For Quick Alerts
  ALLOW NOTIFICATIONS  
  For Daily Alerts

  ಪ್ರಭಾಸ್ ಮತ್ತು ಯಶ್ ನಡುವೆ ಇಷ್ಟೊಂದು ಸಾಮ್ಯತೆ ಇದ್ಯಾ.?

  |
  Kgf Kannada Movie: ಪ್ರಭಾಸ್ ಮತ್ತು ಯಶ್ ನಡುವೆ ಇಷ್ಟೊಂದು ಸಾಮ್ಯತೆ ಇದ್ಯಾ.? | FILMIBEAT KANNADA

  ಕನ್ನಡ ಚಿತ್ರರಂಗಕ್ಕೆ ಮಾತ್ರ ರಾಕಿಂಗ್ ಸ್ಟಾರ್ ಆಗಿದ್ದ ಯಶ್ ಈಗ ಸೌತ್ ಇಂಡಿಯಾ ಮಾತ್ರವಲ್ಲ, ಬಾಲಿವುಡ್ ಗೂ 'ಭಾಯ್' ಆಗಲು ಹೊರಟಿದ್ದಾರೆ. ಕೆಜಿಎಫ್ ಎಂಬ ಮಹಾಸಿನಿಮಾದ ಜೊತೆ ದಂಡಯಾತ್ರೆ ಹೊರಟಿರುವ ಯಶ್ ಹೊರರಾಜ್ಯಗಳಲ್ಲಿ ತನ್ನ ಸಾಮ್ರಾಜ್ಯ ನಿರ್ಮಿಸುತ್ತಾ ಹೆಜ್ಜೆ ಇಟ್ಟಿದ್ದಾರೆ.

  ಈ ನಡುವೆ ಕೆಜಿಎಫ್ ಹವಾ ನೋಡಿದ ಕೆಲವು ಮಂದಿ ಯಶ್ 'ಸೆಕೆಂಡ್ ಪ್ರಭಾಸ್' ಎನ್ನುತ್ತಿದ್ದಾರೆ. 'ಬಾಹುಬಲಿ' ಸಿನಿಮಾ ಮಾಡಿ ಪ್ರಭಾಸ್ ಹೇಗೆ ನ್ಯಾಷನಲ್ ಸ್ಟಾರ್ ಆದರೋ, ಅದೇ ರೀತಿ ಯಶ್ ಕೂಡ ಕೆಜಿಎಫ್ ನಂತರ ನ್ಯಾಷನಲ್ ಸ್ಟಾರ್ ಆಗಲಿದ್ದಾರೆ ಎಂದು ಭವಿಷ್ಯ ನುಡಿಯುತ್ತಿದ್ದಾರೆ.

  'ಪ್ರಭಾಸ್-ರಾಣಾರಂತೆ ನೀವು ಆಗ್ತೀರಾ' ಎಂದಿದ್ದಕ್ಕೆ ಯಶ್ ಏನಂದ್ರು.?

  'ಯಶ್ ಸೆಕೆಂಡ್ ಪ್ರಭಾಸ್' ಎಂಬ ಅಂಶವನ್ನಿಟ್ಟು ಹುಡುಕುತ್ತಾ ಹೊರಟರೇ ಇವರಿಬ್ಬರ ನಡುವೆ ಕೆಲವು ಸಾಮ್ಯತೆಗಳು ಕಂಡುಬಂದಿದೆ. ಇಬ್ಬರ ಸಿನಿಕರಿಯರನ್ ಆಲ್ ಮೋಸ್ಟ್ ಒಂದೇ ರೀತಿ ಇದೆ ಎನ್ನಬಹುದು. ಏನದು? ಮುಂದೆ ಓದಿ...

