ಸಿಂಧು ಲೋಕನಾಥ್ ಮಾಡಿದ 'ಕಿಕಿ ಡ್ಯಾನ್ಸ್'ಗೆ ಭರ್ಜರಿ ರೆಸ್ಪಾನ್ಸ್
Recommended Video

'ಕಿಕಿ ಡ್ಯಾನ್ಸ್' ಎನ್ನುವುದು ತುಂಬಾ ಅಪಾಯಕಾರಿ ಆಟ. ಇದು ಪ್ರಾಣಕ್ಕೆ ಕುತ್ತು ತರುವ ಡ್ಯಾನ್ಸ್ ಎಂಬ ಕಾರಣಕ್ಕೆ ಕೆಲವು ದೇಶಗಳಲ್ಲಿ ಇದನ್ನ ನಿಷೇಧ ಮಾಡಿದ್ದಾರೆ. ಇತ್ತೀಚಿಗೆ ಭಾರತದಲ್ಲೂ ಈ ಕಿಕಿ ಡ್ಯಾನ್ಸ್ ಅಬ್ಬರ ಜೋರಾಗಿತ್ತು. ಬಾಲಿವುಡ್ ಸೇರಿದಂತೆ ದಕ್ಷಿಣ ಭಾರತದ ನಟ-ನಟಿಯರು ಕೂಡ ಕಿಕಿ ಡ್ಯಾನ್ಸ್ ಮಾಡಿ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದರು.
ಆಮೇಲೆ ಈ ಕಿಕಿ ಡ್ಯಾನ್ಸ್ ಹವಾ ಕಮ್ಮಿಯಾಗಿತ್ತು. ಇದೀಗ, ಕನ್ನಡ ನಟಿ ಸಿಂಧು ಲೋಕನಾಥ್ ಮತ್ತೆ ಕಿಕಿ ಡ್ಯಾನ್ಸ್ ಮಾಡುವ ಮೂಲಕ ಸದ್ದು ಮಾಡುತ್ತಿದ್ದಾರೆ.

ಕಿಕಿ ಡ್ಯಾನ್ಸ್ ಮಾಡಿದ್ರೆ, ಬೈಯುತ್ತಿದ್ದ ಜನರ ಮಧ್ಯೆ ಸಿಂಧು ಲೋಕನಾಥ್ ಮಾಡಿರುವ ಕಿಕಿ ಡ್ಯಾನ್ಸ್ ಗೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅದಕ್ಕೆ ಕಾರಣ ಕಿಕಿ ಡ್ಯಾನ್ಸ್ ನಲ್ಲಿ ಸಿಂಧು ಬಳಸಿಕೊಂಡಿರುವ ಹಾಡು.
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ 'ಆನಂದ್' ಚಿತ್ರದ 'ಟುವ್ವಿ ಟುವ್ವಿ ಎಂದು ಹಾಡುವ.....' ಗೀತೆಯನ್ನ ಬಳಸಿ ಕಿಕಿ ಡ್ಯಾನ್ಸ್ ಮಾಡಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಕಿಕಿ ಡ್ಯಾನ್ಸ್ ಮಾಡಿ ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ ಅವರು ದೊಡ್ಡ ಸಮಸ್ಯೆಯನ್ನ ಎದುರಿಸಿದ್ದರು. ನಿವೇದಿತಾ ವಿರುದ್ಧ ಕೆಲವು ಸಂಘಟನೆಗಳು ಪೊಲೀಸ್ ದೂರು ಕೂಡ ನೀಡಿದ್ದರು. ಅಷ್ಟರ ಮಟ್ಟಿಗೆ ಈ ಕಿಕಿ ಡ್ಯಾನ್ಸ್ ಹಾವಳಿ ಉಂಟು ಮಾಡಿತ್ತು.


Click it and Unblock the Notifications











