Just In
Don't Miss!
- News
ಆಕ್ಸಿಜನ್ ವ್ಯರ್ಥವಾಗದಂತೆ ನೋಡಿಕೊಳ್ಳಲು ರಾಜ್ಯಗಳಿಗೆ ಕೇಂದ್ರದ ಸೂಚನೆ
- Sports
ಐಪಿಎಲ್ 2021: ಶಹ್ಬಾಜ್ ಪ್ರದರ್ಶನಕ್ಕೆ ಸಿರಾಜ್ ಮೆಚ್ಚುಗೆಯ ಮಾತು
- Finance
25,000 ಹೊಸ ಉದ್ಯೋಗಿಗಳನ್ನ ನೇಮಕ ಮಾಡಿಕೊಳ್ಳಲಿದೆ ಇನ್ಫೋಸಿಸ್
- Automobiles
ಹೊಸ ಫೀಚರ್ಸ್ಗಳೊಂದಿಗೆ ಬಜಾಜ್ ಸಿಟಿ110ಎಕ್ಸ್ ಬೈಕ್ ಬಿಡುಗಡೆ
- Education
Kalaburagi Mahanagara Palike Recruitment 2021: 219 ಪೌರಕಾರ್ಮಿಕ ಹುದ್ದೆಗಳಿಗೆ ಅರ್ಜಿ ಆಹ್ವಾನ
- Lifestyle
ರಂಜಾನ್ 2021: ಉಪವಾಸದ ಈ ತಿಂಗಳಿನಲ್ಲಿ ಹೀಗೆ ಮಾಡಿದರೆ ರೋಗ ನಿರೋಧಕ ಶಕ್ತಿ ವೃದ್ಧಿಸುವುದು
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಟಗರು ಕಣ್ಣಿಗೇಕೆ ಬೀಳಲಿಲ್ಲ 'ಪೊಗರು' ಅಪಸವ್ಯಗಳು?
ಎಲ್ಲ ಜಾತಿ, ಸಮುದಾಯಗಳಿಗೂ ಸಮಾನತೆ ಸಿಗಬೇಕು, ಎಲ್ಲ ವರ್ಗದ ಜನರಿಗೂ ಸಾಮಾಜಿಕ ನ್ಯಾಯ ಸಿಗಬೇಕು ಎಂದೆಲ್ಲ ಉದ್ದುದ್ದ ಭಾಷಣ ಮಾಡುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಡೆ ಟೀಕೆಗೆ ಗುರಿಯಾಗಿದೆ.
ಮಹಿಳೆಯರಿಗೆ ಸಮಾನತೆ, ಮಹಿಳೆಯರಿಗೆ ಸೂಕ್ತ ಗೌರವ, ಮಹಿಳೆಯರ ಮೇಲಿನ ದೌರ್ಜನ್ಯಗಳನ್ನು ಸಿದ್ದರಾಮಯ್ಯ ಅವರು ಖಂಡಿಸಿರುವ ಅನೇಕ ಉದಾಹರಣೆಗಳಿವೆ. ಆದ್ರೀಗ, ಮಹಿಳಾ ವರ್ಗಕ್ಕೆ ಅಪಮಾನ ಮಾಡಿರುವಂತಹ ಚಿತ್ರದ ಬೆಂಬಲಕ್ಕೆ, ಪ್ರಚಾರಕ್ಕೆ ಸಿದ್ದರಾಮಯ್ಯ ಸಾಥ್ ನೀಡಿರುವುದು ಆಕ್ರೋಶಕ್ಕೆ ಕಾರಣವಾಗಿದೆ.
ದಾವಣಗೆರೆಯಲ್ಲಿ ಫೆಬ್ರವರಿ 14 ರಂದು ನಟ ಧ್ರುವ ಸರ್ಜಾ ಅಭಿನಯದ 'ಪೊಗರು' ಚಿತ್ರದ ಆಡಿಯೋ ಬಿಡುಗಡೆ ಸಮಾರಂಭ ನೆರವೇರಿದೆ. ಬಹಳ ಅದ್ದೂರಿಯಾಗಿ ನಡೆದ ಆಡಿಯೋ ರಿಲೀಸ್ ಕಾರ್ಯಕ್ರಮದಲ್ಲಿ ವಿಧಾನಸಭೆಯ ವಿಪಕ್ಷ ನಾಯಕ ಸಿದ್ದರಾಮಯ್ಯ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ವೇದಿಕೆ ಮೇಲೆ ಮಾತನಾಡಿದ ಅವರು ''ನಟ ಧ್ರುವ ಸರ್ಜಾ, ನಿರ್ದೇಶಕ ನಂದ ಕಿಶೋರ್ ಅವರು ಪ್ರೀತಿಯಿಂದ ಆಹ್ವಾನ ನೀಡಿದರು. ಬರಲೇಬೇಕೆಂದು ಮನವಿ ಮಾಡಿದರು. ಹಾಗಾಗಿ, ನಾನು ಪೊಗರು ಕಾರ್ಯಕ್ರಮಕ್ಕೆ ಬಂದೆ, ಈ ಚಿತ್ರ ಯಶಸ್ವಿಯಾಗಲಿ, ಬಹಳ ದೊಡ್ಡ ಮಟ್ಟದಲ್ಲಿ ಗಳಿಕೆ ಕಾಣಲಿ'' ಎಂದು ಹಾರೈಸಿದರು. ಆದರೆ, ಈ ಚಿತ್ರದ ಹಾಡಿನಿಂದ ಸಮಾಜಕ್ಕೆ ತಲುಪುತ್ತಿರುವ ತಪ್ಪು ಸಂದೇಶ ಮಾತ್ರ ಸಿದ್ದರಾಮಯ್ಯ ಅವರು ಕಣ್ಣಿಗೆ ಬಿದ್ದಿಲ್ಲ.
ಖರಾಬು ಹಾಡಿನಲ್ಲಿ ನಟಿ ರಶ್ಮಿಕಾ ಮಂದಣ್ಣ ಅವರನ್ನು ನಡೆಸಿಕೊಂಡಿರುವ ರೀತಿಯನ್ನು ಮಹಿಳೆ ಸಂಘಟನೆ ಹಾಗೂ ಸಮಾಜಪರ ಹೋರಾಟಗಾರರು ಖಂಡಿಸಿದ್ದರು. ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ನಾಗಲಕ್ಷ್ಮೀ ಬಾಯಿ ಅವರು ಖುದ್ದು ಈ ಹಾಡನ್ನು ವಿರೋಧಿಸಿದ್ದರು.
'ಸುಸಂಸ್ಕೃತರು ಯಾರು ಹೀಗೆ ಮಾಡಲ್ಲ. ಇದು ಮನರಂಜನೆ ಅಲ್ಲ. ಮಹಿಳೆಯರನ್ನು ಇಷ್ಟು ಕೆಳಮಟ್ಟದಲ್ಲಿ ತೋರಿಸಿ ಮನರಂಜನೆ ಪಡೆಯಬೇಕಿಲ್ಲ. ಹೆಣ್ಣು ಮಕ್ಕಳನ್ನು ನಡೆಸಿಕೊಳ್ಳುವ ರೀತಿ ಇದಲ್ಲ. ಇದನ್ನು ನೋಡಿದ್ರೆ ಅಸಹ್ಯವಾಗುತ್ತೆ' ಎಂದು ಎಂದು ಫಿಲ್ಮಿಬೀಟ್ ಕನ್ನಡದ ಜೊತೆ ಮಾತಾಡಿದ ವೇಳೆ ಕಿಡಿಕಾರಿದ್ದರು.
ಈ ಹಾಡು ರಿಲೀಸ್ ಆದ ಸಂದರ್ಭದಲ್ಲಿ ನಟ ಮತ್ತು ಸಾಮಾಜಿಕ ಹೋರಾಟಗಾರ ಚೇತನ್ ಟ್ವಿಟ್ಟರ್ ಮೂಲಕ ಹರಿಹಾಯ್ದಿದ್ದರು. 'ಮಹಿಳೆಯೊಬ್ಬರನ್ನು ಪದೇ ಪದೇ 'ನಾಯಿ, ನರಿ, ಕ್ರಿಮಿ, ಕೀಟ' ಎಂದು ಕರೆಯುತ್ತಾರೆ. 'ನಂತರ ಅವರು ಹಾಡೊಂದರಲ್ಲಿ ನಟಿಸುವಾಗ ಅಲ್ಲಿ ಪ್ರಣಯದ ಹೆಸರಿನಲ್ಲಿ ನಾಯಕಿಯ ಕೂದಲನ್ನು ಎಳೆಯುತ್ತಾರೆ. ನಾಯಕಿಯನ್ನು ಕರೆಂಟ್ ಶಾಕ್ ಮತ್ತು ತುಂಡು ತುಂಡಾಗಿ ಕತ್ತರಿಸುವ ಬೆದರಿಕೆ ಹಾಕುತ್ತಾರೆ. ಅಲ್ಲದೆ ಮಹಿಳೆಯರ ಮೇಲೆ ಹಲ್ಲೆ ಮಾಡುತ್ತಾರೆ. ಒಪ್ಪಿಗೆ ಇಲ್ಲದಿದ್ದರೂ ಒತ್ತಾಯಿಸುವುದು 'ಕಿರುಕುಳ' ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.
ಸಮಾಜದ ಮೇಲೆ ದುಷ್ಪರಿಣಾಮ ಬೀರಿರುವ ಈ ಹಾಡು ಹಾಗೂ ಅದಕ್ಕೆ ಎದುರಾಗಿರುವ ಟೀಕೆಗಳ ಬಗ್ಗೆ ಸಿದ್ದರಾಮಯ್ಯ ಏಕೆ ಯೋಚಿಸಲಿಲ್ಲ. ವೇದಿಕೆ ಮೇಲೆ ಮಾತನಾಡುವ ವೇಳೆಯಾದರೂ ''ಸಿನಿಮಾ ಬಹಳ ಬೇಗ ಜನರಿಗೆ ತಲುಪುತ್ತೆ, ಅಂತಹ ದೃಶ್ಯಗಳನ್ನು ಸಿನಿಮಾದಲ್ಲಿ ತೋರಿಸಬೇಡಿ, ಒಬ್ಬ ಮಹಿಳೆಯನ್ನು ಈ ರೀತಿ ಬಿಂಬಿಸುವುದು ತಪ್ಪು'' ಎಂದು ಹೇಳಬಹುದಿತ್ತು ಅಲ್ಲವೇ?