For Quick Alerts
  ALLOW NOTIFICATIONS  
  For Daily Alerts

  ಗಾಯಕಿ ಸುಶ್ಮಿತಾ ಆತ್ಮಹತ್ಯೆ: ಪತಿ ಸೇರಿದಂತೆ ಮೂವರ ಬಂಧನ

  |

  ವರದಕ್ಷಿಣೆ ಕಿರುಕುಳಕ್ಕೆ ಬೇಸೆತ್ತು ಕನ್ನಡ ಚಿತ್ರರಂಗದ ಗಾಯಕಿ ಸುಶ್ಮಿತಾ ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದೆ.

  ಪತಿ ಶರತ್ ಕುಮಾರ್, ಪತಿಯ ದೊಡ್ಡಮ್ಮ ವೈದೇಹಿ ಮತ್ತು ಪತಿಯ ಸಹೋದರಿ ಗೀತಾ ರನ್ನ ಅನ್ನಪೂರ್ಣೇಶ್ವರಿ ನಗರದ ಪೊಲೀಸರು ಬಂಧಿಸಿದ್ದಾರೆ.

  ಸುಶ್ಮಿತಾ ಆತ್ಮಹತ್ಯೆ ಬಳಿಕ ತಲೆ ಮರೆಸಿಕೊಂಡಿದ್ದ ಆರೋಪಿಗಳು ಪಾಂಡವಪುರದ ಸಂಬಂಧಿಕರ ಮನೆಯಲ್ಲಿದ್ದರು. ಖಚಿತ ಮಾಹಿತಿ ಮೇರೆಗೆ ಪಾಂಡವಪುರಕ್ಕೆ ಭೇಟಿಕೊಟ್ಟ ಅನ್ನಪೂರ್ಣೇಶ್ವರಿ ನಗರದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

  ಗಾಯಕಿ ಸುಶ್ಮಿತಾ ಆತ್ಮಹತ್ಯೆ: ಕಣ್ಣು ದಾನ ಮಾಡಿ ಮಾನವೀಯತೆ ಮೆರೆದ ಪೋಷಕರು.!ಗಾಯಕಿ ಸುಶ್ಮಿತಾ ಆತ್ಮಹತ್ಯೆ: ಕಣ್ಣು ದಾನ ಮಾಡಿ ಮಾನವೀಯತೆ ಮೆರೆದ ಪೋಷಕರು.!

  ಪ್ರಕರಣದ ಹಿನ್ನಲೆ: 26 ವರ್ಷದ ಗಾಯಕಿ ಸುಶ್ಮಿತಾ ಫೆಬ್ರವರಿ 16 ರಂದು ಬೆಂಗಳೂರಿನ ಮಾಳಗಾಳದಲ್ಲಿ ಇರುವ ತಾಯಿ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು.

  ಗಂಡನ ಮನೆಯವರಿಂದ ಚಿತ್ರಹಿಂಸೆ: ಕನ್ನಡ ಸಿನಿಮಾ ಗಾಯಕಿ ಸುಶ್ಮಿತಾ ಆತ್ಮಹತ್ಯೆ.!ಗಂಡನ ಮನೆಯವರಿಂದ ಚಿತ್ರಹಿಂಸೆ: ಕನ್ನಡ ಸಿನಿಮಾ ಗಾಯಕಿ ಸುಶ್ಮಿತಾ ಆತ್ಮಹತ್ಯೆ.!

  ''ನನ್ನ ಸಾವಿಗೆ ಶರತ್, ವೈದೇಹಿ ಮತ್ತು ಗೀತಾ ನೇರವಾಗಿ ಕಾರಣ. ನನಗೆ ಅವರು ಚಿತ್ರಹಿಂಸೆ ಕೊಡುತ್ತಿದ್ದರು. ಮಾತೆತ್ತಿದ್ದರೆ, ಮನೆ ಬಿಟ್ಟು ಹೋಗು ಅಂತಿದ್ರು. ಮಾನಸಿಕವಾಗಿ ತುಂಬಾ ಹಿಂಸೆ ಆಗಿತ್ತು. ಅವರನ್ನ ಮಾತ್ರ ಸುಮ್ಮನೆ ಬಿಡಬೇಡ'' ಎಂದು ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಗಾಯಕಿ ಸುಶ್ಮಿತಾ ತನ್ನ ತಾಯಿಗೆ ಸಂದೇಶ ಕಳುಹಿಸಿದ್ದರು.

  English summary
  Bengaluru Police arrests 3 accused in Singer Sushmitha suicide case.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X