»   » ಬಜೆಟ್ ನಲ್ಲಿ ಚಲನಚಿತ್ರ ಕ್ಷೇತ್ರಕ್ಕೆ ಸಿಹಿಕಹಿ ಕೊಡುಗೆ

ಬಜೆಟ್ ನಲ್ಲಿ ಚಲನಚಿತ್ರ ಕ್ಷೇತ್ರಕ್ಕೆ ಸಿಹಿಕಹಿ ಕೊಡುಗೆ

Posted By:
Subscribe to Filmibeat Kannada

ಈ ಬಾರಿ ಸಿದ್ದರಾಮಯ್ಯ ಮಂಡಿಸಿದ ಮುಂಗಡಪತ್ರದಲ್ಲಿ ಚಲನಚಿತ್ರ ಕ್ಷೇತ್ರಕ್ಕೆ ಒಂದಷ್ಟು ಸಿಹಿ ಇನ್ನೊಂದಿಷ್ಟು ಕಹಿ ಕೊಡುಗೆಯನ್ನು ನೀಡಿದ್ದಾರೆ. ಮೊದಲು ಕಹಿ ಬಳಿಕ ಸಿಹಿ ಬಗ್ಗೆ ತಿಳಿದುಕೊಳ್ಳೋಣ. ಸಿನಿಮಾ ಟಿಕೆಟ್ ಬೆಲೆಯನ್ನು ಹೆಚ್ಚಿಸಲಾಗಿದೆ. ಈ ಮೂಲಕ ಚಿತ್ರರಸಿಕರ ಕಿಸೆಗೆ ಒಂದಷ್ಟು ಹೊರೆ ಬಿದ್ದಿದೆ.

ಹವಾನಿಯಂತ್ರಣ ವ್ಯವಸ್ಥೆ ಇರುವ ಚಿತ್ರಮಂದಿರಗಳಲ್ಲಿ ಟಿಕೆಟ್ ಬೆಲೆ ರು.3 ಹೆಚ್ಚಳ ಹಾಗೂ ನಾನ್ ಎಸಿ ಚಿತ್ರಮಂದಿರಗಳಲ್ಲಿ ರು.2 ಹೆಚ್ಚಳವಾಗಲಿದೆ. ಬೆಂಗಳೂರಿನಲ್ಲಿ ಸರಿಸುಮಾರು 100 ಹಾಗೂ ರಾಜ್ಯದಾದ್ಯಂತ 600ಕ್ಕೂ ಹೆಚ್ಚು ಚಿತ್ರಮಂದಿರಳಿವೆ.

Ticket price hike

ಎಲ್ಲಾ ಮಲ್ಟಿಫೆಕ್ಸ್ ಚಿತ್ರಮಂದಿರಗಳಲ್ಲೂ ಹಾಗೂ ಶೇ.30ರಷ್ಟು ಚಿತ್ರಮಂದಿರಗಳಲ್ಲಿ ಎಸಿ ವ್ಯವಸ್ಥೆ ಇದೆ. ಇದರ ಜೊತೆಗೆ ಈ ಬಾರಿಯ ಬಜೆಟ್ ನಲ್ಲಿ ಪ್ರಸ್ತುತ ವಾರ್ಷಿಕ 75 ಗುಣಾತ್ಮಕ ಕನ್ನಡ ಚಲನಚಿತ್ರಗಳಿಗೆ ನೀಡಲಾಗುತ್ತಿರುವ ಸಹಾಯಧನ ಸೌಲಭ್ಯವನ್ನು 100 ಚಲನಚಿತ್ರಗಳಿಗೆ ಹೆಚ್ಚಿಸಲು ಉದ್ದೇಶಿಸಲಾಗಿದೆ.

ಬೆಂಗಳೂರು ನಗರದ ಕಂಠೀರವ ಸ್ಟುಡಿಯೋ ಆವರಣದಲ್ಲಿ ನಿರ್ಮಿಸುತ್ತಿರುವ ದಿವಂಗತ ಡಾ.ರಾಜ್ ಕುಮಾರ್ ಸ್ಮಾರದ ಮೊದಲ ಹಂತದ ಕಾಮಗಾರಿಗಳು ಪೂರ್ಣಗೊಂಡಿದ್ದು ಇದನ್ನು ಶೀಘ್ರದಲ್ಲೇ ಲೋಕಾರ್ಪಣೆ ಮಾಡಲಾಗುವುದು.

ದಿವಂಗತ ಡಾ.ವಿಷ್ಣುವರ್ಧನ ಸ್ಮಾರಕ ನಿರ್ಮಾಣಕ್ಕಾಗಿ ಸರ್ಕಾರದಿಂದ ಎರಡು ಎಕರೆ ಜಮೀನನ್ನು ಮಂಜೂರು ಮಾಡಲಾಗಿದ್ದು ಇದರ ಕಾಮಗಾರಿಯನ್ನು ಶೀಘ್ರದಲ್ಲೇ ಕೈಗೆತ್ತಿಕೊಳ್ಳಲಾಗುವುದು.

ಕನ್ನಡ ವಾಕ್ ಚಲನಚಿತ್ರವು 75 ವರ್ಷಗಳನ್ನು ಪೂರೈಸಿರುವ ನೆನಪಿಗಾಗಿ ಬೆಂಗಳೂರಿನಲ್ಲಿ ನಿರ್ಮಿಸಲಾಗುತ್ತಿರುವ ಅಮೃತಮಹೋತ್ಸವ ಭವನದ ಬಾಕಿ ಕಾಮಗಾರಿಗಳನ್ನು ಪೂರೈಸಲು ಅನುಕೂಲವಾಗುವಂತೆ ರು.2.50 ಕೋಟಿ ಅನುದಾನ ಒದಗಿಸಲಾಗುವುದು. (ಒನ್ಇಂಡಿಯಾ ಕನ್ನಡ)

English summary
The ticket prices in cinema theatres increased in the state Budget (2013-14) presented by Chief Minister Siddaramaiah. The annual subsidy will be given to 100 Kannada films from the existing 75. Dr Rajkumar's memorial which has almost reached completion will be inaugurated shortly.
Please Wait while comments are loading...