»   » ಪಾರ್ವತಮ್ಮ ಅವರಿಗೆ ಮೊಮ್ಮಗನ ಪ್ರೀತಿಯ ಉಡುಗೊರೆ

ಪಾರ್ವತಮ್ಮ ಅವರಿಗೆ ಮೊಮ್ಮಗನ ಪ್ರೀತಿಯ ಉಡುಗೊರೆ

Posted By:
Subscribe to Filmibeat Kannada

ಇಡೀ ಸ್ಯಾಂಡಲ್ ವುಡ್ ನಲ್ಲೇ ದೊಡ್ಮನೆ ಕುಟುಂಬ ಅಂತ ಗುರುತಿಸಿಕೊಂಡಿರುವ ಪ್ರತಿಷ್ಠಿತ ಫ್ಯಾಮಿಲಿ ಡಾ.ರಾಜ್ ಕುಮಾರ್ ರದ್ದು. ಇಂತಹ ಕುಟುಂಬದ ಒಂದೊಂದು ಕುಡಿ ಚಿತ್ರರಂಗಕ್ಕೆ ಎಂಟ್ರಿಕೊಟ್ಟಾಗಲೂ ಗಾಂಧಿನಗರದ ನೆಲ ಅಲ್ಲಾಡಿದೆ. ಇದೀಗ ಅಂತದ್ದೇ ಸಂಚಲನ ಮೂಡಿಸುವುದಕ್ಕೆ ಅಣ್ಣಾವ್ರ ಕುಟುಂಬದ ಮರಿ ಕುಡಿ ಸರ್ವ ಸನ್ನದ್ಧವಾಗಿದೆ.

ಎಲ್ಲರಿಗೂ ಗೊತ್ತಿರುವ ಹಾಗೆ, ರಾಘವೇಂದ್ರ ರಾಜ್ ಕುಮಾರ್ ರವರ ಪುತ್ರ ವಿನಯ್ ರಾಜ್ ಬೆಳ್ಳಿತೆರೆ ಮೇಲೆ ಮಿಂಚುವುದಕ್ಕೆ ಇನ್ನು ಕೆಲವೇ ತಿಂಗಳುಗಳು ಬಾಕಿ. ಅಕ್ಷಯ ತೃತೀಯದ ಶುಭ ಮುಹೂರ್ತದಂದು 'ಸಿದ್ಧಾರ್ಥ' ಚಿತ್ರಕ್ಕೆ ಚಾಲನೆ ಕೊಟ್ಟಿದ್ದ ವಿನಯ್, ಇದೀಗ ಶೂಟಿಂಗ್ ಕಂಪ್ಲೀಟ್ ಮಾಡಿದ್ದಾರೆ. ['ಸಿದ್ದಾರ್ಥ'ನಾಗಿ ವಿನಯ್ ರಾಜ್ ಗ್ರ್ಯಾಂಡ್ ಎಂಟ್ರಿ]

Parvathamma Rajkumar

ಇದೇ ಭಾನುವಾರ ( ಡಿಸೆಂಬರ್ 14) 'ಸಿದ್ಧಾರ್ಥ' ಚಿತ್ರದ ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮ ಅರಮನೆ ಮೈದಾನದಲ್ಲಿ ಅದ್ದೂರಿಯಾಗಿ ನೆರವೇರಲಿದೆ. ವಿ.ಹರಿಕೃಷ್ಣ ಸಂಗೀತ ಸಂಯೋಜಿಸಿರುವ 'ಸಿದ್ಧಾರ್ಥ'ನ ಹಾಡುಗಳು ನಾಳೆ ಮಾರುಕಟ್ಟೆಗೆ ಲಗ್ಗೆ ಇಡಲಿವೆ. ವಿಶೇಷ ಅಂದ್ರೆ, ಇದೇ ಸಂದರ್ಭದಲ್ಲಿ ಕನ್ನಡ ಚಿತ್ರರಂಗದ 'ಅಮ್ಮ' ಶ್ರೀಮತಿ ಪಾರ್ವತಮ್ಮ ರಾಜ್ ಕುಮಾರ್ ರವರ 75ನೇ ಹುಟ್ಟುಹಬ್ಬದ ಸಂಭ್ರಮಾಚರಣೆ ಕೂಡ ನಡೆಯಲಿದೆ.

ಇದೇ ತಿಂಗಳ 6 ರಂದು ಶ್ರೀಮತಿ ಪಾರ್ವತಮ್ಮ ರಾಜ್ ಕುಮಾರ್ ರವರು ತಮ್ಮ 75ನೇ ವಸಂತಕ್ಕೆ ಕಾಲಿಟ್ಟರು. ಅಜ್ಜಿಯ ಈ 75ನೇ ಬರ್ತಡೇ ಸೆಲೆಬ್ರೇಷನ್ ನ ಗ್ರ್ಯಾಂಡಾಗಿ ಮಾಡಬೇಕು ಅಂತ ಪ್ಲಾನ್ ಮಾಡಿರುವ ಮೊಮ್ಮಗ ವಿನು, ತಮ್ಮ 'ಸಿದ್ಧಾರ್ಥ' ಆಡಿಯೋ ರಿಲೀಸ್ ಜೊತೆಗೆ ಅಜ್ಜಿಯ ಬರ್ತಡೇ ಪಾರ್ಟಿ ಕೂಡ ಹಮ್ಮಿಕೊಂಡಿದ್ದಾರೆ. [ಬಿಡುಗಡೆಗೆ ಮುನ್ನವೇ ದಾಖಲೆ ಬರೆದ 'ಸಿದ್ದಾರ್ಥ']

ಇದಕ್ಕಾಗಿ ಕನ್ನಡ ಚಿತ್ರರಂಗದ ಗಣ್ಯಾತಿಗಣ್ಯರನ್ನು ಅರಮನೆ ಮೈದಾನದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ. ಅಜ್ಜಿಯ ಹುಟ್ಟುಹಬ್ಬ ಸಂಭ್ರಮದ ಜೊತೆಗೆ 'ಸಿದ್ಧಾರ್ಥ' ಹಾಡುಗಳನ್ನ 'ಪಾರ್ವತಮ್ಮ'ನವರ ಹೆಸರಲ್ಲಿ ಅರ್ಪಣೆ ಮಾಡುವ ಮೂಲಕ, ವಿನು ಅಜ್ಜಿಗೆ ಅಮೂಲ್ಯ ಉಡುಗೊರೆ ನೀಡಲಿದ್ದಾರೆ.

Vinay Rajkumar

ಹಾಗೆನೋಡಿದರೆ, ಡಾ.ರಾಜ್ ಹುಟ್ಟುಹಬ್ಬದಂದೇ ವಿನಯ್, ತಮ್ಮ ಬಣ್ಣದ ಬದುಕಿಗೆ ಕಾಲಿಡ್ಬೇಕಿತ್ತು. ಆದರೆ ಅನಿರ್ವಾರ್ಯ ಕಾರಣಗಳಿಂದ ಅದು ಸಾಧ್ಯವಾಗದ ಹಿನ್ನಲೆಯಲ್ಲಿ ಅಜ್ಜಿಯ ಹುಟ್ಟುಹಬ್ಬಕ್ಕೆ ಈ ಸ್ಪೆಷಲ್ ಪ್ಲಾನ್ ಮಾಡಲಾಗಿದ್ಯಂತೆ.

ಕೇಕ್ ಕತ್ತರಿಸುವ ಮೂಲಕ ಶ್ರೀಮತಿ ಪಾರ್ವತಮ್ಮ ರಾಜ್ ಕುಮಾರ್ ಹುಟ್ಟುಹಬ್ಬವನ್ನು ಆಚರಿಸಿಕೊಂಡರೆ, ಅದೇ ವೇದಿಕೆಯಲ್ಲಿ 'ಸಿದ್ಧಾರ್ಥ'ನ ಗಾನಬಜಾನ ಶುರುವಾಗಲಿದೆ. 'ಮಿಲನ' ಪ್ರಕಾಶ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿರುವುದರಿಂದ 'ಸಿದ್ಧಾರ್ಥ'ನ ಬಗ್ಗೆ ಮತ್ತು 'ಸಿದ್ಧಾರ್ಥ'ನ ಗಾಯನದ ಬಗ್ಗೆ ತುಂಬಾ ನಿರೀಕ್ಷೆಯಿದೆ. [ವಿದೇಶ ಸುತ್ತಿ ಬಂದ ವಿನಯ್ ರಾಜ್ 'ಸಿದ್ದಾರ್ಥ']

ಗಿಟಾರ್ ಹಿಡಿದು ವಿನಯ್ ಈಗಾಗಲೇ ಪೋಸ್ ಕೊಟ್ಟಿರುವುದರಿಂದ 'ಸಿದ್ಧಾರ್ಥ' ಮ್ಯೂಸಿಕಲ್ ಸಿನಿಮಾ ಅನ್ನುವುದು ಮೇಲ್ನೋಟಕ್ಕೆ ಖಾತ್ರಿಯಾಗಿದೆ. ಅದಕ್ಕೆ ಹರಿಕೃಷ್ಣ ಕೃಪೆ ಹೇಗಿದೆ ಅನ್ನುವುದು ನಾಳೆ ಗೊತ್ತಾಗಲಿದೆ. (ಫಿಲ್ಮಿಬೀಟ್ ಕನ್ನಡ)

English summary
Raghavendra Rajkumar's son Vinay Rajkumar starrer 'Siddhartha', audio releasing December 14th along with the 75th Birthday Celebration of Smt.Parvathamma Rajkumar.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada