For Quick Alerts
  ALLOW NOTIFICATIONS  
  For Daily Alerts

  ಸಿದ್ದರಾಮಯ್ಯ ಬಜೆಟ್ ನಲ್ಲಿ ಕನ್ನಡ ಚಿತ್ರರಂಗಕ್ಕೆ ಸಿಕ್ಕ ಕೊಡುಗೆ

  By Bharath Kumar
  |
  ಸಿದ್ದರಾಮಯ್ಯ ಬಜೆಟ್ ನಲ್ಲಿ ಕನ್ನಡ ಚಿತ್ರರಂಗಕ್ಕೆ ಸಿಕ್ಕ ಕೊಡುಗೆ | Filmibeat Kannada

  ಮುಖ್ಯಮಂತ್ರಿ ಸಿದ್ದರಾಮಯ್ಯ ಅಂತಿಮ ಬಜೆಟ್ ಮಂಡಿಸಿದ್ದಾರೆ. ಚುನಾವಣಾ ಪೂರ್ವ ಈ ಬಜೆಟ್ ನಲ್ಲಿ ಯಾವ ಯಾವ ಕ್ಷೇತ್ರಕ್ಕೆ ಏನೆಲ್ಲ ಕೊಡುಗೆಗಳು ಸಿಗಬಹುದು ಎಂಬ ನಿರೀಕ್ಷೆ ಜನರನ್ನ ಕಾಡಿತ್ತು. ಅದೇ ರೀತಿ ಕನ್ನಡ ಚಿತ್ರರಂಗ ಕೂಡ ಸಿದ್ದು ಅವರ ಈ ಬಜೆಟ್ ಬಗ್ಗೆ ಭರವಸೆ ಇಟ್ಟುಕೊಂಡಿದ್ದರು.

  ಸಿದ್ದರಾಮಯ್ಯ ಸರ್ಕಾರ ಮಂಡಿಸಿರುವ ಬಜೆಟ್ ನಲ್ಲಿ ಸ್ಯಾಂಡಲ್ ವುಡ್ ಇಂಡಸ್ಟ್ರಿಗೆ ಕೆಲವು ಉತ್ತಮ ಯೋಜನೆಗಳು ಘೋಷಣೆಯಾಗಿದೆ. ಚಿತ್ರರಂಗಕ್ಕೆ ಸಂಬಂಧಿಸಿದ ಪ್ರಮುಖ ಅಂಶಗಳು ಇಂತಿವೆ....

  ಡಾ ರಾಜ್ ಯೋಗ ಕೇಂದ್ರ ಸ್ಥಾಪನೆಗೆ ಮುಂದಾದ ಸಿದ್ದರಾಮಯ್ಯ ಸರ್ಕಾರ

  * ಡಾ ರಾಜ್ ಕುಮಾರ್ ಸ್ಮಾರಕದ ಬಳಿ ಯೋಗ ಕೇಂದ್ರ ನಿರ್ಮಾಣ ಮಾಡುವುದಾಗಿ ಘೋಷಣೆ ಮಾಡಿದ್ದಾರೆ.

  * ಚಲನಚಿತ್ರ ಕಾರ್ಮಿಕರು, ತಂತ್ರಜ್ಞರ ಆರೋಗ್ಯ ಸೌಲಭ್ಯ ಒದಗಿಸಲು ''ಚಲನಚಿತ್ರ ಕಾರ್ಮಿಕರ ದತ್ತಿನಿಧಿ'' ಸ್ಥಾಪಿಸಿ 10.00 ಕೋಟಿ ರೂಪಾಯಿ ಅನುದಾನ ಒದಗಿಸಿದೆ.

  * ಕರ್ನಾಟಕ ಚಲನಚಿತ್ರ ಅಕಾಡೆಮಿಯ 'ಜೇನುಗೂಡು' ಕಥಾ ಕಣಜದಿಂದ ಕಥೆಗಳನ್ನು ಆಯ್ದುಕೊಂಡು ಚಲನಚಿತ್ರ ನಿರ್ಮಿಸುವ ನಿರ್ಮಾಪಕರಿಗೆ ತಲಾ 20 ಲಕ್ಷ ರೂ ಮತ್ತು ಕಥಾ ಲೇಖಕರಿಗೆ ತಲಾ 5 ಲಕ್ಷ ರೂಗಳ ವಿಶೇಷ ಸಹಾದ ಧನವನ್ನು ಪ್ರತಿ ವರ್ಷ 8 ಚಲನಚಿತ್ರಗಳಿಗೆ ನೀಡಲಾಗವುದು.

  * 2018-2019ನೇ ಸಾಲಿನಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗೆ ಒಟ್ಟಾರೆಯಾಗಿ 239 ಕೋಟಿ ರೂಗಳನ್ನು ಒದಗಿಸಲಾಗುವುದು.

  * ಮೊಟ್ಟಮೊದಲ ಬಾರಿಗೆ ಚಲನಚಿತ್ರ ಪ್ರವಾಸೋದ್ಯಮ ನೀತಿಯನ್ನು ಜಾರಿಗೆ ತರಲಾಗುತ್ತದೆ.

  * ಕಲಬುರಗಿಯಲ್ಲಿ ಉತ್ತರ ಕರ್ನಾಟಕದ ಕಲೆ, ಸಂಸ್ಕೃತಿ ಪರಂಪರೆ ಬಿಂಬಿಸುವ 'ಕಲಬುರಗಿ ಕಲಾವನ' ನಿರ್ಮಾಣ

  ಡಾ ರಾಜ್ ಕುಮಾರ್ ಯೋಗ ಕೇಂದ್ರ ನಿರ್ಮಾಣದ ಬಗ್ಗೆ ಫಿಲ್ಮಿ ಬೀಟ್ ಕನ್ನಡದ ಜೊತೆ ಮಾತನಾಡಿದ ರಾಘವೇಂದ್ರ ರಾಜ್ ಕುಮಾರ್ "ವಿಚಾರ ಕೇಳಿ ತುಂಬಾ ಖುಷಿ ಆಗಿದೆ. ಅಪ್ಪಾಜಿ ಅವರೇ ಇದನ್ನ ಮಾಡಿಸಿಕೊಳ್ಳುತ್ತಾರೆ ಅಂದರೆ ಅವರಿಗಿರುವ ಖ್ಯಾತಿ ಮತ್ತು ಅಭಿಮಾನಿಗಳಿಂದ ಅವರಿಗೆ ಸಲ್ಲಬೇಕಾದದ್ದು ಎಲ್ಲವೂ ಸಲ್ಲುತ್ತದೆ ಎನ್ನುವುದು ತಿಳಿದಿದ್ದು. ಇದಕ್ಕಾಗಿ ಕೆಲಸ ಮಾಡಿದ ಪ್ರತಿಯೊಬ್ಬರಿಗೂ ಧನ್ಯವಾದ ತಿಳಿಸುತ್ತೇನೆ" ಎಂದಿದ್ದಾರೆ.

  English summary
  Chief Minister Siddaramaiah announced Dr Rajkumar Yoga Kendra at Rajakumar memorial on the Karnataka budget 2018-19.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X