  ಪ್ರಭಾಸ್ 18, ಯಶ್ 19

  ಪ್ರಭಾಸ್ 18, ಯಶ್ 19

  2002ರಲ್ಲಿ ತೆರೆಕಂಡ 'ಈಶ್ವರ್' ಚಿತ್ರದ ಮೂಲಕ ನಾಯಕನಾದ ಪ್ರಭಾಸ್ ಇಲ್ಲಿಯವರೆಗೂ 18 ಚಿತ್ರಗಳಲ್ಲಿ ನಟಿಸಿದ್ದಾರೆ. 19ನೇ ಸಿನಿಮಾ 'ಸಾಹೋ' ಶೂಟಿಂಗ್ ನಡೆಯುತ್ತಿದೆ. ಅದೇ ರೀತಿ 'ಮೊಗ್ಗಿನ ಮನಸ್ಸು' ಚಿತ್ರದ ಮೂಲಕ ಪ್ರಮುಖ ನಟನಾಗಿ ಕಾಣಿಸಿಕೊಂಡ ಯಶ್ ಇದುವರೆಗೂ 19 ಸಿನಿಮಾದಲ್ಲಿ ನಟಿಸಿದ್ದಾರೆ. ಇದರಲ್ಲಿ ಮೂರು ಚಿತ್ರದಲ್ಲಿ ಅತಿಥಿ ಪಾತ್ರ ನಿರ್ವಹಿಸಿದ್ದಾರೆ. ಈಗ 20ನೇ ಸಿನಿಮಾ ಕೆಜಿಎಫ್. ಹಾಗ್ನೋಡಿದ್ರೆ, ಇಬ್ಬರ ಸಿನಿಮಾ ಸಂಖ್ಯೆಯಲ್ಲಿ ಅಷ್ಟಾಗಿ ವ್ಯತ್ಯಾಸವಿಲ್ಲ.

  'ಜೀರೋ' ಎದುರು 'ಕೆಜಿಎಫ್' ಬರ್ತಿರೋದಕ್ಕೆ ಕಾರಣ ಕೊಟ್ಟ ರಾಕಿಂಗ್ ಸ್ಟಾರ್

  ಬಾಹುಬಲಿ ಮತ್ತು ಕೆಜಿಎಫ್

  ಬಾಹುಬಲಿ ಮತ್ತು ಕೆಜಿಎಫ್

  'ಬಾಹುಬಲಿ' ಸಿನಿಮಾ ಬರೋವರೆಗೂ ಪ್ರಭಾಸ್ ಕೇವಲ ತೆಲುಗು ಸಿನಿಮಾಗಳನ್ನ ಮಾತ್ರ ಮಾಡಿದ್ದರು. ಬಾಹುಬಲಿಗೂ ಮುಂಚೆ ಪ್ರಭಾಸ್ ಮಾಡಿದ ಚಿತ್ರ 'ಮಿರ್ಚಿ'. ಬಾಹುಬಲಿ ಹಿಟ್ ಆದ್ಮೇಲೆ ಪ್ರಭಾಸ್ ಹಣೆಬರಹವೇ ಬದಲಾಯ್ತು. ಅದೇ ರಿತಿ ಕೆಜಿಎಫ್ ಸಿನಿಮಾ ಆಗೋವರೆಗೂ ಯಶ್ ಬರಿ ಕನ್ನಡ ಸಿನಿಮಾಗಳನ್ನ ಮಾತ್ರ ಮಾಡಿದ್ದಾರೆ. ಕೆಜಿಎಫ್ ಗೂ ಮುಂಚೆ 'ಸಂತು ಸ್ಟ್ರೈಟ್ ಫಾರ್ವಾಡ್' ಕೊನೆಯ ಚಿತ್ರ. ಈಗ ಕೆಜಿಎಫ್ ಮೂಲಕ ರಾಷ್ಟ್ರಾದ್ಯಂತ ಹೊರಟಿದ್ದಾರೆ. ಇಲ್ಲಿಯೂ ಪ್ರಭಾಸ್ ಮತ್ತು ಯಶ್ ಒಂದೇ ಹೆಜ್ಜೆ ಇಟ್ಟಿದ್ದಾರೆ.

  ಈ 'ಒಬ್ಬ ವ್ಯಕ್ತಿ' ಸಹಾಯದಿಂದಲೇ ತೆಲುಗು, ಹಿಂದಿಯಲ್ಲಿ 'ಕೆಜಿಎಫ್' ಘರ್ಜಿಸುತ್ತಿದೆ.!

  ಚಾಪ್ಟರ್-2 ಕಹಾನಿ

  ಚಾಪ್ಟರ್-2 ಕಹಾನಿ

  ಪ್ರಭಾಸ್ ಜೀವನದಲ್ಲಿ ಅತಿ ದೊಡ್ಡ ಯಶಸ್ಸು ತಂದು ಕೊಟ್ಟ ಸಿನಿಮಾ ಬಾಹುಬಲಿ ಎರಡು ಭಾಗಗಳಾಗಿ ಮೂಡಿಬಂದಿತ್ತು. ಬಾಹುಬಲಿ ದಿ ಬಿಗಿನಿಂಗ್ ಮತ್ತು ಬಾಹುಬಲಿ ದಿ ಕನ್ ಕ್ಲೂಷನ್. ಈಗ ಕೆಜಿಎಫ್ ಸಿನಿಮಾನೂ ಎರಡು ಚಾಪ್ಟರ್ ಆಗಿ ತೆರೆಗೆ ಬರ್ತಿದೆ. ಒಂದೇ ಹಂತದಲ್ಲಿ ಇಬ್ಬರು ಸಿನಿಮಾಗಳು, ಬಹುಭಾಷೆಯಲ್ಲಿ ಮತ್ತು ಎರಡು ಭಾಗಗಳಾಗಿ ಬರ್ತಿರೋದು ಗಮನಾರ್ಹ.

