For Quick Alerts
  ALLOW NOTIFICATIONS  
  For Daily Alerts

  ಕೆಜಿಎಫ್ 2 ಬಗ್ಗೆ ಕಾಡುತ್ತಿರುವ ಪ್ರಶ್ನೆಗಳು: ಅಚ್ಚರಿಯಾದ್ರೂ ನಂಬಲೇಬೇಕು.!

  |
  KGF 2 Movie : ಕೆಜಿಎಫ್ ಚಾಪ್ಟರ್ 2 ಬಗ್ಗೆ ಕಾಡುತ್ತಿದೆ ಈ ಕುತೂಹಲಕಾರಿ ಪ್ರಶ್ನೆಗಳು | FILMIBEAT KANNADA

  ಬಾಹುಬಲಿಯನ್ನ ಕಟ್ಟಪ್ಪ ಯಾಕೆ ಕೊಂದ.....ಇದು ಕಳೆದ ಎರಡು ವರ್ಷದ ಹಿಂದೆ ಇಡೀ ಚಿತ್ರಜಗತ್ತನ್ನೇ ಕಾಡಿದ ಬಹುದೊಡ್ಡ ಪ್ರಶ್ನೆ. ಬಾಹುಬಲಿ ಮೊದಲ ಭಾಗದ ಕ್ಲೈಮ್ಯಾಕ್ಸ್ ನಲ್ಲಿ ಕಟ್ಟಾಳು ಕಟ್ಟಪ್ಪನಿಂದಲೇ ಬಾಹುಬಲಿ ಹತ್ಯೆಯಾಯಿತು ಎಂದು ಕಥೆ ಮುಗಿಸಿದ್ದ ನಿರ್ದೇಶಕ, ಭಾಗ ಎರಡಕ್ಕೆ ಅದನ್ನ ಬ್ರಹ್ಮಾಸ್ತ್ರವನ್ನಾಗಿಸಿದ್ದರು.

  ಪಾರ್ಟ್ 2 ಸಿನಿಮಾ ಅತಿ ದೊಡ್ಡ ಕುತೂಹಲ ಮೂಡಿಸಿದ್ದೇ ''ಬಾಹುಬಲಿಯನ್ನ ಕಟ್ಟಪ್ಪ ಯಾಕೆ ಕೊಂದ.....'' ಎಂಬ ಪ್ರಶ್ನೆಯಿಂದ. ಇದೀಗ, ಅಂತಹದ್ದೇ ಹಲವು ಪ್ರಶ್ನೆಗಳ ಹುಟ್ಟಿಗೆ ಕಾರಣವಾಗಿದೆ ಕನ್ನಡದ ಕೆಜಿಎಫ್ ಚಾಪ್ಟರ್ 1. ಈ ಬಗ್ಗೆ ಗೂಗಲ್ ನಲ್ಲಿ ಚಾಪ್ಟರ್ 2 ನಲ್ಲಿ ಕಥೆ ಏನಾಗಲಿದೆ ಎಂದು ಹುಡುಕುತ್ತಿದ್ದಾರೆ.

  'ಕೆಜಿಎಫ್ ಚಾಪ್ಟರ್-2' ಚಿತ್ರಕ್ಕೆ ಬರ್ತಾರಂತೆ ಬಾಲಿವುಡ್ ಖ್ಯಾತ ನಟಿ.?

  ಯಶ್ ಅಭಿನಯಿಸಿದ್ದ ಕೆಜಿಎಫ್ ಸಿನಿಮಾ ಮೊದಲ ಭಾಗದಲ್ಲಿ ಸುಫಾರಿ ತಗೊಂಡು, ಗರುಡನನ್ನ ಕೊಂದು ಮುಗಿಸಿ ಇಡೀ ಕೆಜಿಎಫ್ ಅನ್ನ ತನ್ನ ವಶಕ್ಕೆ ಪಡೆದುಕೊಂಡಿದ್ದಾನೆ ರಾಕಿ ಭಾಯ್. ಹಾಗಿದ್ರೆ, ಮುಂದಿನ ಕಥೆಯಲ್ಲಿ ರಾಕಿ ಭಾಯ್ ನಡೆ ಏನು? ಸಾಮಾನ್ಯ ಪ್ರೇಕ್ಷಕರ ಮನದಲ್ಲಿ ಕಾಡುತ್ತಿರುವ ಅನುಮಾನಗಳೇನು? ಮುಂದೆ ಓದಿ....

  ರಾಕಿ ಭಾಯ್ ಸಾಯುತ್ತಾನಾ?

  ರಾಕಿ ಭಾಯ್ ಸಾಯುತ್ತಾನಾ?

  ರಾಕಿ ಭಾಯ್ ದೇಶದ ಅತಿ ದೊಡ್ಡ ಡಾನ್ ಆಗ್ತಾನೆ ಎನ್ನುವುದಕ್ಕೆ ಮೊದಲ ಭಾಗದಲ್ಲೇ ಸುಳಿವು ನೀಡಿದ್ದಾರೆ. ಚಾಪ್ಟರ್ 2 ನಲ್ಲಿ ರಾಕಿ ಭಾಯ್ ಅಟ್ಟಹಾಸ ಸ್ವಲ್ಪ ಹೆಚ್ಚಾಗುತ್ತೆ ಮತ್ತು ಮುಂಬೈನಲ್ಲಿದ್ದ ರಾಕಿ ಪವರ್ ದೇಶಾದ್ಯಂತ ವಿಸ್ತರಿಸುತ್ತೆ ಎಂಬುದು ಈಗಾಗಲೇ ಊಹಿಸಿಕೊಂಡಿರುವ ಕಥೆ. ಈ ಕಥೆಯಲ್ಲಿ ರಾಕಿ ಸಾಯ್ತಾನಾ ಎಂಬ ಅನುಮಾನವೂ ಇದೆ.

  ಬಾಹುಬಲಿ vs ಕೆಜಿಎಫ್: ದರ್ಶನ್ ಆಯ್ಕೆ ಕೆಜಿಎಫ್ ಯಾಕೆ?

  ರೀನಾ ಮದುವೆಯಾಗ್ತಾನಾ ರಾಕಿ?

  ರೀನಾ ಮದುವೆಯಾಗ್ತಾನಾ ರಾಕಿ?

  ರಾಕಿ ಭಾಯ್ ಗೆ ರೀನಾ ಕಂಡ್ರೆ ತುಂಬಾ ಇಷ್ಟ. ಆರಂಭದಲ್ಲಿ ಇಷ್ಟವಿಲ್ಲದಿದ್ದರೂ ಅಂತಿಮವಾಗಿ ರೀನಾಗೂ ರಾಕಿ ಮೇಲೆ ಲವ್ ಆಗುತ್ತೆ. ಮೊದಲ ಭಾಗದಲ್ಲಿ ಇವರಿಬ್ಬರ ಕಥೆಯನ್ನ ಅರ್ಧಕ್ಕೆ ಬಿಟ್ಟಿದ್ದ ನಿರ್ದೇಶಕರು, ಪಾರ್ಟ್ 2 ನಲ್ಲಿ ರಾಕಿ ಮತ್ತು ರೀನಾ ಮದ್ವೆ ಮಾಡಿಸ್ತಾರಾ ಎಂಬ ಕುತೂಹಲ ಹುಟ್ಟಿಕೊಂಡಿದೆ.

  ಕೆಜಿಎಫ್ ಓಟ, ಯಜಮಾನ ಬೇಟೆ: ಮೊದಲ ಸ್ಥಾನಕ್ಕಾಗಿ ನಿಲ್ಲದ ಪೈಪೋಟಿ

  ಅಮ್ಮನ ಆಸೆ ಈಡೇರಿಸ್ತಾನಾ ರಾಕಿ?

  ಅಮ್ಮನ ಆಸೆ ಈಡೇರಿಸ್ತಾನಾ ರಾಕಿ?

  ''ನೀನು ಹೇಗೆ ಬದುಕ್ತಿಯೋ ನನಗೆ ಗೊತ್ತಿಲ್ಲ. ಆದ್ರೆ, ಸಾಯುವಾಗ ಅತ್ಯಂತ ಪ್ರಬಲನಾಗಿ, ಶ್ರೀಮಂತನಾಗಿ ಸಾಯಿಬೇಕು'' ಎಂದು ಮಾತು ರಾಕಿ ಭಾಯ್ ತಾಯಿ ಮಾತು ತೆಗೆದುಕೊಂಡಿದ್ದರು. ಆ ಮಾತನ್ನ ಮನಸ್ಸಿನಲ್ಲಿ ಇಟ್ಟು ರಾಕಿ ಹೆಜ್ಜೆಯಿಟ್ಟಿದ್ದ. ಬಹುಶಃ ಅಮ್ಮನ ಆಸೆ ಈಡೇರಿಸುವ ದೃಷ್ಟಿಯಿಂದ ಅತ್ಯಂತ ಪ್ರಬಲ ಹಾಗೂ ಶ್ರೀಮಂತನಾಗಿ ಸಾಯ್ತಾನಾ?

  'ಕೆಜಿಎಫ್' ಹಿಟ್ ಆದ್ಮೇಲೆ ನಮ್ ಇಂಡಸ್ಟ್ರಿಯಲ್ಲಾದ 5 ಬದಲಾವಣೆ.!

  ಚಾಪ್ಟರ್ 2 ಕಥೆ ಏನು?

  ಚಾಪ್ಟರ್ 2 ಕಥೆ ಏನು?

  ಕೆಜಿಎಫ್ ನ ಅಸಲಿ ಮಹತ್ವವೇನು ಎಂಬುದನ್ನ ರಾಕಿ ಭಾಯ್ ತಿಳಿದುಕೊಂಡಿದ್ದಾನೆ. ಕೇವಲ ಸುಪಾರಿಗಾಗಿ ಕೊಲೆ ಮಾಡಲು ಬಂದಿದ್ದ ರಾಕಿ, ಈಗ ಕೆಜಿಎಫ್ ವಶಪಡಿಸಿಕೊಂಡು ಅಧಿಕಾರ ಮುಂದುವರಿಸ್ತಾನಾ ಎಂಬುದು ಸದ್ಯದ ಕುತೂಹಲ. ಈ ನಡುವೆ ಕೆಜಿಎಫ್ ಗಾಗಿ ಸಂಚು ಹಾಕಿ ಕೂತಿರುವ ಕೆಲವು ಡಾನ್ ಗಳು ರಾಕಿಯನ್ನ ಏನ್ ಮಾಡ್ತಾರೆ ಎಂಬುದನ್ನ ಸಿನಿಮಾದಲ್ಲೇ ಕಾದುನೋಡಬೇಕಿದೆ.

  English summary
  K.G.F: Chapter 1 ended with Rocky completing his mission by slaying Garuda, the owner of the Kolar gold mine. now, what is the story of chapter 2?

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X