For Quick Alerts
  ALLOW NOTIFICATIONS  
  For Daily Alerts

  ಸಿನಿಮಾರಂಗದ ಹುಡುಗರ ಕನಸು ನನಸು ಮಾಡಿದ 'ಕಿಚ್ಚ'

  By Pavithra
  |

  ಟ್ವಿಟ್ಟರ್ ನಲ್ಲಿ ಬರೀ ಕಿಚ್ಚನ ಬಗ್ಗೆಯೇ ಮಾತು. ಇದಕ್ಕೆ ಕಾರಣ ಇತ್ತೀಚಿಗಷ್ಟೆ ನಡೆದ "ಕರ್ನಾಟಕ ಚಲನಚಿತ್ರ ಕಪ್" ಕ್ರಿಕೆಟ್ ಪಂದ್ಯಾವಳಿ. ಸಿನಿಮಾರಂಗದವರು ಒಟ್ಟಿಗೆ ಸೇರಬೇಕು, ಎಲ್ಲರೂ ಒಟ್ಟಾಗಿ ಇರಬೇಕು, ಎನ್ನುವ ನಿಟ್ಟಿನಲ್ಲಿ ಕಿಚ್ಚ ಸುದೀಪ್ ಆಯೋಜನೆ ಮಾಡಿದ್ದ ಕ್ರಿಕೆಟ್ ಮ್ಯಾಚ್ ಯಶಸ್ವಿ ಆಗಿದೆ. ಈ ಮೂಲಕ ಸುದೀಪ್ ಸಿನಿಮಾರಂಗದ ಹುಡುಗರ ಕನಸನ್ನು ನನಸು ಮಾಡಿದ್ದಾರೆ.

  ಸಾಮಾನ್ಯವಾಗಿ ಹುಡುಗರಿಗೆ ಎರಡು ರೀತಿಯ ಕನಸ್ಸಿರುತ್ತಂತೆ ಒಂದು ಕ್ರಿಕೆಟರ್ ಆಗಬೇಕು ಮತ್ತೊಂದು ಸಿನಿಮಾ ಸ್ಟಾರ್ ಆಗಬೇಕೆಂದು. ಇಂದು ಸಿನಿಮಾರಂಗದಲ್ಲಿರುವವರ ಕನಸ್ಸನ್ನು ಸುದೀಪ್ ಕೆಸಿಸಿ ಪಂದ್ಯಾವಳಿ ಆಡಿಸುವ ಮೂಲಕ ನನಸು ಮಾಡಿದ್ದಾರೆ. ಎನ್ನುವುದು ಚಿತ್ರರಂಗದಿಂದ ಕೇಳಿ ಬರುತ್ತಿರುವ ಮಾತು.

  ಕೆಸಿಸಿ ಕಪ್ ಚಾಂಪಿಯನ್ಸ್ ಆದ ಶಿವಣ್ಣ ಮತ್ತು ತಂಡಕೆಸಿಸಿ ಕಪ್ ಚಾಂಪಿಯನ್ಸ್ ಆದ ಶಿವಣ್ಣ ಮತ್ತು ತಂಡ

  ಈ ಮಾತು ನಿಜ ಎಂದರೂ ತಪ್ಪಾಗುವುದಿಲ್ಲ, ಯಾಕೆಂದರೆ ಸುದೀಪ್ , ಶಿವರಾಜ್ ಕುಮಾರ್ ಹೀಗೆ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಅನೇಕರು ಕ್ರಿಕೆಟರ್ ಆಗಬೇಕು ಎನ್ನುವ ಕನಸ್ಸನ್ನು ಕಟ್ಟಿಕೊಂಡಿದ್ದರು. ಆದರೆ ಅದು ಸಾಧ್ಯವಾಗದೇ ಇದ್ದಾಗ, ಈ ರೀತಿಯಲ್ಲಿ ತಮ್ಮ ಕನಸುಗಳನ್ನ ಪೂರೈಸಿಕೊಳ್ಳುವುದರ ಜೊತೆಯಲ್ಲಿ ಮಿಕ್ಕವರ ಕನಸ್ಸನ್ನು ತೀರಿಸುತ್ತಿದ್ದಾರೆ.

