Just In
Don't Miss!
- News
ಕೇಂದ್ರ ಬಜೆಟ್ 2021:ಬೆಂಗಳೂರಿನ ನಿರೀಕ್ಷೆಗಳೇನು?
- Sports
ಟೆಸ್ಟ್ ಪದಾರ್ಪಣೆ ಹಾಗೂ ಸರಣಿ ಗೆಲುವು, ಕನಸು ನನಸಾದ ಸಂದರ್ಭ: ವಾಶಿಂಗ್ಟನ್ ಸುಂದರ್
- Finance
"ಟಿಕ್ ಟಾಕ್ ಸೇರಿ ಚೀನಾದ ಕೆಲವು ಆಪ್ ಗಳಿಗೆ ಭಾರತದಲ್ಲಿ ಶಾಶ್ವತ ನಿಷೇಧ"
- Automobiles
ಕರೋಕ್ ಎಸ್ಯುವಿಯನ್ನು ಸ್ಥಳೀಯವಾಗಿ ಅಭಿವೃದ್ಧಿಪಡಿಸಲಿದೆ ಸ್ಕೋಡಾ
- Lifestyle
ವಾರ ಭವಿಷ್ಯ: 12 ರಾಶಿಗಳ ರಾಶಿ ಫಲ ಹೇಗಿದೆ ನೋಡಿ
- Education
NIT Recruitment 2021: ರಿಸರ್ಚ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಸಿಲ್ಕ್ ಸ್ಮಿತಾರನ್ನ ದೈಹಿಕವಾಗಿ ಹಿಂಸಿಸಿದ್ದರು ಆ ನಿರ್ಮಾಪಕರು, ವಿತರಕರು.!
80-90ರ ದಶಕದಲ್ಲಿ ಸೌತ್ ಇಂಡಸ್ಟ್ರಿಯಲ್ಲಿ ಬಹಳ ದೊಡ್ಡ ಸದ್ದು ಮಾಡಿದ್ದ ನಟಿ ಸಿಲ್ಕ್ ಸ್ಮಿತಾ. ಸ್ಟಾರ್ ನಟ, ನಟಿಯರನ್ನ ಮೀರಿ ಈ ನಟಿ ಸಂಚಲನ ಸೃಷ್ಟಿಸಿದ್ದಳು. ಎಲ್ಲರಿಗಿಂತ ಹೆಚ್ಚು ಸಂಭಾವನೆಯೂ ಪಡೆಯುತ್ತಿದ್ದರು ಎಂಬುದು ಆಕೆಗಿದ್ದ ಬೇಡಿಕೆ ಹೇಳುತ್ತಿತ್ತು.
ತಮಿಳು ಚಿತ್ರರಂಗದಿಂದ ತನ್ನ ಸಿನಿವೃತ್ತಿ ಆರಂಭಿಸಿದ ಸಿಲ್ಕ್ ಸ್ಮಿತಾ ತೆಲುಗು, ಮಲಯಾಳಂ, ಕನ್ನಡ ಹಾಗೂ ಹಿಂದಿ ಸಿನಿಮಾಗಳಲ್ಲಿ ಸುಮಾರು 450ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಬಹುತೇಕ ಐಟಂ ಹಾಡುಗಳಿಗೆ ಹೆಜ್ಜೆ ಹಾಕಿರುವ ದಾಖಲೆಯೂ ಇದೆ.
ಕಪ್ಪು ಬಿಳುಪಿನಲ್ಲಿ ಕಾಡುವ ಸಿಲ್ಕ್ ಸ್ಮಿತಾ ಚಿತ್ರಗಳು
ಇಂತಹ ನಟಿ ಚೆನ್ನೈನಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು ಯಾರೂ ಮರೆತಿಲ್ಲ. ಇಂತಹ ನಟಿಯ ಬಾಳಲ್ಲಿ ಅನೇಕ ಕಷ್ಟಗಳು ಎದುರಾಗಿದ್ದವಂತೆ. ಸಿನಿಮಾ ನಿರ್ಮಾಪಕರು, ವಿತರಕರು ಈಕೆಯೆ ಮೇಲೆ ದೈಹಿಕವಾಗಿ ಮತ್ತು ಮಾನಸಿಕವಾಗಿ ದೌರ್ಜನ್ಯವೆಸಗಿದ್ದರಂತೆ. ಸಿಲ್ಕ್ ಸ್ಮಿತಾ ಬಗ್ಗೆ ಅವರ ಜೊತೆ ಒಡನಾಟ ಹೊಂದಿದ್ದ ರಾಮಾರಾವ್ ಈಗ ಆ ಕಹಿಘಟನೆಗಳನ್ನ ಸಂದರ್ಶನವೊಂದರಲ್ಲಿ ಬಿಚ್ಚಿಟ್ಟಿದ್ದಾರೆ. ಮುಂದೆ ಓದಿ....

ದೈಹಿಕವಾಗಿ ಹಿಂಸೆ ಮಾಡಿದ್ದಾರೆ
'ಸಿಲ್ಕ್ ಸ್ಮಿತಾ ಬಹಳ ಶಕ್ತಿಯುತ ಮನೋಭಾವನೆ ಹೊಂದಿದ್ದರು. ನೋಡಲು ಸಹ ಅಷ್ಟೆ ಸುಂದರವಾಗಿಯೂ ಇದ್ದರು. ಆಕೆಗೆ ಪೊಗರು ಹೆಚ್ಚಿದೆ ಎಂದು ಅನೇಕರು ಹೇಳುತ್ತಿದ್ದರು. ಆಕೆ ಹಾಗೆ ಆಗಲು ಕಾರಣ, ಆರಂಭದಲ್ಲಿ ಸ್ಮಿತಾ ಎದುರಿಸಿದ ಕಷ್ಟಗಳು, ಅವಮಾನಗಳು. ಸಿನಿಮಾ ಶೂಟಿಂಗ್ ಮುಗಿದ ಮೇಲೂ ಪ್ರೊಡಕ್ಷನ್ ಅವರು ಆಕೆಯನ್ನ ಮಾನಸಿಕವಾಗಿ, ದೈಹಿಕವಾಗಿ ಹಿಂಸಿಸುತ್ತಿದ್ದರು ಎಂದು ರಾಮಾರಾವ್ ಹೇಳಿಕೊಂಡಿದ್ದಾರೆ'
ಪ್ರಣಯದ ಸರಿಗಮ ಮೀಟಿದ ಸಿಲ್ಕ್ ಸ್ಮಿತಾ ಚಿತ್ರಗಳು

ನಿರ್ಮಾಪಕ, ವಿತರಕ, ಫೈನಾನ್ಸರ್ ಗಳು ಕೂಡ
'ಪ್ರೊಡ್ಯೂಸರ್ ಗಳು ಸಂಜೆ ಎಲ್ಲರನ್ನ ಕಳುಹಿಸಿ ಸಿಲ್ಕ್ ಸ್ಮಿತಾ ಅವರನ್ನ ಮಾತ್ರ ಉಳಿಸಿಕೊಳ್ಳುತ್ತಿದ್ದರು. ಕಾಟೇಜ್ ನಲ್ಲಿ ಕೂರಿಸಿಕೊಂಡು, ಸ್ನಾಕ್ಸ್ ತಿನ್ನೋಣ ಅಂತ ಹೇಳಿ ಎರಡು ಪೆಗ್ ಹಾಕಿಸುತ್ತಿದ್ದರು. ಆ ನಂತರ ನಡೆಯಬೇಕಾಗಿದ್ದು ನಡೆಯುತ್ತಿತ್ತು. ನಿರ್ಮಾಪಕರು ಮಾತ್ರವಲ್ಲ, ವಿತರಕರು, ಫೈನ್ಸಾರ್ ಗಳು ಕೂಡ ಆಕೆಗೆ ಹಿಂಸೆ ನೀಡಿದ್ದಾರೆ'
ತುಂಬು ತೊಡೆ, ಮೃದು ಲೈಂಗಿಕತೆಯ ಮೋಹಕ ನಟಿ ಸಿಲ್ಕ್

