Just In
- 1 hr ago
ಹಿಂದೂ ಭಾವನೆಗಳಿಗೆ ಧಕ್ಕೆ; ಸೈಫ್ ನಟನೆಯ 'ತಾಂಡವ್' ವೆಬ್ ಸರಣಿ ವಿರುದ್ಧ ಬಿಜೆಪಿ ನಾಯಕರ ದೂರು
- 2 hrs ago
ಕಪಾಳಮೋಕ್ಷ ಆರೋಪ; ನಟ ಮಹೇಶ್ ಮಂಜ್ರೇಕರ್ ವಿರುದ್ಧ ದೂರು ದಾಖಲು
- 3 hrs ago
ರಾಕಿಂಗ್ ಸ್ಟಾರ್ ಯಶ್ ಗೆ ಮದುವೆ ಆಮಂತ್ರಣ ನೀಡಿದ ಕೃಷ್ಣ-ಮಿಲನಾ ಜೋಡಿ
- 15 hrs ago
ಹರ ಜಾತ್ರೆಯಲ್ಲಿ ಪುನೀತ್ ರಾಜ್ ಕುಮಾರ್; ಅಪ್ಪು ಹಾಡು ಕೇಳಿ ಸಂಭ್ರಮಿಸಿದ ಅಭಿಮಾನಿಗಳು
Don't Miss!
- News
ನೆದರ್ಲೆಂಡ್ಸ್ ಅಂಗಸಂಸ್ಥೆ ಮೂಲಕ ಭಾರತದಲ್ಲಿ ಹೂಡಿಕೆ ಮಾಡಲಿದೆ ಟೆಸ್ಲಾ
- Finance
ದೆಹಲಿಯಲ್ಲಿ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ಮುಟ್ಟಿದ ಪೆಟ್ರೋಲ್: ನಿಮ್ಮ ನಗರದಲ್ಲೆಷ್ಟು?
- Automobiles
ಡಿಸೆಂಬರ್ ತಿಂಗಳ ಮಾರಾಟ ವರದಿ ಬಿಡುಗಡೆಗೊಳಿಸಿದ ಮಹೀಂದ್ರಾ
- Sports
ಐಎಸ್ಎಲ್: ಸಮಬಲದ ಪ್ರದರ್ಶನ ನೀಡಿ ಡ್ರಾ ಮಾಡಿಕೊಂಡ ಎಟಿಕೆಎಂಬಿ, ಗೋವಾ
- Lifestyle
ಅಂಡಾಣು ಶೈತ್ಯೀಕರಣ: ಮಗುವನ್ನು ಪಡೆಯಲು ಈ ವಿಧಾನ ಸುರಕ್ಷಿತವೇ?
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
'ದುಬಾರಿ' ಧ್ರುವ ಸರ್ಜಾಗೆ ಕನ್ನಡದ ಯುವ ನಟಿ ಜೋಡಿ?
ಆಕ್ಷನ್ ಪ್ರಿನ್ಸ್ ನಟನೆಯ ಪೊಗರು ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ತೆರೆಕಾಣಲಿರುವ ಈ ಚಿತ್ರ ಈಗಾಗಲೇ ದೊಡ್ಡ ಮಟ್ಟದ ನಿರೀಕ್ಷೆ ಮೂಡಿಸಿದೆ. ಪೊಗರು ರಿಲೀಸ್ ಆಗುವುದಕ್ಕೂ ಮುಂಚೆಯೇ ಮತ್ತೊಂದು ಹೊಸ ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ ಧ್ರುವ.
ಪೊಗರು ನಿರ್ದೇಶಕ ನಂದ ಕಿಶೋರ್ ಅವರೇ ದುಬಾರಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದು, 'ಬಚ್ಚನ್' ಸಿನಿಮಾ ನಿರ್ಮಿಸಿದ್ದ ಉದಯ್ ಮೆಹ್ತಾ ನಿರ್ಮಾಣ ಮಾಡುತ್ತಿದ್ದಾರೆ. ಕಳೆದ ತಿಂಗಳಲ್ಲಿ ದುಬಾರಿ ಚಿತ್ರದ ಮುಹೂರ್ತ ನೆರವೇರಿತ್ತು. ಧ್ರುವ ಸರ್ಜಾ ದುಬಾರಿ ಚಿತ್ರಕ್ಕೆ ನಾಯಕಿ ಯಾರಾಗಬಹುದು ಎಂಬ ಕುತೂಹಲಕ್ಕೆ ಈಗ ಉತ್ತರ ಸಿಕ್ಕಿದೆ. ಮುಂದೆ ಓದಿ....
ಧ್ರುವ ಸರ್ಜಾ 'ದುಬಾರಿ' ಚಿತ್ರಕ್ಕೆ ನಾಯಕಿ ಯಾರಾಗಬಹುದು?

ದುಬಾರಿ ಧ್ರುವಾಗೆ ಶ್ರೀಲೀಲಾ ನಾಯಕಿ!
ಧ್ರುವ ಸರ್ಜಾ ಮತ್ತು ನಂದ ಕಿಶೋರ್ ಕಾಂಬಿನೇಷನ್‌ನಲ್ಲಿ ತಯಾರಾಗಲಿರುವ ದುಬಾರಿ ಚಿತ್ರದಲ್ಲಿ ಶ್ರೀಲೀಲಾ ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ. ನಿರ್ದೇಶಕ ನಂದ ಕಿಶೋರ್ ಈ ಬಗ್ಗೆ ಮಾಧ್ಯಮವೊಂದಕ್ಕೆ ಸ್ಪಷ್ಟಪಡಿಸಿದ್ದಾರೆ.

ಕಿಸ್, ಭರಾಟೆ ನಂತರ ದುಬಾರಿ
ಎಪಿ ಅರ್ಜುನ್ ನಿರ್ದೇಶಿಸಿದ್ದ ಕಿಸ್ ಹಾಗೂ ಶ್ರೀಮುರಳಿ ಜೊತೆ ಭರಾಟೆ ಸಿನಿಮಾ ಮಾಡಿದ್ದ ಶ್ರೀಲೀಲಾ ಈಗ ದುಬಾರಿ ಚಿತ್ರದಲ್ಲಿ ಧ್ರುವ ಸರ್ಜಾ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ. ಆದ್ರೆ, ಈ ಸುದ್ದಿಯನ್ನು ಅಧಿಕೃತವಾಗಿ ಇನ್ನು ಪ್ರಕಟಿಸಿಲ್ಲ.
ಏನೇ ಹೇಳಿ.....ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾಗೆ ತುಂಬಾ ಅದೃಷ್ಟ 'ರಿ'!

ದುಬಾರಿಯಲ್ಲಿ ಹಲವು ನಾಯಕಿಯರು
'ದುಬಾರಿ' ಚಿತ್ರಕ್ಕೆ ನಾಯಕಿ ಕನ್ನಡದವರೇ ಆಗ್ತಾರಾ ಅಥವಾ ಪರಭಾಷಾ ನಟಿ ಬರ್ತಾರಾ ಎಂಬ ಚರ್ಚೆ ನಡೆಯುತಿತ್ತು. ಸದ್ಯಕ್ಕೆ ಈ ಪ್ರಶ್ನೆಗೆ ಕನ್ನಡದ ನಟಿ ಉತ್ತರವಾಗಿ ಸಿಕ್ಕಿದ್ದಾರೆ. ಸ್ವತಃ ನಿರ್ದೇಶಕ ನಂದ ಕಿಶೋರ್ ಹೇಳಿದ್ದ ಪ್ರಕಾರ, ಈ ಸಿನಿಮಾದಲ್ಲಿ ಇಬ್ಬರಿಗಿಂತ ಹೆಚ್ಚು ನಾಯಕಿಯರು ಇರಲಿದ್ದಾರಂತೆ. ಶ್ರೀಲೀಲಾ ಪ್ರಮುಖ ನಟಿಯಾಗಿದ್ದರೂ, ಉಳಿದ ನಟಿಯರು ಯಾರು ಎಂಬ ನಿರೀಕ್ಷೆ ಹುಟ್ಟಿಕೊಂಡಿದೆ.

ಚಂದನ್ ಶೆಟ್ಟಿ ಸಂಗೀತ
ದುಬಾರಿ ಚಿತ್ರಕ್ಕೆ ಚಂದನ್ ಶೆಟ್ಟಿ ಸಂಗೀತ ನಿರ್ದೇಶನ ಮಾಡಲಿದ್ದಾರೆ. ಈಗಾಗಲೇ ಪೊಗರು ಸಿನಿಮಾಗೆ ಚಂದನ್ ಮ್ಯೂಸಿಕ್ ಕಂಪೋಸ್ ಮಾಡಿದ್ದು, ಹಾಡುಗಳು ಹಿಟ್ ಆಗಿದೆ. ಅದೇ ಜೋಡಿ ದುಬಾರಿ ಚಿತ್ರದಲ್ಲೂ ಮುಂದುವರಿಯಲಿದೆ.