For Quick Alerts
  ALLOW NOTIFICATIONS  
  For Daily Alerts

  ಸಿಂಧು ಸುಮ್ಮನಿದ್ದಾರಂದ್ರೆ ಕೆಲಸ ಇಲ್ಲ ಅಂತ ಅರ್ಥ ಅಲ್ಲ!

  By ಕುಸುಮ
  |

  ಸ್ಯಾಂಡಲ್ವುಡ್ನ ಭರವಸೆಯ ನಾಯಕಿ ಸಿಂಧು ಲೋಕನಾಥ್ 'ರಾಕ್ಷಸಿ' ಅನ್ನೋ ಹಾರರ್ ಸಿನಿಮಾ ನಂತರ ಮತ್ಯಾವ ಸಿನಿಮಾಗಳಲ್ಲೂ ಮಿಂಚಿಲ್ಲ. 'ಡ್ರಾಮಾ', 'ಲವ್ ಇನ್ ಮಂಡ್ಯ'ದಂತಹಾ ಸಿನಿಮಾಗಳಲ್ಲಿ ಸಿಂಧು ಲೋಕನಾಥ್ ಅಭಿನಯ ಕಂಡವರಿಗೆ ಚಂದನವನದ ಭರವಸೆಯ ನಟಿ ಸಿಂಧು ಅನ್ನುವುದರಲ್ಲಿ ಖಂಡಿತಾ ಯಾವ ಅನುಮಾನವೂ ಬಂದಿರಲಿಲ್ಲ.

  ಹಾಗಾದರೆ ಸಿಂಧು ಯಾಕೆ ಸಿನಿಮಾದಲ್ಲಿ ನಟಿಸುತ್ತಿಲ್ಲ ಎನ್ನುವ ಪ್ರಶ್ನೆಗೆ ಅವರೇ ಹೇಳಿಕೊಂಡಿದ್ದಾರೆ. "ನಾನು ಅವಕಾಶ ಸಿಕ್ತಿದೆ ಅಂತ ಸಿನಿಮಾ ಮಾಡೋ ನಟಿಯಲ್ಲ. ಕಥೆ ನನಗೆ ಇಷ್ಟ ಆಗಬೇಕು. ಪಾತ್ರದಲ್ಲಿ ಏನೋ ಒಂದು ಗಟ್ಟಿತನ ಇರಬೇಕು. ವರ್ಷಕ್ಕೆ ನಾಲ್ಕು ಸಿನಿಮಾ ಮಾಡಿ ಯಾವುದೂ ನೆನಪಿಲ್ಲ ಅಂದ್ರೆ ಹೇಗೆ? ಎರಡು ವರ್ಷಕ್ಕೊಂದೇ ಸಿನಿಮಾ ಮಾಡಿದ್ರೂ ಅದು ಎಲ್ಲರ ನೆನಪಲ್ಲುಳಿಯಬೇಕು" ಅನ್ನೋದು ಈ ಕೊಡಗಿನ ಬೆಡಗಿಯ ಕನಸಂತೆ.

  ಇಲ್ಲಿಯವರೆಗೂ ಒಂದೊಂದು ಸಿನಿಮಾ ಮಾಡೋಕು ಮೊದಲು ಹೆಚ್ಚೂ ಕಡಿಮೆ 10ರಿಂದ 15 ಕಥೆ ಕೇಳಿರೋ ಈ ಸುಂದರಿ, ಕಥೆ ಇಷ್ಟವಾದರೆ ಸಂಭಾವನೆಯನ್ನೂ ಕೂಡ ಅಷ್ಟೇ ಕೊಡಿ ಇಷ್ಟೇ ಕೊಡಿ ಅಂತ ಡಿಮಾಂಡ್ ಮಾಡುವುದಿಲ್ಲವಂತೆ. ವಿಶೇಷ ಅಲ್ಲವಾ? ['ರಾಕ್ಷಸಿ' ನೋಡಿದ ವಿಮರ್ಶಕರು ಭಯಗೊಂಡ್ರಾ ಇಲ್ಲ ಭೇಷ್ ಅಂದ್ರಾ?]


  ಕಾಸಿಗಾಗಿಯೇ ಸಿನಿಮಾದಲ್ಲಿ ಮುಖ ತೋರಿಸುವ ಹಲವು ಗುರುತಿಸಿಕೊಂಡಿರೋ ಸ್ಟಾರ್ ಹಣೆಪಟ್ಟಿಗಳಿರೋ ಕಲಾವಿದರ ನಡುವೆ ಗುರುತಿಸಿಕೊಂಡರೂ ಒಳ್ಳೆಯ ಪಾತ್ರ ಕಥೆಗೆ ಮಾತ್ರ ಬೆಲೆ ಹಣಕ್ಕಲ್ಲ ಎನ್ನುವ ಸಿಂಧು ಕೋಲ್ಮಿಂಚಿನಂತಹಾ ಮಾತು ಮೆಚ್ಚುಗೆಯಾಗುವಂತಾದ್ದು.

  ಖಾಸಗಿ ಕಾರ್ಯಕ್ರಮಗಳಲ್ಲೂ ಕಡಿಮೆ ಭಾಗವಹಿಸುವ ಈ ಸುಂದರಿ, ಮನೆಯಲ್ಲೇ ಇದ್ದು ಯೋಗ ಮಾಡುತ್ತಾ ಫಿಟ್ ಅಂಡ್ ಫೈನ್ ಆಗೋಕೆ ಇಷ್ಟಪಡ್ತೀನಿ ಎನ್ನುತ್ತಾರೆ. ಇದರ ನಡುವೆಯೇ ಸದ್ಯದಲ್ಲೇ ಒಂದು ಒಳ್ಳೆಯ ಸಿನಿಮಾದ ಸುದ್ದಿಯನ್ನು ಕೊಡುತ್ತೀನಿ ಎನ್ನುತ್ತಿದ್ದಾರೆ ಸಿಂಧು ಲೋಕನಾಥ್. [ಅವಕಾಶ ಸಿಗದವರಲ್ಲ, ಇವರು ಅವಕಾಶ' ಕೊಡದವರು!]

  English summary
  What Sindhu Lokanath doing now? Why is she not acting any Kannada movie after Rakshani? Is she idle and not getting any offers? Beautiful actress from Coorg has answered all these questions. She says, she is in search of solid roles with substance.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X