ಮನಸ್ಸಿನಲ್ಲೇ ನೋವು ಅನುಭವಿಸುತ್ತಿದ್ದರು
'ನಿರ್ಮಾಪಕರು, ವಿತರಕರು, ಫೈನ್ಸಾರ್ ಗಳು ಎಷ್ಟೇ ಹಿಂಸೆ ನೀಡಿದರೂ ಆ ಎಲ್ಲ ನೋವನ್ನ ತನ್ನ ಮನಸ್ಸಿನಲ್ಲೇ ಇಟ್ಟುಕೊಂಡು ನೋವು ಅನುಭವಿಸಿದರು. ಸಿನಿಮಾ ಇಂಡಸ್ಟ್ರಿಯಲ್ಲಿ ಇದೆಲ್ಲ ಸಹಜ, ಇದಕ್ಕೆ ಮೊದಲೇ ತಯಾರಾಗಿ ಬರಬೇಕು. ಇದನ್ನ ತಡೆದುಕೊಳ್ಳಬೇಕು ಎಂದು ಸಿಲ್ಕ್ ಸ್ಮಿತಾ ಹೇಳುತ್ತಿದ್ದರಂತೆ.
ಬಾರ್ ಗರ್ಲ್ 'ಸಿಲ್ಕ್ ಸ್ಮಿತಾ' ಆಗಿದ್ದು ಹೇಗೆ ?

ದುಡ್ಡಿದ್ದರೂ ಮನಃಶಾಂತಿ ಇಲ್ಲ ಎಂದು ಕೊರಗುತ್ತಿದ್ದರು
'ದುಡ್ಡಿದ್ದರೇ ಸುಖಪಡಬಹುದು ಎಂದುಕೊಳ್ಳಬಹುದು. ಆದ್ರೆ, ಆಕೆಯ ಬಳಿ ಹೆಚ್ಚು ದುಡ್ಡಿತ್ತು. ಆದ್ರೆ, ಸುಖ, ಮನಃಶಾಂತಿ ಇಲ್ಲ ಎಂದು ಕೊರಗುತ್ತಿದ್ದಳಂತೆ. ಇದು ಸಿಲ್ಕ್ ಸ್ಮಿತಾ ಅವರನ್ನ ಮಾನಸಿಕವಾಗಿ ಚುಚ್ಚುತ್ತಿತ್ತು. ಆಕೆಯ ಸ್ನೇಹಿತ ರಾಧಾಕೃಷ್ಣ ಅವರಿಂದ ಕೂಡ ತುಂಬಾ ಕಷ್ಟ ಅನುಭವಿಸಿದ. ಆತ ಬ್ಲಾಕ್ ಮೇಲ್ ಮಾಡುತ್ತಿದ್ದ' ಎಂದು ರಾಮಾರಾವ್ ತಿಳಿಸಿದ್ದಾರೆ.

ದಿನಕ್ಕೆ ಒಂದು ಲಕ್ಷ
''ಆಗಿನ ಕಾಲಕ್ಕೆ ಸಿಲ್ಕ್ ಸ್ಮಿತಾ ಅವರ ಕಾಲ್ ಶೀಟ್ ಬೇಕು ಅಂದಿದ್ದರೇ, ಸಿನಿಮಾ ಸಂಭಾವನೆ ಬಿಟ್ಟು ದಿನಕ್ಕೆ ಒಂದು ಲಕ್ಷ ಹಣ ನೀಡಬೇಕಿತ್ತು. ಆಕೆಯ ಡೇಟ್ ಪಡೆಯಲು ಕೈಯಲ್ಲಿ ಐದಾರು ಲಕ್ಷ ಇಟ್ಕೊಂಡು ಬೆಳಿಗ್ಗೆನೇ ಬಂದು ಸ್ಮಿತಾನ ಕರೆದುಕೊಂಡು ಹೋಗುತ್ತಿದ್ದರು. ಬಂದ ಹಣವನ್ನೆಲ್ಲಾ ರಾಧಾಕೃಷ್ಣ ಬಳಿ ಬ್ಯಾಂಕಿನಲ್ಲಿ ಇಡಲು ಕೊಡುತ್ತಿದ್ದರು'' ಎಂದು ರಾಮಾರಾವ್ ನೆನಪು ಮೆಲುಕು ಹಾಕಿದ್ದಾರೆ.