»   » ತಾರೆ ನಯನತಾರಾಗೆ ಶೋಕಾಸ್ ನೋಟೀಸ್

ತಾರೆ ನಯನತಾರಾಗೆ ಶೋಕಾಸ್ ನೋಟೀಸ್

Posted By:
Subscribe to Filmibeat Kannada
ದಕ್ಷಿಣ ಭಾರತದ ಸುರಸುಂದರ ನಟಿ ನಯನತಾರಾಗೆ ವಿವಾದಗಳು ಹೊಸದಲ್ಲ. ಈ ಬಾರಿಯೂ ಹೊಸ ವಿವಾದಕ್ಕೆ ಸಿಲುಕಿದ್ದಾರೆ. ಚೆನ್ನೈನಲ್ಲಿ ನಡೆದ ಸಿನಿಮಾ ಶತಮಾನೋತ್ಸವಕ್ಕೆ ಹಾಜರಾಗಲಿಲ್ಲ ಎಂಬ ಕಾರಣಕ್ಕೆ ದಕ್ಷಿಣ ಭಾರತ ಚಲನಚಿತ್ರ ವಾಣಿಜ್ಯ ಮಂಡಳಿ ಶೋಕಾಸ್ ನೋಟೀಸ್ ಜಾರಿ ಮಾಡಿದೆ.

ಈ ವರ್ಣರಂಜಿತ ಕಾರ್ಯಕ್ರಮವನ್ನು ವೈಭವೋಪೇತವಾಗಿ ನಡೆಸಬೇಕೆಂದು ತಮಿಳು ನಿರ್ಮಾಪಕ ಸಂಘ ಸರಿಸುಮಾರು ರು.30 ಕೋಟಿ ಖರ್ಚು ಮಾಡಿತ್ತು. ಈ ವರ್ಣರಂಜಿತ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಾಗಿ ನಯನತಾರಾ ಮಾತುಕೊಟ್ಟಿದ್ದಂತೆ. ಆದರೆ ಆಕೆ ಕೊನೆ ಗಳಿಗೆಯಲ್ಲಿ ಕೈ ಎತ್ತಿದ್ದಾರೆ.

ಮಾತು ತಪ್ಪಿದ ನಯನತಾರಾಗೆ ದಕ್ಷಿಣ ಭಾರತ ಚಲನಚಿತ್ರ ವಾಣಿಜ್ಯ ಮಂಡಲಿ ಶೋಕಾಸ್ ನೋಟೀಸ್ ಜಾರಿ ಮಾಡಿದೆ. ಆದರೆ ಈ ಬಗ್ಗೆ ನಯನಿ ಇನ್ನೂ ಪ್ರತಿಕ್ರಿಯಿಸಿಲ್ಲ. ಆಕೆಯ ಉತ್ತರದ ನಿರೀಕ್ಷೆಯಲ್ಲಿ ಚಲನಚಿತ್ರ ವಾಣಿಜ್ಯ ಮಂಡಲಿ ಇದೆ.

ಮುಂದೆಯೂ ತಾವು ಭಿನ್ನ ಪಾತ್ರಗಳಲ್ಲಿ ಅಭಿನಯಿಸಲು ಬಯಸುತ್ತೇವೆ. ಒಂದೇ ರೀತಿಯ ಪಾತ್ರಗಳನ್ನು ಮಾಡುವುದರಿಂದ ಪ್ರೇಕ್ಷಕರು ತಮ್ಮನ್ನು ಒಪ್ಪುವುದಿಲ್ಲ ಎನ್ನುವ ನಯನಿ, ತಮಿಳು ನಟ ಆರ್ಯ ಕೈಹಿಡಿಯಲಿದ್ದಾರೆ ಎಂಬ ಸುದ್ದಿಯೂ ಇದೆ. ಇದಕ್ಕೆ ಪುರಾವೆ ಎಂಬಂತೆ ಇವರಿಬ್ಬರ ಮದುವೆಯ ಮಮತೆಯ ಕರೆಯೋಲೆ ಮಾಧ್ಯಮಗಳ ಕೈಸೇರಿದೆ. (ಏಜೆನ್ಸೀಸ್)

English summary
Nayanatara once again courted controversy. This time she was served show cause notice by South Indian Film Chamber for not attending 100 yrs of Indian cinema celebrations at Chennai after promising to attend. Nayan is notorious for not attending film functions. It has to be seen how Nayan will respond to the show cause.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada