊತೆ ಮನಸ್ತಾಪ ಮಾಡಿಕೊಂಡಿದ್ದರು ಎಂದು ತಿಳಿದು ಬಂದಿದೆ.[ಆಸ್ಕರ್ ವಿಜೇತ ನಟ ಆತ್ಮಹತ್ಯೆಗೆ ಶರಣು]
ಕಲರ್ಸ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಸಸುರಾಲ್ ಸಿಮಾರ್ ಕಾ' ಧಾರಾವಾಹಿಯಲ್ಲಿ ನಟಿಸುತ್ತಿದ್ದ ಪ್ರತ್ಯೂಷಾ ತನ್ನ ಬಾಯ್ ಫ್ರೆಂಡ್ ರಾಹುಲ್ ಜೊತೆ ಮದುವೆಯಾಗುವುದಾಗಿ ಹೇಳಿಕೊಂಡಿದ್ದರು. ರಿಯಾಲಿಟಿ ಶೋ ಬಿಗ್ ಬಾಸ್ 7ರಲ್ಲೂ ಕೂಡಾ ಪ್ರತ್ಯೂಷಾ ಭಾಗಿಯಾಗಿದ್ದರು.[ಜಿಯಾಖಾನ್ ಸಾವಿನ ಪ್ರಕರಣ ಎಫ್ ಬಿಐ ತನಿಖೆಗೆ?]
ಆಕೆಯ ಸಾವಿಗೆ ಇನ್ನೂ ಕಾರಣ ತಿಳಿದು ಬಂದಿಲ್ಲ. ಪ್ರೇಮ ವೈಫಲ್ಯವೇ ಕಾರಣ ಎಂದು ತಕ್ಷಣಕ್ಕೆ ಹೇಳಲಾಗದು, ಯಾವುದೇ ಸೂಸೈಡ್ ನೋಟ್ ಸಿಕ್ಕಿಲ್ಲ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.[ಜಾತಿ ವಿಷಬೀಜಕ್ಕೆ ಬಲಿಯಾದನೆ ಉದಯ್ ಕಿರಣ್?] ವಿಡಿಯೋ ಸುದ್ದಿ ಮುಂದಿದೆ ನೋಡಿ


Click it and Unblock the Notifications











