For Quick Alerts
  ALLOW NOTIFICATIONS  
  For Daily Alerts

  ಸಲಗ-ಟಗರು ಜುಗಲ್‌ಬಂದಿ: ವಿಜಯ್ ಚಿತ್ರಕ್ಕೆ ಸಿದ್ದರಾಮಯ್ಯ ಸಾಥ್

  |

  ಸ್ಯಾಂಡಲ್‌ವುಡ್ ಚಿತ್ರರಂಗ ಮತ್ತೆ ಚುರುಕಾಗುತ್ತಿದೆ. ಚಿತ್ರಮಂದಿರಗಳು 100% ತೆರೆದಿದೆ. ಸ್ಟಾರ್ ನಟರ ಚಿತ್ರಗಳು ಬಿಡುಗಡೆಗೆ ತಯಾರಾಗಿದೆ. ಇದೀಗ, ಸಿನಿಮಾ ರಿಲೀಸ್‌ಗು ಮೊದಲು ಪ್ರಿ-ರಿಲೀಸ್ ಕಾರ್ಯಕ್ರಮ ಮಾಡಲು ದೊಡ್ಡ ಚಿತ್ರಗಳು ಸಜ್ಜಾಗಿದೆ.

  ದುನಿಯಾ ವಿಜಯ್ ನಾಯಕನಾಗಿ ನಟಿಸಿ, ಚೊಚ್ಚಲ ಬಾರಿಗೆ ನಿರ್ದೇಶಿಸಿರುವ 'ಸಲಗ' ಚಿತ್ರ ದಸರಾ ಹಬ್ಬದ ಪ್ರಯುಕ್ತ ಅಕ್ಟೋಬರ್ 14 ರಂದು ತೆರೆಗೆ ಬರ್ತಿದೆ. ಅಧಿಕೃತವಾಗಿ ರಿಲೀಸ್‌ಗು ಮುಂಚೆ ಪ್ರಿ-ರಿಲೀಸ್ ಕಾರ್ಯಕ್ರಮ ಆಯೋಜಿಸಲು ಚಿತ್ರತಂಡ ನಿರ್ಧರಿಸಿದ್ದು, ಮಾಜಿ ಸಿಎಂ ಸಿದ್ದರಾಮಯ್ಯ ಅವರು ಮುಖ್ಯ ಅತಿಥಿಯಾಗಿ ಆಗಮಿಸುವ ಸಾಧ್ಯತೆ ಇದೆ. ಸದ್ಯಕ್ಕೆ ಪ್ರಿ-ರಿಲೀಸ್ ಕಾರ್ಯಕ್ರಮದ ಬಗ್ಗೆ ನಿಖರವಾದ ಮಾಹಿತಿ ಇಲ್ಲ.

  ಸಲಗ-ಕೋಟಿಗೊಬ್ಬ ದಸರಾ ಹಬ್ಬವನ್ನೇ ಟಾರ್ಗೆಟ್ ಮಾಡ್ತಿರೋದೇಕೆ? ಸಲಗ-ಕೋಟಿಗೊಬ್ಬ ದಸರಾ ಹಬ್ಬವನ್ನೇ ಟಾರ್ಗೆಟ್ ಮಾಡ್ತಿರೋದೇಕೆ?

  ಈ ಸಂಬಂಧ ಇಂದು (ಅಕ್ಟೋಬರ್ 4) ನಟ-ನಿರ್ದೇಶಕ ದುನಿಯಾ ವಿಜಯ್, ನಿರ್ಮಾಪಕ ಕೆಪಿ ಶ್ರೀಕಾಂತ್ ಸೇರಿದಂತೆ ಸಲಗ ಚಿತ್ರತಂಡ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದರು. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

  ಸಲಗ ಚಿತ್ರತಂಡ ಭೇಟಿ ಮಾಡಿದ ಫೋಟೋಗಳನ್ನು ಸಿದ್ದರಾಮಯ್ಯ ತಮ್ಮ ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದು ಚಿತ್ರತಂಡಕ್ಕೆ ಶುಭಕೋರಿದರು. ''ಅಕ್ಟೋಬರ್ 14ರಂದು ತೆರೆ ಕಾಣಲಿರುವ ಸಲಗ ಚಿತ್ರದ ತಂಡದವರು ನಾಯಕ ನಟ ದುನಿಯಾ ವಿಜಯ್ ಅವರ ನೇತೃತ್ವದಲ್ಲಿ ಇಂದು ನನ್ನನ್ನು ಭೇಟಿ ಮಾಡಿದರು. ಶಾಸಕರಾದ ಬೈರತಿ ಸುರೇಶ್ ಅವರು ಈ ವೇಳೆ ಹಾಜರಿದ್ದರು. ದುನಿಯಾ ವಿಜಯ್ ಒಬ್ಬ ಪ್ರತಿಭಾನ್ವಿತ ನಟ, ಹೆಚ್ಚಿನ ಶ್ರಮವಹಿಸಿ ಸಿನಿಮಾ ಮಾಡಿದ್ದಾರೆ. ಚಿತ್ರ ಯಶಸ್ವಿಯಾಗಲಿ ಎಂದು ಹಾರೈಸುತ್ತೇನೆ'' ಎಂದು ಸಿದ್ದರಾಮಯ್ಯ ಆಶಿಸಿದರು.

  ಒಂದೇ ದಿನ 'ಸಲಗ', 'ಕೋಟಿಗೊಬ್ಬ 3' ಬಿಡುಗಡೆ: ಸಲಹೆ ನೀಡಿದ ಶಿವರಾಜ್‌ ಕುಮಾರ್ ಒಂದೇ ದಿನ 'ಸಲಗ', 'ಕೋಟಿಗೊಬ್ಬ 3' ಬಿಡುಗಡೆ: ಸಲಹೆ ನೀಡಿದ ಶಿವರಾಜ್‌ ಕುಮಾರ್

  ಈ ಹಿಂದೆ ಸಲಗ ಚಿತ್ರದ ಮುಹೂರ್ತಕ್ಕೆ ಸಿದ್ದರಾಮಯ್ಯ ಆಗಮಿಸಿದ್ದರು. ಮೊದಲ ದಿನದಿಂದಲೂ ಸಿದ್ದರಾಮಯ್ಯ ಅವರು ದುನಿಯಾ ವಿಜಯ್ ಚಿತ್ರಕ್ಕೆ ಬೆಂಬಲವಾಗಿ ನಿಂತಿದ್ದಾರೆ. ಈಗ ಸಿನಿಮಾ ರಿಲೀಸ್ ವೇಳೆಯೂ ಸಲಗ ಚಿತ್ರಕ್ಕೆ ಸಾಥ್ ಕೊಟ್ಟಿರುವುದು ಸಹಜವಾಗಿ ವಿಶೇಷವೆನಿಸಿಕೊಂಡಿದೆ.

  ಸಲಗ ಚಿತ್ರ ಸೆನ್ಸಾರ್ ಮುಗಿಸಿದೆ. ಯಾವುದೇ ಕಟ್, ಮ್ಯೂಟ್ ಇಲ್ಲದೇ 'ಎ' ಪ್ರಮಾಣ ಪತ್ರ ಪಡೆದುಕೊಂಡಿದೆ. ಪಕ್ಕಾ ರೌಡಿಸಂ ಆಧರಿತ ಕಥಾಹಂದರ ಹೊಂದಿದ್ದು, ಸುಕ್ಕ ಶೈಲಿಯಲ್ಲಿ ಸಿನಿಮಾ ತಯಾರಾಗಿದೆ. ಈಗಾಗಲೇ ಹಾಡುಗಳು, ಡೈಲಾಗ್‌ಗಳು ಹಾಗೂ ಟೀಸರ್ ಭರ್ಜರಿ ಸದ್ದು ಮಾಡಿದೆ.

