For Quick Alerts
  ALLOW NOTIFICATIONS  
  For Daily Alerts

  ಬೆಂಗಳೂರಿನಲ್ಲಿ ವೀಣಾ ಮಲಿಕ್ ಆಸ್ಪತ್ರೆಗೆ ದಾಖಲು

  By Rajendra
  |

  ಈಗ ಇಡೀ ಕರ್ನಾಟಕದಾದ್ಯಂತ ತಾರೆ ವೀಣಾ ಮಲಿಕ್ ಜಪ ಶುರುವಾಗಿದೆ. ಅವರ ಬಹುನಿರೀಕ್ಷೆಯ ಚಿತ್ರ ಸಿಲ್ಕ್ ಸಖತ್ ಹಾಟ್ ಚಿತ್ರ ಇದೇ ಆಗಸ್ಟ್ 2ರಂದು ತೆರೆಗೆ ಅಪ್ಪಳಿಸುತ್ತಿದೆ. ಈ ಹಿನ್ನೆಲೆಯಲ್ಲಿ ಚಿತ್ರದ ಪ್ರಚಾರವೂ ಭರದಿಂದ ಸಾಗಿದೆ. ವೀಣಾ ಮಲಿಕ್ ಸಹ ಬೆಂಗಳೂರಿನಲ್ಲೇ ಉಳಿದುಕೊಂಡಿದ್ದು ಪ್ರಚಾರದಲ್ಲಿ ಬಿಜಿಯಾಗಿದ್ದಾರೆ.

  ಎಲ್ಲಾ ನ್ಯೂಸ್ ಚಾನಲ್ ಗಳು, ಮನರಂಜನಾ ವಾಹಿನಿಗಳು, ಎಫ್ಎಂ ರೇಡಿಯೋಗಳಿಂದ ಚಿತ್ರತಂಡಕ್ಕೆ ಎಲ್ಲಿಲ್ಲದ ಪ್ರಚಾರ ನೀಡಲಾಗುತ್ತಿದೆ. ಈ ಅಬ್ಬರದ ಪ್ರಚಾರದಲ್ಲಿ ನಟ ಅಕ್ಷಯ್ ಹಾಗೂ ವೀಣಾ ಮಲಿಕ್ ಇಬ್ಬರೂ ಪಾಲ್ಗೊಳ್ಳುತ್ತಿದ್ದಾರೆ.

  ಒಂದೆಡೆ ರಂಜಾನ್ ಉಪವಾಸ. ಇನ್ನೊಂದೆಡೆ ಬಿಡುವಿಲ್ಲದ ಪ್ರಚಾರ. ಈ ಎಲ್ಲಾ ಕಾರಣಗಳಿಂದ ವೀಣಾ ಮಲಿಕ್ ಸಖತ್ ದಣಿದಿದ್ದಾರೆ. ಕಡೆಗೆ ಅವರು ಅಸ್ವಸ್ಥರೂ ಆಗಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಚಿಕಿತ್ಸೆ ಬಳಿಕ ಚೇತರಿಸಿಕೊಂಡಿರುವ ಅವರು ಈಗ ವಿಶ್ರಾಂತಿ ಪಡೆಯುತ್ತಿದ್ದಾರೆ.

  ಆಗಸ್ಟ್ 2ರಂದು ಮಲ್ಟಿಫ್ಲೆಕ್ಸ್ ಚಿತ್ರಮಂದಿರಗಳೂ ಸೇರಿದಂತೆ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಲ್ಲಿ 'ಸಿಲ್ಕ್' ಚಿತ್ರ ಬಿಡುಗಡೆಯಾಗುತ್ತಿದೆ. ರಾಜ್ಯದಾದ್ಯಂತ ಸರಿಸುಮಾರು 140 ಚಿತ್ರಮಂದಿರಗಳಲ್ಲಿ ಸಿಲ್ಕ್ ಆಟ ಶುರುವಾಗುತ್ತಿದೆ. [ಹತ್ತು ರಸಗಳ ಚಿತ್ರ 'ಸಿಲ್ಕ್', ತ್ರಿಶೂಲ್ ಸಂದರ್ಶನ]

  ಚಿತ್ರದಲ್ಲಿನ ಹಾಟ್ ದೃಶ್ಯಗಳು, ವೀಣಾ ಮಲಿಕ್ ಆಕರ್ಷಣೆ, ಏನಿದು ಕಥೆ ಎಂಬ ಕುತೂಹಲದ ಪ್ರಶ್ನೆಗಳಿಗೆ ಇದೇ ಶುಕ್ರವಾರ (ಆ.2) ಉತ್ತರ ಸಿಗಲಿದೆ. ನಿಮ್ಮ ನೆಚ್ಚಿನ ಅಂತರ್ಜಾಲ ತಾಣ ಒನ್ಇಂಡಿಯಾ ಕನ್ನಡದಲ್ಲಿ ಚಿತ್ರ ವಿಮರ್ಶೆ ಮೂಡಿ ಬರಲಿದೆ ನಿರೀಕ್ಷಿಸಿ. (ಒನ್ಇಂಡಿಯಾ ಕನ್ನಡ)

  English summary
  Kannada film Silk Sakkat Hot actress Veena Malik admits private hospital in Bangalore. She was down with fatigue due to Ramzan fast and excessive promotional activities. The actress discharged from the hospital and she is fine now.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X