For Quick Alerts
  ALLOW NOTIFICATIONS  
  For Daily Alerts

  ಊರೆಲ್ಲಾ ಹಬ್ಬಿದ ಸುದ್ದಿ ಕಿವಿಗೆ ಬಿದ್ಮೇಲೆ, ನಾಗೇಂದ್ರ ಪ್ರಸಾದ್ ಹೆಂಡ್ತಿ ಸುಮ್ನಿದ್ರಾ?

  By Harshitha
  |

  'ಗೀತಸಾಹಿತಿ/ನಿರ್ದೇಶಕ ವಿ.ನಾಗೇಂದ್ರ ಪ್ರಸಾದ್-ಶುಭ ಪುಂಜ ಮದುವೆ ಆಗಿದ್ದಾರೆ' ಎಂಬ ಸುದ್ದಿ 'ಫೋಟೋ ಸಮೇತ' ನಿನ್ನೆ (ಅಕ್ಟೋಬರ್ 26) ಫೇಸ್ ಬುಕ್ ನಲ್ಲಿ ಸೆನ್ಸೇಷನ್ ಆಗಿತ್ತು.

  ಮದುವೆ ಫೋಟೋ ರಿಯಲ್ ಅಲ್ಲ, ರೀಲು ಅಂತ ವಿ.ನಾಗೇಂದ್ರ ಪ್ರಸಾದ್ ಮತ್ತು ಶುಭ ಪುಂಜ ಬಾಯಿ ಬಿಟ್ಟು ಹೇಳಿದ್ಮೇಲೆ ಗಾಸಿಪ್ ಪಂಡಿತರ ಬಾಯಿಗೆ ಬೀಗ ಬಿತ್ತು. ಆದ್ರೆ, ಅಷ್ಟರೊಳಗೆ ಈ ವಿಚಾರ ವಿ.ನಾಗೇಂದ್ರ ಪ್ರಸಾದ್ ರವರ ಪತ್ನಿ ಕಿವಿಗೂ ಬಿದ್ದಿತ್ತು. [ಫೋಟೋ: ನಟಿ ಶುಭ ಪುಂಜ ಜೊತೆ ವಿ.ನಾಗೇಂದ್ರ ಪ್ರಸಾದ್ ಮದುವೆ?]

  'ತಮ್ಮ ಪತಿ ಮತ್ತೊಂದು ಮದುವೆ ಆಗಿದ್ದಾರೆ' ಅಂದ್ರೆ ಯಾರ್ ತಾನೆ ಸುಮ್ನೆ ಇರ್ತಾರೆ ಹೇಳಿ..? ಸುದ್ದಿ ಕೇಳಿದ ಕೂಡಲೆ ವಿ.ನಾಗೇಂದ್ರ ಪ್ರಸಾದ್ ರವರ ಧರ್ಮಪತ್ನಿಗೂ ಶಾಕ್ ಆಗಿದೆ. ಅಷ್ಟೇ ಯಾಕೆ, ವಿ.ನಾಗೇಂದ್ರ ಪ್ರಸಾದ್ ರವರ ತಾಯಿಗೂ ಗಾಬರಿ ಆಗಿದೆ. ತಕ್ಷಣ ಇಬ್ಬರೂ ಫೋನ್ ಮಾಡಿದ್ದಾರೆ. ಅಸಲಿ ಸಂಗತಿ ತಿಳಿಸಿ, ಇಬ್ಬರಿಗೂ ಸಮಾಧಾನ ಮಾಡುವ ಹೊತ್ತಿಗೆ ವಿ.ನಾಗೇಂದ್ರ ಪ್ರಸಾದ್ ರವರಿಗೆ ಸಾಕು ಸಾಕಾಗಿ ಹೋಯ್ತಂತೆ.!

  ಪ್ರೆಸ್ ಮೀಟ್ ಕರೆದಿದ್ದ ವಿ.ನಾಗೇಂದ್ರ ಪ್ರಸಾದ್

  ಪ್ರೆಸ್ ಮೀಟ್ ಕರೆದಿದ್ದ ವಿ.ನಾಗೇಂದ್ರ ಪ್ರಸಾದ್

  ಸಿನಿಮಾಗಾಗಿ ನಡೆದ ಮದುವೆ ಸನ್ನಿವೇಶದ ಫೋಟೋದಿಂದ ಹಬ್ಬಿದ ತಪ್ಪು ಮಾಹಿತಿಗೆ ಫುಲ್ ಸ್ಟಾಪ್ ಇಡಲು ಇಂದು (ಅಕ್ಟೋಬರ್ 27) ರೇಣುಕಾಂಬ ಸ್ಟುಡಿಯೋದಲ್ಲಿ ವಿ.ನಾಗೇಂದ್ರ ಪ್ರಸಾದ್ ಪ್ರೆಸ್ ಮೀಟ್ ಕರೆದಿದ್ದರು. ಈ ವೇಳೆ, ತಮ್ಮ ಹೊಸ ಸಿನಿಮಾ, ಮದುವೆ ಸನ್ನಿವೇಶ, ಮನೆಯಲ್ಲಿ ಆದ ಗೊಂದಲ-ಗಾಬರಿ ಕುರಿತು ವಿ.ನಾಗೇಂದ್ರ ಪ್ರಸಾದ್ ಮನಬಿಚ್ಚಿ ಮಾತನಾಡಿದರು.

  ನಿನ್ನೆ ದೇವಸ್ಥಾನದಲ್ಲಿ ನಡೆದ ಶೂಟಿಂಗ್

  ನಿನ್ನೆ ದೇವಸ್ಥಾನದಲ್ಲಿ ನಡೆದ ಶೂಟಿಂಗ್

  ''ಬೆಳಗ್ಗೆ 6 ಗಂಟೆಗೆ ದೇವಸ್ಥಾನವೊಂದರಲ್ಲಿ ಶೂಟಿಂಗ್ ಮಾಡಿದ ಫೋಟೋ ಅದು. ಮೇನ್ ರೋಡ್ ನಲ್ಲಿ ಆ ದೇವಸ್ಥಾನ ಇದಿದ್ರಿಂದ ದಾರಿಯಲ್ಲಿ ಹೋಗುವವರೆಲ್ಲಾ ಚಿತ್ರೀಕರಣವನ್ನ ನೋಡುತ್ತಿದ್ದರು. ಕೆಲವರು ಹತ್ತಿರ ಬಂದು ಸೆಲ್ಫಿ ಕ್ಲಿಕ್ ಮಾಡಿಕೊಳ್ಳುತ್ತಿದ್ದರು. ಕೆಲವರು ವಿಡಿಯೋ ಕೂಡ ಮಾಡುತ್ತಿದರು'' - ವಿ.ನಾಗೇಂದ್ರ ಪ್ರಸಾದ್, ಗೀತ ಸಾಹಿತಿ, ನಿರ್ದೇಶಕ

  ಅಂದುಕೊಂಡಿದ್ದು ಒಂದು, ಆಗಿದ್ದು ಇನ್ನೊಂದು

  ಅಂದುಕೊಂಡಿದ್ದು ಒಂದು, ಆಗಿದ್ದು ಇನ್ನೊಂದು

  ''ನಿಜ ಹೇಳ್ಬೇಕಂದ್ರೆ, ಸಿನಿಮಾದಲ್ಲಿ ನಾನು 'ಶುಭ ಗಂಡ'ನ ಪಾತ್ರ ಮಾಡುತ್ತಿದ್ದೀನಿ ಎಂಬ ಸಂಗತಿ ರಿವೀಲ್ ಮಾಡಬಾರದು ಅಂತ ಅಂದುಕೊಂಡಿದ್ದೆ. ಆದ್ರೆ, ಈಗ ಆಗಿರುವುದು ಹೀಗೆ'' - ವಿ.ನಾಗೇಂದ್ರ ಪ್ರಸಾದ್, ಗೀತ ಸಾಹಿತಿ, ನಿರ್ದೇಶಕ

  ಸೋಷಿಯಲ್ ಮೀಡಿಯಾ ಅವಾಂತರ

  ಸೋಷಿಯಲ್ ಮೀಡಿಯಾ ಅವಾಂತರ

  ''ದೇವಸ್ಥಾನದಿಂದ ನಾವು ನೈಸ್ ರೋಡ್ ಗೆ ಹೋಗುವ ಹೊತ್ತಿಗೆ ಫೇಸ್ ಬುಕ್ ಹಾಗೂ ವಾಟ್ಸ್ ಆಪ್ ನಲ್ಲಿ ಫೋಟೋಗಳು ಶೇರ್ ಆಗ್ಬಿಟ್ಟಿದೆ. ಇದರ ಜೊತೆ ತಪ್ಪು ಸಂದೇಶ ಕೂಡ ಹರಿದಾಡಿದೆ'' - ವಿ.ನಾಗೇಂದ್ರ ಪ್ರಸಾದ್, ಗೀತ ಸಾಹಿತಿ, ನಿರ್ದೇಶಕ

