»   » ಆರ್ಯನ್ ಜೊತೆ ನಟಿ ನಯನತಾರಾ ಮದುವೆ

ಆರ್ಯನ್ ಜೊತೆ ನಟಿ ನಯನತಾರಾ ಮದುವೆ

By: ರವಿಕಿಶೋರ್
Subscribe to Filmibeat Kannada
ಕಡೆಗೂ ನಟಿ ನಯನತಾರಾ ಅವರಿಗೆ ಕಂಕಣಬಲ ಕೂಡಿಬಂದಿದೆ. ಪ್ರಭುದೇವ ಜೊತೆಗಿನ ಫ್ರೆಂಡ್ ಶಿಪ್ ಕಟ್ ಆದ ಮೇಲೆ ನಯನಿ ಒಂಟಿಯಾಗಿದ್ದರು. ಈಗ ಅವರ ಒಂಟಿ ಬಾಳು ಜಂಟಿಯಾಗುತ್ತಿದೆ. ತಮಿಳು ನಟ ಆರ್ಯ ಕೈಹಿಡಿಯಲಿದ್ದಾರೆ ಎಂಬ ಸುದ್ದಿ ಇದೆ.

ಇದಕ್ಕೆ ಪುರಾವೆ ಎಂಬಂತೆ ಇವರಿಬ್ಬರ ಮದುವೆಯ ಮಮತೆಯ ಕರೆಯೋಲೆ ಮಾಧ್ಯಮಗಳ ಕೈಸೇರಿದೆ. ಇದೇನು ನಿಜವಾಗಿಯೂ ಮದುವೆಯೋ ಅಥವಾ ಪಬ್ಲಿಸಿಟಿ ಗಿಮ್ಮಿಕ್ ಇರಬಹುದೆ? ಎಂಬ ಸಂದೇಹವೂ ನಯನತಾರಾ ಅಭಿಮಾನಿಗಳನ್ನು ಕಾಡುತ್ತಿದೆ.

ಸದ್ಯಕ್ಕೆ ನಯನತಾರಾ ಹಾಗೂ ಆರ್ಯ ಇಬ್ಬರೂ ಜೊತೆಯಾಗಿ ಒಂದೇ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಅದು ತಮಿಳಿನ ರಾಜಾ ರಾಣಿ ಎಂಬ ಚಿತ್ರ. ಈ ಚಿತ್ರದ ಆಮಂತ್ರಣ ಪತ್ರದಲ್ಲಿ "Arya weds Nayanthara" ಎಂದಿದೆ. ಇದಿಷ್ಟು ಬಿಟ್ಟರೆ ಆಮಂತ್ರಣ ಪತ್ರದಲ್ಲಿ ಮುಹೂರ್ತ, ದಿನಾಂಕಾ ಇನ್ನೇನು ಇಲ್ಲ.

ಇದು ಕೇವಲ ಪ್ರಚಾರ ತಂತ್ರ ಅಷ್ಟೇ ಎನ್ನುತ್ತದೆ ಚಿತ್ರತಂಡ. ಆದರೆ ತಮಾಷೆಗೂ ಒಂದು ಮಿತಿ ಬೇಡವೇ? ಎಂಬ ಮಾತುಗಳ ನಡುವೆ, ಆರ್ಯ ಹಾಗೂ ನಯನತಾರಾ ಮದುವೆಯಾಗುತ್ತಿರುವುದು ನಿಜ ಎನ್ನುವವರೂ ಇದ್ದಾರೆ.

ಇತ್ತೀಚೆಗೆ ಆರ್ಯ ಮಾತನಾಡುತ್ತಾ, "ಬಾಳಸಂಗಾತಿಯನ್ನು ಹುಡುಕುತ್ತಿದ್ದೇನೆ. ಆದರೆ ಸೂಕ್ತ ಸಂಗಾತಿಯನ್ನು ಹುಡುಕುವುದು ಕಷ್ಟ" ಎಂದಿದ್ದರು. ಅವರು ಮಾರ್ಮಿಕವಾಗಿ ನುಡಿದ್ದು, ಈಗ ಆಮಂತ್ರಣ ಪತ್ರಿಕೆಯ ಮೂಲಕ ಬಹಿರಂಗವಾಯಿತೇ? ಎಂಬ ಅನುಮಾನ ಎಲ್ಲರನ್ನೂ ಕಾಡುತ್ತಿದೆ.

English summary
Following many 'link-up' rumours between Arya and Nayanthara, the hot jodi in Kollywood now, here comes the shocker — they’re getting married! It says ‘Arya weds Nayanthara,’ and has a silhouette picture of the pair, that is currently acting in a film titled Raja Rani. 
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada