»   » ಹರ್ಷ 'ಮಾರುತಿ 800' ಗೆ ಶುಭಾ ಪೂಂಜಾ ಸೇರ್ಪಡೆ

ಹರ್ಷ 'ಮಾರುತಿ 800' ಗೆ ಶುಭಾ ಪೂಂಜಾ ಸೇರ್ಪಡೆ

Posted By:
Subscribe to Filmibeat Kannada

'ವಜ್ರಕಾಯ' ಹಿಟ್ ನಿರ್ದೇಶಕ ಎ.ಹರ್ಷ ಅವರು ಆಕ್ಷನ್-ಕಟ್ ಹೇಳುತ್ತಿರುವ 'ಮಾರುತಿ 800' ಚಿತ್ರದಲ್ಲಿ ಶರಣ್ ಜೋಡಿಯಾಗಿ 'ಲೂಸಿಯಾ' ಬೆಡಗಿ ಶ್ರುತಿ ಹರಿಹರನ್ ಕಾಣಿಸಿಕೊಳ್ಳುತ್ತಿದ್ದಾರೆ ಅಂತ 'ಫಿಲ್ಮಿಬೀಟ್ ಕನ್ನಡ' ದಲ್ಲಿ ಮೊನ್ನೆ ನಿಮಗೆ ನಾವು ಹೇಳಿದ್ವಿ ಅಲ್ವಾ.

ಇದೀಗ 'ಜಯಮ್ಮನ ಮಗ' ಚಿತ್ರಕ್ಕೆ ಬಂಡವಾಳ ಹಾಕಿದ್ದ ರಮೇಶ್ ಅವರ ನಿರ್ಮಾಣದಲ್ಲಿ ಮೂಡಿಬರುತ್ತಿರುವ 'ಮಾರುತಿ 800' ಚಿತ್ರದ ಲೇಟೆಸ್ಟ್ ಸುದ್ದಿ ಏನಪ್ಪಾ ಅಂದ್ರೆ, ಕನ್ನಡದ ಮತ್ತೊಬ್ಬ ನಟಿ ಶುಭಾ ಪೂಂಜಾ ಶರಣ್ ಜೊತೆ ನಾಯಕಿಯಾಗಿ ಲೀಡ್ ರೋಲ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರಂತೆ.[ಹರ್ಷ 'ಮಾರುತಿ 800' ನಲ್ಲಿ ಶರಣ್ ಜೊತೆ ಶ್ರುತಿ ಹರಿಹರನ್ ]

Shubha Poonja joins Harsha's 'Maruthi 800'

ಹೌದು ಜಯಣ್ಣ ಕಂಬೈನ್ಸ್ ಅಡಿಯಲ್ಲಿ ಮೂಡಿಬರುತ್ತಿರುವ 'ಮಾರುತಿ 800' ನಲ್ಲಿ ಇಬ್ಬರು ನಾಯಕಿಯರು ಶರಣ್ ಜೊತೆ ಡ್ಯುಯೆಟ್ ಹಾಡಲಿದ್ದಾರೆ.

ಕಾಮಿಡಿ ನಟ ಶರಣ್ ಅವರು 'ಬುಲೆಟ್ ಬಸ್ಯಾ' ಚಿತ್ರದ ಬಿಡುಗಡೆಗಾಗಿ ಕಾಯುತ್ತಿದ್ದು, ವಿಶೇಷವಾಗಿ 'ಮಾರುತಿ 800' ಚಿತ್ರದಲ್ಲಿನ ಫೈಟ್ ಸೀನ್ ಗಾಗಿ ಸಿಕ್ಸ್ ಪ್ಯಾಕ್ ತಯಾರಿಯಲ್ಲಿದ್ದಾರೆ. ಫೈಟ್ ಮಾಸ್ಟರ್ ರವಿವರ್ಮ ಶರಣ್ ಫೈಟ್ ಸೀನ್ ಗಳಿಗೆ ಗೈಡ್ ಮಾಡಲಿದ್ದಾರೆ.

ಈಗಾಗಲೇ 'ಮಾರುತಿ 800' ಚಿತ್ರದ ಶೂಟಿಂಗ್ ಪ್ರಾರಂಭವಾಗಿದ್ದು ಬೆಂಗಳೂರಿನ ಸುತ್ತಮುತ್ತ ಚಿತ್ರೀಕರಣ ಮಾಡಲಾಗುತ್ತಿದೆ.

English summary
After Sruthi Hariharan, actress Shubha Poonja has also joined the team of Kannada movie 'Maruthi 800'. Kannada Actor Sharan in the lead role. The movie is Directed by A Harsha of 'Vajrakaya' fame.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada