For Quick Alerts
  ALLOW NOTIFICATIONS  
  For Daily Alerts

  ಚಂದನವನಕ್ಕೆ ನಾಯಕಿಯಾಗಿ ಪ್ರವೇಶ ಮಾಡಿದ 'ರಾಧಾರಮಣ' ರಾಧಾ

  By ಶ್ರೀಶೈಲ ಸಿಎಂ
  |

  ಕನ್ನಡ ಕಿರುತೆರೆ ವೀಕ್ಷಕರಿಗೆ ರಮಣನ ರಾಣಿ ರಾಧಾಳ ಬಗ್ಗೆ ಹೆಚ್ಚಿಗೆ ಹೇಳುವ ಅವಶ್ಯಕತೆಯಿಲ್ಲ. ತಮ್ಮ ಸಿಂಪಲ್ ಲುಕ್ ಮತ್ತು ಮುಗ್ದ ನಟನೆಯಿಂದ ಕನ್ನಡಿಗರ ಮನ ಸೆಳೆದಿರುವ ಶ್ವೇತಾ, ಕಲರ್ಸ್ ಕನ್ನಡದ ರಾಧಾರಮಣ ಸೀರಿಯಲ್‌ ನ ಪ್ರಮುಖ ಪಾತ್ರಧಾರಿ.

  ಕಿರುತೆರೆಯಲ್ಲಿ ತಮ್ಮ ನಟನೆಯಿಂದ ಮೋಡಿ ಮಾಡಿದ್ದ ಶ್ವೇತಾ ಈಗ ಅಧಿಕೃತವಾಗಿ ಚಂದನವನದಲ್ಲಿ ನಾಯಕಿಯಾಗಿ ಹೊಸ ಇನ್ನಿಂಗ್ಸ್ ಆರಂಭಿಸಿದ್ದಾರೆ.

  ಕಳ್ಬೆಟ್ಟದ ದರೋಡೆಕೋರರೊಂದಿಗೆ ಶ್ವೇತಾ

  ಹೌದು, ಈ ವಾರ ತೆರೆ ಕಂಡ 'ಕಳ್ಬೆಟ್ಟದ ಡರೋಡೆಕೋರರು' ಚಿತ್ರದಲ್ಲಿ ಶ್ವೇತಾ ನಾಯಕಿಯಾಗಿ ನಟಸಿದ್ದಾರೆ. ಈ ಮೂಲಕ ಕಿರುತೆರೆಯಿಂದ ಚಂದನವನಕ್ಕೂ ನಾಯಕಿಯಾಗಿ ಕಾಲಿಟ್ಟಿದ್ದಾರೆ. ಕಾದಂಬರಿ ಆಧಾರಿತ ಈ ಚಿತ್ರದಲ್ಲಿ ಮುಗ್ಧ ಹುಡುಗಿಯ ಪಾತ್ರದಲ್ಲಿ ಶ್ವೇತಾ ನಟಿಸಿದ್ದಾರೆ. ದೀಪಕ್ ಮಧುವನಹಳ್ಳಿ ನಿರ್ದೇಶನದ ಈ ಚಿತ್ರದಲ್ಲಿ 'ರಾಮಾ ರಾಮ ರೇ' ಖ್ಯಾತಿಯ ನಟರಾಜ ಭಟ್ ನಾಯಕನಾಗಿ ನಟಿಸಿದ್ದಾರೆ.

  'ಕಳ್ಬೆಟ್ಟದ ದರೋಡೆಕೋರರು' ಚಿತ್ರ ವೀಕ್ಷಿಸಿದ ಮೀನಾ ತೂಗುದೀಪ 'ಕಳ್ಬೆಟ್ಟದ ದರೋಡೆಕೋರರು' ಚಿತ್ರ ವೀಕ್ಷಿಸಿದ ಮೀನಾ ತೂಗುದೀಪ