  ಮನೆಯಲ್ಲಿ ಗಾಬರಿ

  ಮನೆಯಲ್ಲಿ ಗಾಬರಿ

  ''ಸುಳ್ಳು ಸುದ್ದಿಗಳನ್ನ ನೋಡಿ, ನನ್ನ ತಾಯಿ ಗಾಬರಿಯಿಂದ ಫೋನ್ ಮಾಡಿದ್ದರು. ನನ್ನ ಹೆಂಡತಿ ಕಡೆಯಿಂದ ಕೂಡ ಫೋನ್ ಬಂತು. ಆಮೇಲೆ ಸತ್ಯ ಏನು ಅಂತ ಹೇಳಿದ ಮೇಲೆ ಎಲ್ಲರೂ ಸಮಾಧಾನಗೊಂಡರು'' - ವಿ.ನಾಗೇಂದ್ರ ಪ್ರಸಾದ್, ಗೀತ ಸಾಹಿತಿ, ನಿರ್ದೇಶಕ

  ಗಿಮಿಕ್ ಮಾಡಲ್ಲ

  ಗಿಮಿಕ್ ಮಾಡಲ್ಲ

  ''ಪಬ್ಲಿಸಿಟಿಗಾಗಿ ಇದೆಲ್ಲ ಮಾಡಿದರು' ಎಂಬ ಮಾತುಗಳು ಕೂಡ ಇವೆ. ಪಬ್ಲಿಸಿಟಿಗೆ ಮಾಡುವುದಾದರೆ, ಇಂತಹ ಗಿಮಿಕ್ ಗಳನ್ನ ಮಾಡುವವನು ನಾನಲ್ಲ'' - ವಿ.ನಾಗೇಂದ್ರ ಪ್ರಸಾದ್, ಗೀತ ಸಾಹಿತಿ, ನಿರ್ದೇಶಕ

  'ಅಂಥವನು' ನಾನಲ್ಲ

  'ಅಂಥವನು' ನಾನಲ್ಲ

  ''ನಾನು ಫ್ಲೈಟ್ ನಲ್ಲಿ ಆಡಿಯೋ ರಿಲೀಸ್ ಮಾಡಿದಂಥವನು. ನೇಪಾಳದಲ್ಲಿ ಮುಹೂರ್ತ ಮಾಡಿದಂಥವನು. ಪಬ್ಲಿಸಿಟಿ ಅಂದ್ರೆ ಆ ತರಹ ಮಾಡುತ್ತೇನೆ ಹೊರತು ಹೆಣ್ಮಕ್ಕಳ ವೈಯುಕ್ತಿಕ ವಿಚಾರಕ್ಕೆ ಚ್ಯುತಿ ಬರುವ ಹಾಗೆ ಪಬ್ಲಿಸಿಟಿ ಮಾಡುವಂಥವನು ನಾನಲ್ಲ. ಅದರಿಂದ ನನ್ನ ಸಿನಿಮಾ ಗೆಲ್ಲಬೇಕಾಗಿಲ್ಲ'' - ವಿ.ನಾಗೇಂದ್ರ ಪ್ರಸಾದ್, ಗೀತ ಸಾಹಿತಿ, ನಿರ್ದೇಶಕ

  ಚಿತ್ರದ ಶೀರ್ಷಿಕೆ ಇನ್ನೂ ಫೈನಲ್ ಆಗಿಲ್ಲ

  ಚಿತ್ರದ ಶೀರ್ಷಿಕೆ ಇನ್ನೂ ಫೈನಲ್ ಆಗಿಲ್ಲ

  ''ಟೈಟಲ್ ಇನ್ನೂ ಫಿಕ್ಸ್ ಆಗಿಲ್ಲ. ಸದ್ಯಕ್ಕೆ 'ಕಥಾನಾಯಕ' ಎಂಬ ಟೈಟಲ್ ತಲೆಯಲ್ಲಿದೆ. ಆದ್ರೆ ಅದು ಬೇರೆಯವರ ಬಳಿ ಇರುವ ಕಾರಣ ಮಾತುಕತೆ ನಡೆಯುತ್ತಿದೆ'' - ವಿ.ನಾಗೇಂದ್ರ ಪ್ರಸಾದ್, ಗೀತ ಸಾಹಿತಿ, ನಿರ್ದೇಶಕ

  English summary
  Kannada Actress Shubha Punja-Director cum Lyricist V.Nagendra Prasad's wedding pic goes viral in Social Media. Based upon this issue, Lyricist V.Nagendra Prasad called Press Meet today (October 27) to clarify that the Picture was taken during the shooting of his directorial yet-to-be-titled film.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X