  ಪ್ರಶಾಂತ್ ನೀಲ್ ಹೇಳಿದ 'ಆ ಒಂದು' ಮಾತು ಈಗ ಸಿಕ್ಕಾಪಟ್ಟೆ ಚರ್ಚೆಯಾಗ್ತಿದೆ.!

  ಡೆಡಿಕೇಷನ್ ವಿಷ್ಯದಲ್ಲೂ ಮ್ಯಾಚ್

  ಡೆಡಿಕೇಷನ್ ವಿಷ್ಯದಲ್ಲೂ ಮ್ಯಾಚ್

  ಹಾಗ್ನೋಡಿದ್ರೆ ಬಾಹುಬಲಿ ಚಿತ್ರಕ್ಕಾಗಿ ಪ್ರಭಾಸ್ ಉಳಿದ ಚಿತ್ರಗಳನ್ನ ಕೈಬಿಟ್ಟರು. ನಾಲ್ಕೈದು ವರ್ಷ ಒಂದೇ ಚಿತ್ರಕ್ಕಾಗಿ ಕಾಲ್ ಶೀಟ್ ಕೊಟ್ಟರು. ಅದೇ ರೀತಿ ಯಶ್ ಕೂಡ ಕೆಜಿಎಫ್ ಚಿತ್ರಕ್ಕಾಗಿ ಡೆಡಿಕೇಟ್ ಮಾಡಿದ್ದಾರೆ. ಈ ಸಿನಿಮಾ ಮಧ್ಯೆ ಬೇರೆ ಯಾವ ಸಿನಿಮಾನೂ ಮಾಡಿಲ್ಲ. ಒಂದೇ ಚಿತ್ರಕ್ಕಾಗಿ ಗಡ್ಡ ಬಿಟ್ಟು ಮೂರು ವರ್ಷ ಇದ್ದರು. ಇಲ್ಲಿಯೂ ಇಬ್ಬರ ಡೆಡಿಕೇಷನ್ ಬಗ್ಗೆ ಚರ್ಚೆಯಾಗಿದೆ.

  ಅಂದು ಯಶ್ ಹೇಳಿದ್ದ ಒಂದೊಂದು ಮಾತು ಇಂದು ನಿಜ ಆಗ್ತಿದೆ.!

  ನ್ಯಾಷನಲ್ ಸ್ಟಾರ್ ಪಟ್ಟ

  ನ್ಯಾಷನಲ್ ಸ್ಟಾರ್ ಪಟ್ಟ

  ಬಾಹುಬಲಿ ಚಿತ್ರದ ಸಕ್ಸಸ್ ನಂಗರ ಪ್ರಭಾಸ್ ನ್ಯಾಷನಲ್ ಸ್ಟಾರ್ ಆಗೋದ್ರು. ಈಗ ಅದೇ ರೀತಿ ಯಶ್ ಕೂಡ ನ್ಯಾಷನಲ್ ಸ್ಟಾರ್ ಪಟ್ಟದತ್ತಿರ ಸಾಗುತ್ತಿದ್ದಾರೆ. ಈಗಾಗಲೇ ಯಶ್ ನ್ಯಾಷನಲ್ ಸ್ಟಾರ್ ಎಂದು ಕರೆಸಿಕೊಳ್ಳುತ್ತಿದ್ದಾರೆ. ಆದ್ರೆ, ಕೆಜಿಎಫ್ ಬಿಡುಗಡೆಯ ನಂತರ ಅದು ಅಧಿಕೃತವಾಗಿ 'ರಾಕಿ' ಮುಡಿಗೇರಲಿದೆ.

  'ಕೆಜಿಎಫ್'ಗೆ ಪ್ರಭಾಸ್ ವಿಶ್: ಒಟ್ಟಿಗೆ ಕಾಣಿಸಿದ ನ್ಯಾಷನಲ್ ಸ್ಟಾರ್ಸ್

  English summary
  We listed some major similarity between telugu actor Prabhas and kannada actor yash.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X