  ಈ ಬಗ್ಗೆ ನಿರ್ದೇಶಕ ಸುನಿ ಟ್ವಿಟ್ಟರ್ ನಲ್ಲಿ ಈ ರೀತಿಯಲ್ಲಿ ಬರೆದುಕೊಂಡಿದ್ದಾರೆ. "ಹುಡುಗರಿಗೆ ಸಾಮಾನ್ಯವಾಗಿ ಒಂದು ಕನಸಿರುತ್ತದೆ.ಒಂದೋ ಫಿಲ್ಮ್ ಸ್ಟಾರ್ ಆಗಬೇಕು ಅಥವಾ ಕ್ರಿಕೆಟ್ ಪ್ಲೇಯರ್ ಆಗಬೇಕು ಅಂತ. ಫಿಲ್ಮ್ ವಿಭಾಗದಲ್ಲಿ ಇದ್ದೀನಿ. ಕ್ರಿಕೆಟ್ ಕೈಗೂಡಿರಲಿಲ್ಲ. ಆದರೆ ಕ್ಯಾಪ್ಟನ್ ಸುದೀಪ್ ರವರ ಕನಸಿನ ಕೂಸು ಕೆಸಿಸಿ ಯಿಂದ ನಮ್ಮ ಕನಸು ನೆರವೇರಿತು".

  "ವ್ಹಾವ್, ಅನ್ನೋ ಹಾಗೆ ಅಂತರರಾಷ್ಟ್ರೀಯ ದರ್ಜೆಯ ಟೂರ್ನಿಯನ್ನು ಆಯೋಜಿಸಿದ್ದ ಸುದೀಪ್ ರವರಿಗೆ ತುಂಬು ಹೃದಯದ ಧನ್ಯವಾದಗಳು.ನೀವು ಸರ್ವರಿಗೂ ಸ್ಪೂರ್ತಿಯ ಚಿಲುಮೆ. ನಮ್ಮ ತಂಡದ ಎನರ್ಜಿ ಬೂಸ್ಟರ್ ಆಗಿ ಸ್ಪೋರ್ಟಿವ್ ಆಗಿಸಿದ ರಾಕಿಂಗ್ ಸ್ಟಾರ್ ರವರಿಗೂ ನಮನಗಳು.ಫಲಿತಾಂಶ ಏನಾಯಿತೆಂದು ಕೇಳಬೇಡಿ ಮೊದಲನೆ ಪಂದ್ಯಾವಳಿ ದೇವರಿಗೆ ಬಿಟ್ಟೊ.ಗೆದ್ದ ಹ್ಯಾಟ್ರಿಕ್ ಹಿರೋ ತಂಡದವರಿಗೆ ಅಭಿನಂದನೆಗಳು. ಅಷ್ಟೂ ಜನ ಅಲ್ಲಿ ಕಳೆದ ಎರಡು ದಿನಗಳು ಅವಿಸ್ಮರಣೀಯ. ಅಲ್ಲಿ ಗೆದ್ದದ್ದು ಒಂದು ತಂಡ ಮಾತ್ರವಲ್ಲ, ಗೆದ್ದದ್ದು ಕ್ರಿಕೆಟ್ ಚಂದನವನದ ಸಹಬಾಳ್ವೆ. ಒಂದಷ್ಟು ಪ್ರೀತಿ ಮಾತ್ರ"

  ಸುದೀಪ್-ಯಶ್-ಶಿವಣ್ಣ ಕ್ರಿಕೆಟ್ ಆಡಿದ್ರು: ನೋಡೋದಕ್ಕೆ ಬಂದ್ದಿದವರು ಯಾರು ಗೊತ್ತಾ.?ಸುದೀಪ್-ಯಶ್-ಶಿವಣ್ಣ ಕ್ರಿಕೆಟ್ ಆಡಿದ್ರು: ನೋಡೋದಕ್ಕೆ ಬಂದ್ದಿದವರು ಯಾರು ಗೊತ್ತಾ.?

  English summary
  Kannada director Simple suni has tweeted about the KCC cricket league. He also commented on Twitter about the two days tournament and Sudeep.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X