  ಇಂಜಿನಿಯರಿಂಗ್ ವಿಧ್ಯಾರ್ಥಿನಿ ಕಿರುತೆರೆ ನಟಿಯಾಗಿ

  ಮೂಲತಃ ಶಿವಮೊಗ್ಗದವರಾದ ಇವರು ಓದಿ ಬೆಳದಿದ್ದೆಲ್ಲಾ ಶಿವಮೊಗ್ಗದಲ್ಲಿಯೇ. ನಂತರ ಮಾಯಾನಗರಿ ಬೆಂಗಳೂರಿಗೆ ಬಂದು ಆರ್.ವಿ.ಇಂಜಿನಿಯರಿಂಗ್ ಕಾಲೇಜಿನಿಂದ ಆರ್ಕಿಟಿಕ್ಚೆರ್‌ನಲ್ಲಿ ಪದವಿ ಪಡೆದು ವೃತ್ತಿಯಲ್ಲಿ ನಿರತರಾದರು. ಕಿರುತೆರೆಯ ಖ್ಯಾತ ನಿರ್ಮಾಪಕಿ ಶೃತಿ ನಾಯ್ಡು ಫೇಸ್‌ ಬುಕ್‌ನಲ್ಲಿನ ಇವರ ಚಿತ್ರ ನೋಡಿ ಧಾರಾವಾಹಿಯಲ್ಲಿ ನಟಿಸಲು ಆಫರ್ ನೀಡಿದರು. ಮೊದಮೊದಲು ನಯವಾಗಿ ನಿರಾಕರಿಸದರೂ ನಂತರ ಒಪ್ಪಿಕೊಂಡರು.

  ಫೋಟೋ ಆಲ್ಬಂ: ಸೂಪರ್ ಸ್ಟೈಲಿಶ್ ಲುಕ್ ನಲ್ಲಿ 'ರಾಧಾ' ಮಿಸ್ ಫೋಟೋ ಆಲ್ಬಂ: ಸೂಪರ್ ಸ್ಟೈಲಿಶ್ ಲುಕ್ ನಲ್ಲಿ 'ರಾಧಾ' ಮಿಸ್

  ಜೀ ಕನ್ನಡದ 'ಶ್ರಿರಸ್ತು ಶುಭಮಸ್ತು' ಸೀರಿಯಲ್‌ನ ಜಾನು ಪಾತ್ರದ ಮೂಲಕ ಮನೆಮಾತಾದರು. ನಂತರ ಕಲರ್ಸ್ ವಾಹಿನಿಯಲ್ಲಿ ಪ್ರಸಾರವಾದ 'ರಾದಾ ರಮಣ'ದ ಆರಾಧನಾ ಪಾತ್ರದ ಮೂಲಕ ಪ್ರೇಕ್ಷಕರಿಗೆ ಇನ್ನಷ್ಟು ಹತ್ತಿರವಾದರು. 2017 ರಲ್ಲಿ ಬೆಂಗಳೂರು ಟೈಮ್ಸ್‌ನ ಮೋಸ್ಟ್ ಡಿಸೈರೇಬಲ್ ಕಿರುತೆರೆ ನಟಿಯಾಗಿ ಹೊರಹೊಮ್ಮಿದರು.

  ಅಂತೂ ರಾಧಾ ಮಿಸ್ ಗೆ ಒಂದು ಸತ್ಯ ಗೊತ್ತಾಯಿತು.! ಅಂತೂ ರಾಧಾ ಮಿಸ್ ಗೆ ಒಂದು ಸತ್ಯ ಗೊತ್ತಾಯಿತು.!

  ಅಕ್ಕರೆಯ ಬೆನ್ನುಲುಬಾಗಿ ಸದಾ ಪ್ರೋತ್ರಾಹಿಸುವ ಪತಿ
  ಬೆಂಗಳೂರಿನ ಎಫ್.ಎಮ್ ಕೇಳುಗರಿಗೆಲ್ಲಾ ಆರ್.ಜೆ.ಪ್ರದೀಪ್ ಚಿರಪರಿಚಿತ ಹೆಸರು. ಕಿರುತೆರೆಗೆ ಬರುವ ಮುನ್ನವೇ ಶ್ವೇತಾರವರು ಪ್ರದೀಪರನ್ನು ವಿವಾಹವಾಗಿದ್ದರು. ಧಾರಾವಾಹಿಯಲ್ಲಿ ನಟಿಸಲು ಅವಕಾಶ ಬಂದಾಗ ಶ್ವೇತಾರಿಗೆ ನಟಿಸಲು ಪ್ರೋತ್ಸಾಹ ತುಂಬಿದ್ದು ಪ್ರದೀಪ್.

  ನಟನೆ ಮಾತ್ರವಲ್ಲದೇ 'ಯೂತ್ ಫಾರ್ ಸೇವಾ' ಎಂಬ ಸಂಸ್ಥೆಯಲ್ಲಿ ಸ್ವಯಂ ಸೇವಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.ಇಂದು ತೆರೆ ಕಂಡಿರುವ 'ಕಳ್ಬೆಟ್ಟದ ದರೋಡೆಕೋರರು' ಚಿತ್ರದ ಮೂಲಕ ಕಿರುತೆರೆಯ ರಾಧಾರನ್ನು ಬೆಳ್ಳಿಪರದೆಯಲ್ಲಿ ನೋಡಿ ಆನಂದಿಸಿ.

  English summary
  Radha Ramana serial fame Shwtha R prasad making her Sandalwood Debut with kalbettada darodekoraru. the movie has released this week and get good response.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X