For Quick Alerts
  ALLOW NOTIFICATIONS  
  For Daily Alerts

  ಉದಯೋನ್ಮುಖ ನಟಿ ಮೇಲೆ ಅತ್ಯಾಚಾರ

  By ರವಿಕಿಶೋರ್
  |
  ಚಲನಚಿತ್ರ ಕ್ಷೇತ್ರದಲ್ಲಿ ಇತ್ತೀಚೆಗೆ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿದ್ದು ಆತಂಕ ಸೃಷ್ಟಿಸುತ್ತಿವೆ. ಅದರಲ್ಲೂ ಕಿರುತೆರೆ, ಉದಯೋನ್ಮುಖ ತಾರೆಗಳ ಮೇಲೆ ಈ ರೀತಿಯ ಪ್ರಕರಣಗಳು ಹೆಚ್ಚಾಗುತ್ತಿರುವುದು ಆತಂಕಕಾರಿ ಬೆಳವಣಿಗೆ. ತಾನೊಬ್ಬ ಫಿಲಂ ಫೈನಾನ್ಷಿಯರ್ ಎಂದು ನಂಬಿಸಿ ಉದಯೋನ್ಮುಖ ನಟಿಯೊಬ್ಬರ ಮೇಲೆ ಅತ್ಯಾಚಾರವೆಸಗಿದ ಘಟನೆ ಗುರಗಾಂವ್ ನಲ್ಲಿ ನಡೆದಿದೆ.

  ಈತ ತಾನೊಬ್ಬ ಫೈನಾನ್ಷಿಯರ್ ಎಂದು ಹೇಳಿಕೊಂಡು ತಿರುಗುತ್ತಿದ್ದ. ದೊಡ್ಡ ದೊಡ್ಡ ಬ್ಯಾನರ್ ಚಿತ್ರಗಳನ್ನು ನಿರ್ಮಿಸುತ್ತೇನೆ. ಬಹಳಷ್ಟು ಸಿನಿಮಾ ತಾರೆಗಳಿಗೆ ಚಾನ್ಸ್ ಕೊಟ್ಟಿದ್ದೇ ನಾನು ಎಂದು ನಂಬಿಸಿ ಉದಯೋನ್ಮುಖ ನಟಿಯೊಬ್ಬರ ಮೇಲೆ ಕನಿಷ್ಠ ಐದು ಬಾರಿ ಅತ್ಯಾಚಾರವೆಸಗಿದ್ದಾನೆ.

  ಈ ಸಂಬಂಧ ಅತ್ಯಾಚಾರಕ್ಕೆ ಒಳಗಾಗಿರುವ ನಟಿ ಪೊಲೀಸರಿಗೆ ದೂರು ನೀಡಿದ್ದಾರೆ. ಇನ್ನೂ 25ರ ಹರೆಯದ ಸ್ಪಾಟ್ ಬಾಯ್ ಮುಸ್ತಾಫಾ ಮಸೂದ್ ಅಲಿ ಖಾನ್ ಎಂಬ ಆರೋಪಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಘಟನೆಯ ವಿವರಗಳು ಹೀಗಿವೆ...

  ಅತ್ಯಾಚಾರಕ್ಕೆ ಒಳಗಾಗಿರುವ ಯುವತಿಯ ವಯಸ್ಸು ಇನ್ನೂ 22ರ ಹರೆಯ. ಈಕೆ ಸಿನಿಮಾ ಒಂದರ ಮೂಲಕ ತಮ್ಮ ಅದೃಷ್ಟ ಬದಲಾಯಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರು. ಇಂತಹ ಹುಡುಗಿಯರಿಗಾಗಿ ಕಾಯುತ್ತಿದ್ದ ಮುಸ್ತಾಫಾ ಬಲೆಗೆ ಈಕೆ ಸುಲಭವಾಗಿ ಬಿದ್ದಿದ್ದಾರೆ. ಗುರಗಾಂವ್ ನ ಮೋತಿಲಾಲ್ ನಗರದ ಸ್ಟುಡಿಯೋದಲ್ಲಿ ಸ್ಪಾಟ್ ಬಾಯ್ ಆಗಿ ಕೆಲಸ ಮಾಡುತ್ತಿದ್ದ ಈತ ನಂಬಿಸಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ.

  ಚಿತ್ರದಲ್ಲಿ ಅಭಿನಯಿಸಲು ರು.50,000 ಸಂಭಾವನೆ ಹಾಗೂ ಚಾನ್ಸ್ ಕೊಡಿಸುತ್ತೇನೆ ಎಂದು ಹೇಳಿರುವ ಮುಸ್ತಾಫಾ, ಬಳಿಕ ತನ್ನ ಆಸೆ ಪೂರೈಸುವಂತೆ ಆಕೆ ಹಿಂದೆ ಬಿದ್ದಿದ್ದಾನೆ. ಆಕೆ ನಿರಾಕರಿಸಿದ ಕಾರಣ ಅತ್ಯಾಚಾರವೆಸಗಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಆರೋಪಿಯನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

  English summary
  A 23-year-old spot boy, posing as a financier, promised an aspiring actress big banner films. But instead, Mustafa Masud Ali Khan, raped her at least five times.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X