   Siddaramaiah will be chief guest for Salaga Pre release event

  ದುನಿಯಾ ವಿಜಯ್ ನಿರ್ದೇಶಿಸಿ, ನಟಿಸಿರುವ ಈ ಚಿತ್ರದಲ್ಲಿ ಡಾಲಿ ಧನಂಜಯ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಸಂಜನಾ ಪ್ರಕಾಶ್ ನಾಯಕಿ. ಕಾಕ್ರೋಚ್ ಖ್ಯಾತಿಯ ಸುಧೀ, ಯಶ್ ಶೆಟ್ಟಿ ಸೇರಿದಂತೆ ಹಲವರು ಕಾಣಿಸಿಕೊಂಡಿದ್ದಾರೆ. ಚರಣ್ ರಾಜ್ ಸಂಗೀತ ಸಂಯೋಜನೆ ಮಾಡಿದ್ದು, ಕೆಪಿ ಶ್ರೀಕಾಂತ್ ನಿರ್ಮಿಸಿದ್ದಾರೆ. ಕೆಜಿ ರಸ್ತೆಯಲ್ಲಿರುವ ಸಂತೋಷ್ ಮೇನ್ ಥಿಯೇಟರ್ ಸೇರಿದಂತೆ ರಾಜ್ಯಾದ್ಯಂತ ಪ್ರಮುಖ ಚಿತ್ರಮಂದಿರಗಳಲ್ಲಿ ಸಲಗ ಎಂಟ್ರಿಯಾಗಲಿದೆ.

  ಕೋಟಿಗೊಬ್ಬ ಪ್ರಿ-ರಿಲೀಸ್ ಕಾರ್ಯಕ್ರಮ

  ಸಲಗ ರಿಲೀಸ್ ದಿನವೇ ಸುದೀಪ್ ನಟನೆಯ ಕೋಟಿಗೊಬ್ಬ 3 ಚಿತ್ರವೂ ತೆರೆಗೆ ಬರ್ತಿದೆ. ಅಕ್ಟೋಬರ್ 14ಕ್ಕೆ ಸಿನಿಮಾ ಬಿಡುಗಡೆಯಾಗುತ್ತಿದ್ದರೆ, ಅಕ್ಟೋಬರ್ 10ಕ್ಕೆ ಪ್ರಿ-ರಿಲೀಸ್ ಕಾರ್ಯಕ್ರಮ ಆಯೋಜನೆಯಾಗಿದೆ.

  ಕೋಟಿಗೊಬ್ಬ 3 ಚಿತ್ರದಲ್ಲಿ ಮಲಯಾಳಂ ನಟಿ ಮಡೋನ್ನಾ ಸಬಾಸ್ಟಿಯನ್ ಸುದೀಪ್‌ಗೆ ನಾಯಕಿಯಾಗಿ ನಟಿಸಿದ್ದಾರೆ. ರವಿಶಂಕರ್, ಅಫ್ತಾಬ್ ಶಿವ ದಾಸನಿ, ಶ್ರದ್ಧಾ ದಾಸ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಅದೇ ದಿನ ದುನಿಯಾ ವಿಜಯ್ ನಟಿಸಿ, ಚೊಚ್ಚಲ ಬಾರಿಗೆ ನಿರ್ದೇಶಿಸಿರುವ ಸಲಗ ಚಿತ್ರ ಬಿಡುಗಡೆಯಾಗುತ್ತಿದೆ. ಕೆಪಿ ಶ್ರೀಕಾಂತ್ ಈ ಚಿತ್ರ ನಿರ್ಮಿಸಿದ್ದು, ಡಾಲಿ ಧನಂಜಯ್, ಸಂಜನಾ ಪ್ರಕಾಶ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

  English summary
  SALAGA movie organise Pre release event before release. Siddaramaiah will be chief guest for event.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X