»   » ನಟಿ ಶ್ರುತಿ- ಚಂದ್ರಚೂಡ್ ಮದುವೆ: ಕಿರಿಕ್ ಶುರು

ನಟಿ ಶ್ರುತಿ- ಚಂದ್ರಚೂಡ್ ಮದುವೆ: ಕಿರಿಕ್ ಶುರು

Posted By:
Subscribe to Filmibeat Kannada

ಬೆಂಗಳೂರು: ಇತ್ತ ಹಿರಿಯ ನಟಿ ಶ್ರುತಿಯೇನೋ ತಮ್ಮ ಮಗಳಿಗೆ ಜನುಮ ದಿನದ ಕಾಣಿಕೆಯಾಗಿ ಹೊಸ ಅಂಕಲ್ ಅನ್ನು ತಂದುಕೊಟ್ಟರು. ಆದರೆ ಅತ್ತ ಅದೇ ಅಂಕಲ್ ತಮ್ಮ ಸ್ವಂತ ಮಗಳು ಮತ್ತು ಆಕೆಯ ತಾಯಿ ಯಾನೆ ತಮ್ಮ ಮೊದಲ ಪತ್ನಿಗೆ ಸರಿಯಾಗಿ ಕೈಕೊಟ್ಟಿದ್ದಾರೆ.

ಮದುವೆಯಾಗಿದ್ದರೂ, ವಿಚ್ಛೇದನ ಪಡೆಯದೆಯೇ ಹಸೆಮಣೆ ಏರಿರುವ ಶ್ರುತಿ ಅವರ ನವಪತಿ, ಮಾಜಿ ಪತ್ರಕರ್ತ ಚಂದ್ರಚೂಡ ಚಕ್ರವರ್ತಿ ಅವರು ಈಗ ಕಾನೂನು ತೊಡಕಿಗೆ ಸಿಕ್ಕಿದ್ದಾರೆ. ಕುತೂಹಲಕಾರಿ ಸಂಗತಿಯೆಂದರೆ ಹೀಗೆ ನಡುನೀರಿನಲ್ಲಿ ತಮ್ಮ ಕೈಬಿಟ್ಟಿರುವ ಚಂದ್ರಚೂಡಗೆ ಯಾವುದೇ ಕಾರಣಕ್ಕೂ ತಾವು ಡೈವೋರ್ಸ್ ನೀಡುವುದಿಲ್ಲ ಎಂದು ಚಂದ್ರಚೂಡರ ಮೊದಲ ಪತ್ನಿ ಘೋಷಿಸಿದ್ದಾರೆ.

ಅಂದಹಾಗೆ, ಚಂದ್ರಚೂಡ-ಮಂಜುಳ ಅವರದು ಸುಮಾರು 15 ವರ್ಷಗಳ ಲವ್ವಿಡವ್ವಿ, ಮದುವೆಯ ಬಂಧನ.

ಕಿರಿಕ್ ಜೋರು:

ಕನ್ನಡ ಚಿತ್ರರಂಗದ ಹಿರಿಯ ಅಭಿನೇತ್ರಿ ಶ್ರುತಿ ಅವರು ವಿವಾದಗಳ ನಡುವೆಯೇ ಗುರುವಾರ (ಜೂ.6) ಕೊಲ್ಲೂರಿನಲ್ಲಿ ಪತ್ರಕರ್ತ ಚಂದ್ರಚೂಡ ಚಕ್ರವರ್ತಿ ಅಲಿಯಾಸ್ ಚಂದ್ರಶೇಖರ್ ಜತೆ ನೂತನ ದಾಂಪತ್ಯಕ್ಕೆ ಕಾಲಿಟ್ಟಿದ್ದರು. ಆ ಸಂದರ್ಭದಲ್ಲಿ ತಮಗೂ ಇದು ಎರಡನೆಯ ಮದುವೆ ಎಂದು ಶ್ರುತಿಯಂತೆ ಹೇಳಿಕೊಂಡಿದ್ದರಾದರೂ ಆ ಮೊದಲ ಮದುವೆ ಬಗ್ಗೆ ಹೆಚ್ಚಿನ ವಿವರ ಕೊಟ್ಟಿರಲಿಲ್ಲ. ಮಾಧ್ಯಮಗಳು ಸಹ ನವದಾಂಪತ್ಯಕ್ಕೆ ಶುಭ ಹಾರೈಸುತ್ತಾ ಚಂದ್ರಚೂಡರ ಮೊದಲ ಮದುವೆ ಬಗ್ಗೆ ಕೆದಕಿರಲಿಲ್ಲ. ಆದರೆ ಈಗ ಅವರ ಮೊದಲ ಪತ್ನಿ ತಗಾದೆ ತೆಗೆದಿದ್ದಾರೆ.

ತಿರುಪತಿಯಲ್ಲಿ ಶ್ರುತಿ ಜತೆ ಮದುವೆ

ಗಮನಾರ್ಹವೆಂದರೆ ಚಂದ್ರಚೂಡ್ ಹೇಳುವಂತೆ ನಾಲ್ಕು ವರ್ಷಗಳ ಹಿಂದೆಯೇ ತಿರುಪತಿಯಲ್ಲಿ ಶ್ರುತಿ ಜತೆ ಅವರ ಮದುವೆ ನೆರವೇರಿದೆ. ಆದರೆ ಆಗಿನ್ನು ಶ್ರುತಿಗೆ ಡಿವೋರ್ಸ್ ಸಿಕ್ಕಿರಲಿಲ್ಲ. ಹಾಗಾಗಿ ಆ ಮದುವೆ ಬರಕತ್ತಾಗಿರಲಿಲ್ಲ. ಆದರೆ ಮೊನ್ನೆ ಹಠಕ್ಕೆ ಬಿದ್ದವರಂತೆ ಇಬ್ಬರೂ ಮದುವೆಯಾಗುವ ಮೂಲಕ ಸತಿಪತಿಗಳಾಗಿದ್ದಾರೆ. ಆಗ ಎದ್ದು ಕುಳಿತಿದ್ದಾರೆ ಚಂದ್ರಚೂಡರ ಮೊದಲ ಪತ್ನಿ.

ಯಾರಾಕೆ?

'ಚಂದ್ರಚೂಡ-ಶ್ರುತಿ ಅವರ ಮದುವೆ ಅನಧಿಕೃತ. ಚಂದ್ರಚೂಡ್ ನನಗೆ ತಾಳಿ ಕಟ್ಟಿರುವ ಗಂಡ. ಆತ ನನಗಿನ್ನೂ ಡಿವೋರ್ಸ್ ನೀಡಿಲ್ಲ. ಈ ಮದುವೆ ಆಗಿರುವ ವಿಚಾರ ಮಾಧ್ಯಮಗಳಿಂದ ತಿಳಿಯಿತು' ಎಂದು ಅವರಿಬ್ಬರ ಮದುವೆಗೆ ತಗಾದೆ ತೆಗೆಯುತ್ತಲೇ ಮಂಜುಳಾ, ತಮ್ಮ ಸ್ವವಿವರ ನೀಡಿದ್ದಾರೆ.
ಮೂಲತಃ ಅರಸೀಕೆರೆಯವರಾದ ಮಂಜುಳಾ ಹಿಂದಿ ಬಿಎಡ್ ಮಾಡುತ್ತಿದ್ದರು. ಆ ವೇಳೆ ಸ್ಥಳೀಯ ಪತ್ರಿಕೆಯೊಂದರಲ್ಲಿ ವರದಿಗಾರನಾಗಿ ಕೆಲಸ ಮಾಡುತ್ತಿದ್ದ ಚಂದ್ರಚೂಡ್ ಪರಿಚಯವಾಗಿ ಅದು ಪ್ರೇಮಕ್ಕೆ ತಿರುಗಿತ್ತು. ಮುಂದೆ ಹಳೇಬೀಡು ಸಮೀಪವಿರುವ ಪುಷ್ಪಗಿರಿ ಬೆಟ್ಟದಲ್ಲಿ 1999ರಲ್ಲಿ ಮದುವೆಯೂ ಆಯ್ತು.

ಚಂದ್ರಚೂಡಗೆ ಡೈವೋರ್ಸ್ ಕೊಡೋಲ್ಲ

'ನಾವಿಬ್ಬರೂ ಕೋರ್ಟ್ ಮೆಟ್ಟಿಲು ಹತ್ತೇ ಇಲ್ಲ. ಡೈವೋರ್ಸ್ ಪಡೆಯುವ ಪ್ರಶ್ನೆಯೇ ಇಲ್ಲ. ಇಷ್ಟಾದರೂ ಶ್ರುತಿ ಹೇಗೆ ಮದುವೆಗೆ ಒಪ್ಪಿಕೊಂಡರು ಎಂಬುದೇ ನನಗೆ ಗೊತ್ತಾಗುತ್ತಿಲ್ಲ. ನಾನು ಯಾವುದೇ ಕಾರಣಕ್ಕೂ ಚಂದ್ರಚೂಡಗೆ ಡೈವೋರ್ಸ್ ಕೊಡುವುದಿಲ್ಲ. ನನ್ನಿಂದ ಡಿವೋರ್ಸ್ ಪಡೆದಿದ್ದೇನೆ ಎಂದು ಚಂದ್ರಚೂಡ್, ಶ್ರುತಿಗೆ ಸುಳ್ಳು ಹೇಳಿರುವ ಸಾಧ್ಯತೆ ಇದೆ. ಇಲ್ಲ ಅಂದಿದ್ದರೆ ಆಕೆಯೂ ಮದುವೆ ಆಗುತ್ತಿರಲಿಲ್ಲ. ಜಾಣ್ಮೆ ಇರುವ ಹೆಂಗಸಾಗಿದ್ದರೆ ಡೈವೋರ್ಸ್ ಆಗಿರುವುದಕ್ಕೆ ಪೇಪರ್ ಕೇಳಬೇಕಿತ್ತು? ಡೈವೋರ್ಸ್ ಆಗದೇ ಮದುವೆ ಆಗೋಕೆ ಹೇಗೆ ಸಾಧ್ಯ?' ಎಂದು ಮಂಜುಳಾ ಮೂಲ ಪ್ರಶ್ನೆ ಎತ್ತಿದ್ದಾರೆ.

