ದರ್ಶನ್ ಗೆ ವಿಡಿಯೋ ಕಾಲ್ ಮಾಡಿ ಶುಭಹಾರೈಸಿದ ಯೋಧ
Recommended Video

ಮಂಡ್ಯದಲ್ಲಿ ಸುಮಲತಾ ಪರ ಪ್ರಚಾರ ಮಾಡುತ್ತಿರುವ ನಟ ದರ್ಶನ್ ಗೆ ವೀರ ಯೋಧರ ಬೆಂಬಲ ಸಿಕ್ಕಿದೆ. ನಟ ದರ್ಶನ್ ಜೊತೆ ವಿಡಿಯೋ ಕಾಲ್ ಮಾಡಿ ಮಾತನಾಡಿದ ಆ ಯೋಧ, ಸುಮಲತಾ ಗೆಲುವಿಗೆ ಶುಭ ಹಾರೈಸಿದ್ದಾರೆ.
ಆ ಯೋಧ ಯಾರು, ಎಲ್ಲಿಂದ ಕಾಲ್ ಮಾಡಿದ್ದರು ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಆದ್ರೆ, ಮಂಡ್ಯದಲ್ಲಿ ಪ್ರಚಾರ ಮಾಡುತ್ತಿದ್ದ ಸಂದರ್ಭದಲ್ಲಿ ಹಳ್ಳಿಯೊಂದಕ್ಕೆ ಭೇಟಿ ನೀಡಿದಾಗ ಸ್ನೇಹಿತರ ಮೂಲಕ ವಿಡಿಯೋ ಕಾಲ್ ಮಾಡಿ ಮಾತನಾಡಿದರು ಎಂದು ಹೇಳಲಾಗ್ತಿದೆ.
ಈ ವೇಳೆ ದರ್ಶನ್ ಗೆ ವಿಶ್ ಮಾಡಿದ ಯೋಧ, 'ನಿಮಗೆ ಒಳ್ಳೆಯದಾಗುತ್ತೆ' ಎಂದು ವಿಶ್ ಮಾಡಿದ್ದಾರೆ. ಯೋಧನ ಈ ಮಾತಿಗೆ ಪ್ರತಿಕ್ರಿಯಿಸಿದ ದರ್ಶನ್ ''ನಿಮ್ಮ ಮಾತಿನಿಂತ ನಮಗೆ ಇನ್ನಷ್ಟು ಶಕ್ತಿ ಸಿಕ್ಕಿದೆ. ತುಂಬಾ ಥ್ಯಾಂಕ್ಸ್' ಎಂದು ಹೇಳಿದ್ದಾರೆ.

ಇನ್ನು ಮಂಡ್ಯ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರಿಗೆ ಯೋಧರೊಬ್ಬರ ಮೊದಲ ಮತ ಚಲಾಯಿಸಿದ್ದಾರೆ ಎಂಬ ಸುದ್ದಿ ಕಳೆದ ಕೆಲವು ದಿನಗಳ ಹಿಂದೆ ಸದ್ದು ಮಾಡಿತ್ತು.
ಅದರ ಬೆನ್ನಲ್ಲೆ ಈಗ ದರ್ಶನ್ ಅವರ ಜೊತೆ ಸೈನಿಕರೊಬ್ಬರು ವಿಡಿಯೋ ಕಾಲ್ ಮಾಡಿ ಮಾತನಾಡಿರುವುದು ನಿಜಕ್ಕೂ ವಿಶೇಷ ಮತ್ತು ಅಪರೂಪ ಎನ್ನಬಹುದು.


Click it and Unblock the Notifications











