For Quick Alerts
  ALLOW NOTIFICATIONS  
  For Daily Alerts

  ಮತ್ತೊಂದು 'ಕಥೆ' ಶುರು ಮಾಡಿದ ಸುನಿ-ದಿಗಂತ್-ಪುಷ್ಕರ್

  By Bharath Kumar
  |

  ದೂದ್ ಪೇಡಾ ನಟ ದಿಗಂತ್ ಅಭಿನಯದ 'ಕಥೆಯೊಂದು ಶುರುವಾಗಿದೆ' ಸಿನಿಮಾ ಈ ವಾರ ತೆರೆಕಾಣಲಿದೆ. ಈ ಚಿತ್ರದ ನಂತರ ಹೊಸ ಚಿತ್ರಕ್ಕೆ ಸಿದ್ಧವಾಗಿದ್ದಾರೆ ಈ ಹ್ಯಾಂಡ್ ಸಮ್ ನಟ.

  ದಿಗಂತ್ ಅವರ ಮುಂದಿನ ಸಿನಿಮಾಗೆ ಆಕ್ಷನ್ ಕಟ್ ಹೇಳುವುದು ನಿರ್ದೇಶಕ ಸಿಂಪಲ್ ಸುನಿ. ಸದ್ಯ, 'ಬಜಾರ್' ಚಿತ್ರವನ್ನ ಮಾಡ್ತಿರುವ ಸುನಿ, ಅದನ್ನ ಮುಗಿಸಿ ದಿಗಂತ್ ಗೆ ನಿರ್ದೇಶನ ಮಾಡಲಿದ್ದಾರೆ.

  ದಿಗಂತ್ ಹಾಗೂ ಸುನಿ ಜೋಡಿಗೆ ಇದು ಮೊದಲ ಸಿನಿಮಾ. ಹಾಗಾಗಿ, ಈ ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಇವರಿಬ್ಬರ ಜೋಡಿಯಲ್ಲಿ ಯಾವ ರೀತಿಯ ಸಿನಿಮಾ ಬರಲಿದೆ, ಯಾವ ರೀತಿ ಪ್ರೇಕ್ಷಕರನ್ನ ರಂಜಿಸಲಿದ್ದಾರೆ ಎಂಬ ಚರ್ಚೆ ಶುರುವಾಗಿದೆ.

  ನಟ ದಿಗಂತ್ ಜೀವನದಲ್ಲಿ ಶುರುವಾಯ್ತು ಹೊಸ ಕಥೆ ನಟ ದಿಗಂತ್ ಜೀವನದಲ್ಲಿ ಶುರುವಾಯ್ತು ಹೊಸ ಕಥೆ

  ಅಂದ್ಹಾಗೆ, ಈ ಸ್ಟಾರ್ ಜೋಡಿಯ ಸಿನಿಮಾ ಬಗ್ಗೆ ಮಾಹಿತಿ ಕೊಟ್ಟರು ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನ. ಯಾಕಂದ್ರೆ, ಈ ಸಿನಿಮಾಗೆ ಬಂಡವಾಳ ಹಾಕಲಿರುವುದು ಇದೇ ಪ್ರೊಡ್ಯೂಸರ್.

  ಡಿಸೆಂಬರ್ ನಲ್ಲಿ ದಿಗಂತ್-ಐಂದ್ರಿತಾ ರೇ ಮದುವೆ.? ಡಿಸೆಂಬರ್ ನಲ್ಲಿ ದಿಗಂತ್-ಐಂದ್ರಿತಾ ರೇ ಮದುವೆ.?

  ಸದ್ಯ, ಪುಷ್ಕರ್ ಮಲ್ಲಿಕಾರ್ಜುನ ಅವರು 'ಭೀಮಸೇನ ನಳಮಹಾರಾಜ', 'ಅವನೇ ಶ್ರೀಮನ್ನಾರಾಯಣ' ಹಾಗೂ ದಿಗಂತ್ ಅಭಿನಯದ 'ಕಥೆಯೊಂದು ಶುರುವಾಗಿದೆ' ಚಿತ್ರಗಳ ನಿರ್ಮಾಣ ಮಾಡುತ್ತಿದ್ದಾರೆ.

  ಇವುಗಳ ಜೊತೆ ದಿಗಂತ್-ಸುನಿ ಕಾಂಬಿನೇಷನ್ ಚಿತ್ರಕ್ಕೂ ನಿರ್ಮಾಪಕರಾಗಿದ್ದಾರೆ. ಚಳಿಗಾಲದಲ್ಲಿ ಸಿನಿಮಾ ಆರಂಭವಾಗಲಿದ್ದು, ಇನ್ನುಳಿದ ಮಾಹಿತಿಗಳನ್ನ ಚಿತ್ರತಂಡವೇ ನೀಡಬೇಕಾಗಿದೆ.

  English summary
  Director simple suni will direct next movie to actor diganth. the movie will produce under the pushkar production.
  Monday, July 30, 2018, 11:47
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X