»   » ಸುದೀಪ್ ಕಣ್ಣಲ್ಲಿ 'ವಿಷ್ಣು'ದಾದರನ್ನ ಕಂಡ ಅಭಿಮಾನಿ

ಸುದೀಪ್ ಕಣ್ಣಲ್ಲಿ 'ವಿಷ್ಣು'ದಾದರನ್ನ ಕಂಡ ಅಭಿಮಾನಿ

Posted By:
Subscribe to Filmibeat Kannada
ಸುದೀಪ್ ಕಣ್ಣಲ್ಲಿ 'ವಿಷ್ಣು'ದಾದರನ್ನ ಕಂಡ ಅಭಿಮಾನಿ | Filmibeat Kannada

ಕನ್ನಡ ಸಿನಿಮಾರಂಗದ ಮೇರು ನಟ ಡಾ.ವಿಷ್ಣುವರ್ಧನ್ ನಮ್ಮೆಲ್ಲರನ್ನ ಅಗಲಿ ಸಾಕಷ್ಟು ವರ್ಷಗಳು ಕಳೆದಿವೆ. ಆದ್ರೆ ಅವರ ನೆನಪು ಮಾತ್ರ ಇನ್ನೂ ಎಲ್ಲರ ಮನಸ್ಸಿನಲ್ಲಿ ಹಚ್ಚ ಹಸಿರಾಗಿದೆ.

ವಿಷ್ಣುದಾದರನ್ನ ನೆನಪಿಸಿಕೊಂಡಾಗಲೆಲ್ಲಾ ಅಭಿಮಾನಿಗಳು ಅವ್ರ ಜಾಗವನ್ನ ತುಂಬೋದಕ್ಕೆ ಸಾಧ್ಯವಿರುವುದು ಕಿಚ್ಚನಿಗೆ ಮಾತ್ರ ಎನ್ನುವ ಮಾತುಗಳನ್ನ ಆಡಿದ್ರು. ಇದೀಗ ಅದಕ್ಕೊಂದು ಉತ್ತಮ ಉದಾಹರಣೆ ನಮ್ಮ ಮುಂದೆ ಇದೆ. ಅದನ್ನ ನಿಮಗೂ ತಿಳಿಸ್ತೀವಿ, ಮುಂದೆ ಓದಿ.....

'ಸಾಹಸ ಸಿಂಹ'ನಾದ ಕಿಚ್ಚ ಸುದೀಪ್

ಕನ್ನಡ ಸಿನಿಮಾರಂಗದಲ್ಲಿ ಡಾ.ವಿಷ್ಣುವರ್ಧನ್ ರ ಸ್ಥಾನವನ್ನ ಯಾರು ತುಂಬ್ತಾರೆ ಅನ್ನೋ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಸಾಕಷ್ಟು ಬಾರಿ ಅಭಿಮಾನಿಗಳು ಕೇವಲ ಬಾಯಲ್ಲಿ ಕಿಚ್ಚ ಅವ್ರ ಸ್ಥಾನ ತುಂಬುವ ನಾಯಕ ಅಂತಿದ್ದರು. ಈಗ ಅದು ನಿಜ ಆಗಿದೆ. ಕಿಚ್ಚ ಸುದೀಪ್ ಇತ್ತೀಚಿಗೆ ವಿಷ್ಣುದಾದರನ್ನ ಹೋಲುತ್ತಿದ್ದಾರೆ ಅನ್ನೋದು ಅಭಿಮಾನಿಗಳ ಅಭಿಪ್ರಾಯ.

ವಿಲನ್ ಲುಕ್ ನಲ್ಲಿ ಸುದೀಪ್ 'ಸಾಹಸಸಿಂಹ'ನಂತೆ ಕಾಣ್ತಾರೆ

'ದಿ ವಿಲನ್' ಸಿನಿಮಾದ ಚಿತ್ರೀಕರಣದಲ್ಲಿ ಕಿಚ್ಚ ಸುದೀಪ್ ಭಾಗಿಯಾಗಿದ್ದಾರೆ. ಇತ್ತೀಚೆಗಷ್ಟೇ ಚಿಕ್ಕಮಗಳೂರಿನಲ್ಲಿ ಚಿತ್ರೀಕರಣ ಮುಗಿಸಿ ಮೈಸೂರಿಗೆ ಬಂದಿದ್ದಾರೆ. ಚಿಕ್ಕಮಗಳೂರಿನಲ್ಲಿ ಚಿತ್ರೀಕರಣದ ವೇಳೆಯಲ್ಲಿ ತೆಗೆದ ಫೋಟೋದಲ್ಲಿ ಕಿಚ್ಚನ ಕಣ್ಣುಗಳು 'ವಿಷ್ಣು'ದಾದ ಕಣ್ಣುಗಳನ್ನೇ ಹೋಲುತ್ತಿವೆ.

ನಿರ್ದೇಶಕರೇ ಹೇಳುವ ಮಾತು

ಹಲವು ನಿರ್ದೇಶಕರ ಪ್ರಕಾರ'ಸುದೀಪ್' ಅವ್ರ ವರ್ಕಿಂಗ್ ಸ್ಟೈಲ್ ವಿಷ್ಣುವರ್ಧನ್ ರಂತೆ ಇದೆಯಂತೆ, ನಿರ್ದೇಶಕ 'ರವಿ ಶ್ರೀವತ್ಸಾ' ಈ ಮಾತನ್ನ ಹಲವು ಬಾರಿ ಸಾಕಷ್ಟು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

'ವಿಷ್ಣು' ಜೊತೆಯೂ ಕೆಲಸ ಮಾಡಿದ್ದಾರೆ

ವಿಷ್ಣುವರ್ಧನ್ ರನ್ನ ತುಂಬಾ ಹತ್ತಿರದಿಂದ ನೋಡಿರುವ ನಿರ್ದೇಶಕ ರವಿ ಶ್ರೀವತ್ಸಾ ಸುದೀಪ್ ಜೊತೆಯಲ್ಲೂ ಕೆಲಸ ಮಾಡಿದ್ದಾರೆ. ಇಬ್ಬರಲ್ಲೂ ಸಾಕಷ್ಟು ಸಾಮ್ಯತೆಗಳಿದ್ದು ಇಬ್ಬರು ಒಂದೇ ರೀತಿಯ ಗುಣವನ್ನ ಹೊಂದಿದ್ದಾರೆ ಅಂತಾರೆ. ಸ್ಪೆಷಲ್ ಅಂದ್ರೆ ಕಿಚ್ಚ ಕೂಡ ವಿಷ್ಣು ಅವ್ರ ಅಪ್ಪಟ ಅಭಿಮಾನಿ ಅನ್ನೋದು.

English summary
Similarities between Vishnuvardhan and Sudeep

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada