»   » ಶ್ರುತಿ ಪ್ರಕಾಶ್ ದನಿಯಲ್ಲಿ ಮುಂಜಾನೆ ಮಂಜಲ್ಲಿ.., ಸುದೀಪ್ ಗೆ ಖುಷಿಯೋ ಖುಷಿ.!

ಶ್ರುತಿ ಪ್ರಕಾಶ್ ದನಿಯಲ್ಲಿ ಮುಂಜಾನೆ ಮಂಜಲ್ಲಿ.., ಸುದೀಪ್ ಗೆ ಖುಷಿಯೋ ಖುಷಿ.!

Posted By:
Subscribe to Filmibeat Kannada

ಜಸ್ಟ್ ಮಾತ್ ಮಾತಲ್ಲಿ... 2010ರಲ್ಲಿ ಬಿಡುಗಡೆ ಆದ ಕಿಚ್ಚ ಸುದೀಪ್ ಹಾಗೂ ರಮ್ಯಾ ಅಭಿನಯದ ಸಿನಿಮಾ. ರಘು ದೀಕ್ಷಿತ್ ಸಂಗೀತ ನಿರ್ದೇಶನದ 'ಜಸ್ಟ್ ಮಾತ್ ಮಾತಲ್ಲಿ' ಹಾಡುಗಳು ಅಂದಿಗೆ ಸೂಪರ್ ಹಿಟ್ ಆಗಿದ್ವು ನಿಜ. ಆದ್ರೆ, ಅಂದಿಗಿಂತ 'ಜಸ್ಟ್ ಮಾತ್ ಮಾತಲ್ಲಿ' ಹಾಡು ಹೆಚ್ಚು ಟ್ರೆಂಡ್ ಆಗಿದ್ದು 'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮ ಶುರು ಆದ್ಮೇಲೆ.!

ಹೌದು, 'ಬಿಗ್ ಬಾಸ್' ಮನೆ ಸೇರಿದ್ದ ಜಯರಾಂ ಕಾರ್ತಿಕ್, ಅನುಪಮಾ ಗೌಡ, ನಿವೇದಿತಾ ಗೌಡ, ಕೃಷಿ ತಾಪಂಡ ಆಗಾಗ 'ಜಸ್ಟ್ ಮಾತ್ ಮಾತಲ್ಲಿ' ಹಾಡುಗಳನ್ನೇ ಗುನುಗುತ್ತಿದ್ದರು. ಜೆಕೆಗೆ ಹೆಣ್ಮಕ್ಕಳು ಇಂಪ್ರೆಸ್ ಮಾಡಬೇಕು ಎಂಬ ಟಾಸ್ಕ್ ಬಂದಾಗಲೂ, ಹುಡುಗಿಯರು ಒನ್ಸ್ ಅಗೇನ್ 'ಜಸ್ಟ್ ಮಾತ್ ಮಾತಲ್ಲಿ' ಹಾಡನ್ನು ಹಾಡಿ ಇಂಪ್ರೆಸ್ ಮಾಡಲು ಪ್ರಯತ್ನ ಪಟ್ಟಿದ್ದರು.

ಈಗ ಈ ಫ್ಲ್ಯಾಶ್ ಬ್ಯಾಕ್ ಬಗ್ಗೆ ನಾವು ಮಾತನಾಡಲು ಕಾರಣ ಶ್ರುತಿ ಪ್ರಕಾಶ್. ನಿಮಗೆಲ್ಲ ಗೊತ್ತಿರುವ ಹಾಗೆ ಶ್ರುತಿ ಪ್ರಕಾಶ್ ಉತ್ತಮ ಗಾಯಕಿ. ಸದ್ಯ ಶ್ರುತಿ ಪ್ರಕಾಶ್ 'ಜಸ್ಟ್ ಮಾತ್ ಮಾತಲ್ಲಿ' ಹಾಡನ್ನ ಹಾಡಿದ್ದಾರೆ. ಅದನ್ನ ಕೇಳಿ ಕಿಚ್ಚ ಸುದೀಪ್ ಖುಷಿ ಪಟ್ಟಿದ್ದಾರೆ. ಮುಂದೆ ಓದಿರಿ....

ಶ್ರುತಿ ಪ್ರಕಾಶ್ ದನಿಯಲ್ಲಿ 'ಮುಂಜಾನೆ ಮಂಜಲ್ಲಿ...'

'ಬಿಗ್ ಬಾಸ್' ಮನೆಯಿಂದ ಹೊರಗೆ ಬಂದ್ಮೇಲೆ, 'ಜಸ್ಟ್ ಮಾತ್ ಮಾತಲ್ಲಿ' ಚಿತ್ರದ 'ಮುಂಜಾನೆ ಮಂಜಲ್ಲಿ...' ಹಾಡನ್ನ ಕಲಿತು ವಿಡಿಯೋ ಮಾಡಿದ್ದಾರೆ ಶ್ರುತಿ ಪ್ರಕಾಶ್.

ನ್ಯಾಯ ಒದಗಿಸಿದ್ದೇನೆ.!

''ಮುಂಜಾನೆ ಮಂಜಲ್ಲಿ...' ಹಾಡಿಗೆ ನ್ಯಾಯ ಒದಗಿಸಿದ್ದೇನೆ ಎಂದು ಭಾವಿಸುತ್ತೇನೆ. ಹಾಡನ್ನ ಇನ್ನೂ ಕಲಿಯುತ್ತಿದ್ದೇನೆ'' ಎಂದು ಹಾಡಿರುವ ವಿಡಿಯೋ ಸಮೇತ ಶ್ರುತಿ ಪ್ರಕಾಶ್ ಟ್ವೀಟ್ ಮಾಡಿದ್ದಾರೆ.

ಜೆಕೆ ನೆನೆದ ಶ್ರುತಿ

ಇದೇ ಸಂದರ್ಭದಲ್ಲಿ ಜಯರಾಂ ಕಾರ್ತಿಕ್ ಅವರನ್ನ ಶ್ರುತಿ ನೆನಪು ಮಾಡಿಕೊಂಡಿದ್ದಾರೆ. ''ಬಿಗ್ ಬಾಸ್' ಮನೆಯಲ್ಲಿ ಆಗಾಗ ಈ ಹಾಡನ್ನ ಹಾಡುತ್ತಿದ್ದಕ್ಕೆ ಧನ್ಯವಾದ ಜೆಕೆ'' ಎಂದು ಬರೆದುಕೊಂಡಿದ್ದಾರೆ ಶ್ರುತಿ ಪ್ರಕಾಶ್.

ಖುಷಿಯಾದ ಸುದೀಪ್

''ಮುಂಜಾನೆ ಮಂಜಲ್ಲಿ...'' ಹಾಡನ್ನ ಶ್ರುತಿ ಪ್ರಕಾಶ್ ಹಾಡಿರುವುದನ್ನು ನೋಡಿ ಸುದೀಪ್ ಖುಷಿ ಪಟ್ಟಿದ್ದಾರೆ. ''ನಿಮ್ಮೆಲ್ಲರಿಂದ ಈ ಹಾಡನ್ನು ಕೇಳುವುದೇ ಚೆಂದ'' ಎನ್ನುತ್ತಾ ಶ್ರುತಿ ಪ್ರಕಾಶ್ ಥ್ಯಾಂಕ್ಸ್ ಹೇಳಿದ್ದಾರೆ ಸುದೀಪ್.

English summary
Shruti Prakash sings 'Munjane Manjalli..' song from 'Just Math Mathalli'.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X