»   » ಎಸ್ಎಂ ಕೃಷ್ಣ ಮುಂದಿನ ರಾಷ್ಟ್ರಪತಿಯಾಗಲಿ; ರಮ್ಯಾ

ಎಸ್ಎಂ ಕೃಷ್ಣ ಮುಂದಿನ ರಾಷ್ಟ್ರಪತಿಯಾಗಲಿ; ರಮ್ಯಾ

Posted By:
Subscribe to Filmibeat Kannada
ಪ್ರತಿಭಾ ದೇವಿಸಿಂಗ್ ಪಾಟೀಲ್ ಅವರ ಅಧಿಕಾರವಧಿ ಇದೇ ಜುಲೈ, 2012ಕ್ಕೆ ಮುಗಿಯುತ್ತದೆ. ಮುಂದಿನ ರಾಷ್ಟ್ರಪತಿ ಯಾರಾಗಬೇಕು ಎಂಬ ಬಗ್ಗೆ ಈಗಾಗಲೆ ಚರ್ಚೆ ಶುರುವಾಗಿದೆ. ಈ ಬಗ್ಗೆ ಗೋಲ್ಡನ್ ಗರ್ಲ್ ರಮ್ಯಾ ಕೂಡ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ತಮ್ಮ ಅಭಿಮಾನಿಗಳಿಗೆ ಇದೇ ಪ್ರಶ್ನೆಯನ್ನು ಹಾಕಿದ್ದಾರೆ.

"ಭಾರತದ ಮುಂದಿನ ರಾಷ್ಟ್ರಪತಿ ಯಾರಾಗಬೇಕು? ಯಾಕೆ?" ಎಂಬ ರಮ್ಯಾರ ಪ್ರಶ್ನೆಗೆ ಆಕೆಯ ಅಭಿಮಾನಿಗಳು ಸೂಕ್ತವಾಗಿ ಸ್ಪಂದಿಸಿದ್ದಾರೆ. ಕೆಲವರು ಅಣ್ಣಾ ಹಜಾರೆ ಆಗಲಿ. ಹದಗೆಟ್ಟ ಭಾರತದ ರಾಜಕೀಯ ವ್ಯವಸ್ಥೆಯನ್ನು ಒಂದು ದಾರಿಗೆ ತರುತ್ತಾರೆ ಎಂದಿದ್ದಾರೆ.

ಕೆಲವರು ಎಪಿಜೆ ಅಬ್ದುಲ್ ಕಲಾಂ ಅವರೇ ಮತ್ತೊಮ್ಮೆ ರಾಷ್ಟ್ರಪತಿಯಾಗಲಿ. ಅವರಿಗಿಂತ ಸೂಕ್ತ ಅಭ್ಯರ್ಥಿ ಮತ್ತೊಬ್ಬರಿಲ್ಲ ಎಂದಿದ್ದಾರೆ. ಇನ್ನೂ ಕೆಲವರು ಅಮರ್ಥ್ಯ ಸೇನ್ ಹೆಸರು ಸೂಚಿಸಿದ್ದಾರೆ. ಮತ್ತೂ ಕೆಲವರು ಇನ್ಫೋಸಿಸ್ ನಾರಾಯಣ ಮೂರ್ತಿ ಅವರೇ ಸೂಕ್ತ ಅಭ್ಯರ್ಥಿ ಎಂದಿದ್ದಾರೆ.

ಆದರೆ ರಮ್ಯಾ ಅವರ ಪ್ರಕಾರ ಮುಂದಿನ ರಾಷ್ಟ್ರಪತಿ ಎಸ್ ಎಂ ಕೃಷ್ಣ ಆಗಬೇಕಂತೆ. ಯಾರಾದರೂ ಆಗಲಿ ಆದರೆ ಒಳ್ಳೆಯವರು ಆಗಲಿ. ಕನ್ನಡಿಗ ಇದ್ದರೆ ಇನ್ನೂ ಒಳ್ಳೇದು ಎಂಬುದು ರಮ್ಯಾ ಅವರ ಅಭಿಪ್ರಾಯ. ನಿಮ್ಮ ಪ್ರಕಾರ ಮುಂದಿನ ರಾಷ್ಟ್ರಪತಿ ಯಾರಾದರೆ ಒಳಿತು? (ಒನ್‌ಇಂಡಿಯಾ ಕನ್ನಡ)

English summary
Golden Girl Ramya asks her fans on her twitter account as "Who would you want the next Indian President to be? Why?" She tweets "umm..I think it shld b SM Krishna..coz he's an ideal candidate for Presidency!!"
Please Wait while comments are loading...