ಶ್ರುತಿ ಟ್ರೇಡ್ ಮಾರ್ಕಿನ ಕಣ್ಣೀರು

ಮಂಜುಳಾ-ಚಂದ್ರಚೂಡಗೆ ಈಗ 8ನೇ ತರಗತಿ ಓದುತ್ತಿರುವ ಮಗಳಿದ್ದಾರೆ. ಶಾಲೆಯೊಂದರಲ್ಲಿ ಮಂಜುಳಾ 6 ಸಾವಿರ ರೂಪಾಯಿ ಸಂಬಳಕ್ಕೆ ಕೆಲಸ ಮಾಡುತ್ತಿದ್ದಾರೆ. ಅದರ ಜತೆಗೆ ಮಕ್ಕಳಿಗೆ ಪಾಠ ಹೇಳಿ ಕೊಡುತ್ತಾ ಅವರೊಬ್ಬರೇ ಜೀವನದ ಬಂಡಿಯನ್ನು ಎಳೆಯುತ್ತಿದ್ದಾರೆ. 'ಮೂರೂವರೆ ವರ್ಷದಿಂದ ಮಗಳು ಹಾಗೂ ನನ್ನ ಖರ್ಚು ವೆಚ್ಚವನ್ನು ನಾನೇ ದುಡಿದು ನೋಡಿಕೊಳ್ಳುತ್ತಿದ್ದೇನೆ. ಮೂರು ತಿಂಗಳ ಹಿಂದೆ ಬಂದು ತಪ್ಪಾಯಿತು ನಾವಿಬ್ಬರು ಒಟ್ಟಿಗೆ ಇರೋಣ ಎಂದು ಹೇಳಿದ್ದರು. ಈಗ ನೋಡಿದ್ರೆ ಎರಡನೇ ಮದುವೆಯಾಗಿದ್ದಾರೆ. ಬೆಳೆದ ಮಗಳಿದ್ದಾಳೆ. ಶಾಲೆಯಲ್ಲಿ ನಿನ್ನ ಅಪ್ಪ ಮತ್ತೊಂದು ಮದುವೆಯಾಗಿದ್ದಾರೆ ಎಂದು ಕೇಳಿದರೆ ನನ್ನ ಮಗಳು ಏನು ಉತ್ತರ ಕೊಡಬೇಕು? ಜವಾಬ್ದಾರಿ ಇರುವ ಪತಿ ಮಾಡುವ ಕೆಲಸವೇ ಇದು? ಬೆಳೆದು ನಿಂತಿರುವ ಮಗಳಿರುವಾಗ ಅವರಿಗೆ ಎರಡನೇ ಮದುವೆ ಬೇಕಿತ್ತಾ?' ಎಂದು ಮಂಜುಳಾ ಅವರು ಶ್ರುತಿ ಟ್ರೇಡ್ ಮಾರ್ಕಿನ ಕಣ್ಣೀರು ಹಾಕಿದ್ದಾರೆ.

ಚಂದ್ರಚೂಡ ಹೇಳೋದೇನು?

ಮಂಜುಳಾರಿಂದ ಅಧಿಕೃತವಾಗಿ ವಿಚ್ಛೇದನ ಪಡೆದಿದ್ದೇನೆ. ಅಷ್ಟೇ ಅಲ್ಲ; ಆಕೆಯೇ ನನಗೆ ನಾನು ಮತ್ತೊಂದು ಮದುವೆ ಆಗುವುದಕ್ಕೆ ಅಡ್ಡಿಪಡಿಸುವುದಿಲ್ಲ ಎಂದು ಲಿಖಿತ ರೂಪದಲ್ಲಿ ಬರೆದುಕೊಟ್ಟಿದ್ದಾರೆ. ಹಾಗಾಗಿ ನನ್ನ, ಶ್ರುತಿ ಮದುವೆ ಅಧಿಕೃತ ಎಂದು ಚಂದ್ರಚೂಡ ಪ್ರತಿಕ್ರಿಯಿಸಿದ್ದಾರೆ.

English summary
A day after Chandrachud married a senior Kannada actror Shruthi in Kollur, Chandrachud's first wife Manjula has raised objection to Chandrachud's marriage. Manjula came out in open on Friday (June 7) saying that she has not yet divorced Chandrachud and wants him back.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada