»   » ಈ ಸ್ಟೋರಿ ನೋಡಿದರೆ ಖಂಡಿತ 'ಶಾಕ್' ಆಗ್ತೀರಾ..!

ಈ ಸ್ಟೋರಿ ನೋಡಿದರೆ ಖಂಡಿತ 'ಶಾಕ್' ಆಗ್ತೀರಾ..!

Posted By:
Subscribe to Filmibeat Kannada

''ಈ ಸ್ಟೋರಿ ನೋಡಿದರೆ 'ಶಾಕ್' ಆಗ್ತೀರಾ..! 'ಈ ವಿಡಿಯೋ ನೋಡಿದರೆ ಪಕ್ಕಾ 'ಶಾಕ್' ಆಗ್ತೀರಾ..!'' ಈ ರೀತಿಯ ಟೈಟಲ್ ಗಳನ್ನು ಕೇಳಿ ಕೇಳಿ ಶಾಕ್ ಎನ್ನುವ ಪದಕ್ಕೆ ಅರ್ಥವೇ ಹೋದಂತಾಗಿದೆ.

ಇತ್ತೀಚಿಗಂತೂ 'ಶಾಕ್' ಎನ್ನುವ ಪದ ಸಾಮಾಜಿಕ ಜಾಲತಾಣಗಳಲ್ಲಿ ಅತಿಯಾಗಿ ಮತ್ತು ಅನವಶ್ಯಕವಾಗಿ ಬಳಕೆ ಆಗುತ್ತಿದೆ. ಕೆಲ ಯೂಟ್ಯೂಬ್ ಚಾನೆಲ್ ಗಳು ಯಾವುದೇ ಸುದ್ದಿ ಇದ್ದರೂ ಅದಕ್ಕೆ 'ನೀವು ಶಾಕ್ ಆಗ್ತೀರಾ' ಎಂಬ ಟೈಟಲ್ ಆಗಿ ನೀಡಿ ಅದನ್ನೇ ಅಸ್ತ್ರವಾಗಿ ಬಳಸುತ್ತಿದ್ದಾರೆ.

Some Kannada Youtube channels unnecessary using the word 'Shock' in their titles.

ಮೇಘನಾ ಗಾಂವ್ಕರ್ ಡ್ಯಾನ್ಸ್ ಮಾಡಿದ್ರೆ, ಶ್ವೇತಾ ಚೆಂಗಪ್ಪ ಫೇಸ್ ಬುಕ್ ಲೈವ್ ಗೆ ಬಂದ್ರೆ, ಜಗ್ಗೇಶ್ ಸೊಸೆ ನೋಡಿದ್ರೆ, ರಮ್ಯಾ ವಯಸ್ಸು ಕೇಳಿದ್ರೆ ಶಾಕ್ ಆಗ್ತೀರಾ ಅಂತ ಇರೋ ಬರೋ ಎಲ್ಲ ಸುದ್ದಿ (ಸಿಲ್ಲಿ ಸುದ್ದಿ)ಗಳಿಗೂ ಶಾಕ್ ಅಂತ ಹಾಕಿ ಹಾಕಿ ಕಡೆಗೆ ಇಂಟರ್ನೆಟ್ ಬಿಲ್ ನೋಡಿ ಜನರಿಗೆ ಶಾಕ್ ಆಗ್ತಿದೆ.

ಶೀರ್ಷಿಕೆಯಲ್ಲಿ 'ಶಾಕ್' ಇದ್ಯಲ್ಲ ಎಂಬ ಕಾರಣಕ್ಕೆ ವಿಡಿಯೋ ನೋಡಲು ಹೋದರೆ... ಜನರಿಗೆ ಖಾಲಿ ಪಾಲವ್... ಉಪ್ಪಿಲ್ಲದ ಉಪ್ಪಿನಕಾಯಿ... ಬೆಣ್ಣೆಯಿಲ್ಲದ ದಾವಣಗೆರೆ ದೋಸೆ ತಿಂದಂಥ ಫೀಲ್ ಬರುತ್ತೆ. ಕಡೆಗೆ ಇಂಟರ್ನೆಟ್ ಬಿಲ್ ಅಥವಾ ಬಾಕಿ ಇರುವ ಡೇಟಾ ನೋಡಿದ್ರೆ, ಜನರಿಗೆ ಕರೆಂಟ್ ನಿಂದ ಹೊಡೆಯುವ ಶಾಕ್ ಗಿಂತಲೂ ಹೆಚ್ಚಿನ ಶಾಕ್ ಆಗಿರುತ್ತೆ.

Some Kannada Youtube channels unnecessary using the word 'Shock' in their titles.
Ram Gopal Varma Ice Fruit Movie Controversy....

ತಮ್ಮ ವಿಡಿಯೋವನ್ನು ಹೆಚ್ಚು ಜನ ನೋಡಬೇಕು ಎಂಬ ಕಾರಣಕ್ಕೆ ಅವರು ಟೈಟಲ್ ನಲ್ಲಿ 'ಶಾಕ್' ಎಂದು ಹಾಕಿಬಿಡುತ್ತಾರೆ. ಆದರೆ ಈಗ ಜನ ಮಾತ್ರ 'ಶಾಕ್' ಎನ್ನುವ ಪದ ಕೇಳಿ ಕೇಳಿ ಸುಸ್ತಾಗಿ ಹೋಗಿದ್ದಾರೆ.

English summary
Some Kannada Youtube channels unnecessary using the word 'Shock' in thier titles.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada