Don't Miss!
- Sports
ಕ್ರಿಕೆಟ್ ಅಭಿಮಾನಿಗಳಿಗೆ ಸಿಹಿ ಸುದ್ದಿ: ರೋಹಿತ್ ಶರ್ಮಾ ಕೋವಿಡ್ ವರದಿ ನೆಗೆಟಿವ್; ಟಿ20 ಸರಣಿಗೆ ರೆಡಿ
- News
ISWA: ಆಸ್ಟ್ರೇಲಿಯಾದ ಅನಿವಾಸಿ ಭಾರತೀಯರೊಂದಿಗೆ ಸಚಿವ ಪ್ರಲ್ಹಾದ್ ಜೋಶಿ ನಿಯೋಗ ಭೇಟಿ
- Finance
Gold Rate Today: ಚಿನ್ನ ಸ್ಥಿರ: ಪ್ರಮುಖ ನಗರಗಳಲ್ಲಿ ಜು.3ರಂದು ಬೆಲೆ ಎಷ್ಟು
- Technology
ಶೀಘ್ರದಲ್ಲೇ ವಾಟ್ಸಾಪ್ ಸೇರಲಿದೆ ಅತಿ ಉಪಯುಕ್ತ ಫೀಚರ್ಸ್! ವಿಶೇಷತೆ ಏನು?
- Automobiles
ಜೂನ್ ತಿಂಗಳಿನಲ್ಲಿ 4.84 ಲಕ್ಷಕ್ಕೂ ಹೆಚ್ಚು ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದ ಹೀರೋ ಮೋಟೊಕಾರ್ಪ್
- Lifestyle
Weekly Horoscope: ಜುಲೈ 3ರಿಂದ ಜುಲೈ 9ರ ವಾರ ಭವಿಷ್ಯ: ಮೇಷ, ಮಿಥುನ, ಮಕರ, ಕುಂಭ ರಾಶಿಯ ವ್ಯಾಪಾರಸ್ಥರು ಆರ್ಥಿಕ ಲಾಭ ಪಡೆಯಬಹುದು
- Education
JNV Result 2022 : 6ನೇ ತರಗತಿ ತಾತ್ಕಾಲಿಕ ಆಯ್ಕೆ ಪಟ್ಟಿ ಜು.10ರಂದು ಪ್ರಕಟ ಸಾಧ್ಯತೆ
- Travel
ಕೆಮ್ಮಣ್ಣು ಗುಂಡಿ - ಒಂದು ಮನಮೋಹಕ ತಾಣ!
'ಕೆಜಿಎಫ್ 2' ಬಳಿಕ ಬಘೀರನ ಸೆಟ್ಟೇರಿದ ಹೊಂಬಾಳೆ ಫಿಲ್ಮ್ಸ್: ಶ್ರೀಮುರಳಿ ಕಸರತ್ತು ಹೇಗಿತ್ತು?
'ಕೆಜಿಎಫ್ 2' ಸಿನಿಮಾ ಮೂಲಕ ಹೊಂಬಾಳೆ ಫಿಲ್ಮ್ಸ್ ಕೂಡ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಫೇಮಸ್ ಆಗಿದೆ. ಇಡೀ ದೇಶಕ್ಕೆ ಹೊಂಬಾಳೆ ಫಿಲ್ಮ್ಸ್ ಬಗ್ಗೆ ಹೊತ್ತಿದೆ. ಇದೇ ಸಂಸ್ಥೆಯಿಂದ ಮತ್ತೊಂದು ಸಿನಿಮಾವೀಗ ಸೆಟ್ಟೇರಿದೆ. ಅದುವೇ 'ಬಘೀರ'.
ಹೊಂಬಾಳೆ ಫಿಲ್ಮ್ಸ್‌ಗೆ 'ಕೆಜಿಎಫ್ ಚಾಪ್ಟರ್ 2' ಸಿನಿಮಾ ಸಿಕ್ಕಾಪಟ್ಟೆ ಬೂಸ್ಟ್ ಕೊಟ್ಟಿದೆ. ಕನ್ನಡದ ನಿರ್ಮಾಣ ಸಂಸ್ಥೆಗೆ ಪ್ಯಾನ್ ಇಂಡಿಯಾ ಟಚ್ ಕೊಟ್ಟಿದೆ. ಇದೇ ಬೆನ್ನಲ್ಲೇ ಮತ್ತೊಂದು ಸಿನಿಮಾ ಸೆಟ್ಟೇರಿದ್ದು, ರೋರಿಂಗ್ ಸ್ಟಾರ್ ಶ್ರೀಮುರಳಿ ಸಿನಿಮಾಗೆ ಮುಹೂರ್ತ ಮಾಡಿ ಮುಗಿಸಿದೆ.
ಆ
ನಟನಿಗೆ
ಮಾತು
ಕೊಟ್ಟಿದ್ದೀನಿ,
ಖಂಡಿತ
ಕನ್ನಡ
ಸಿನಿಮಾ
ಮಾಡ್ತೀನಿ:
ಪ್ರಶಾಂತ್
ನೀಲ್
ಒಂದು ಕಡೆ 'ಕೆಜಿಎಫ್ 2' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಇನ್ನು ಸದ್ದು ಮಾಡುತ್ತಲೇ ಇದೆ. 1200 ಕೋಟಿ ಬಳಿಕವೂ ವಿಶ್ವದಾದ್ಯಂತ ಗಳಿಕೆಯಲ್ಲಿ ಹೊಸ ಸಿನಿಮಾಗೆ ಪೈಪೋಟಿ ಒಡ್ಡುತ್ತಲೇ ಇದೆ. ಹೀಗಾಗಿ ಹೊಂಬಾಳೆ ನಿರ್ಮಿಸುತ್ತಿರುವ ಮತ್ತೊಂದು ಸಿನಿಮಾ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಹಾಗಿದ್ದರೆ, ಇಂದು ( ಮೇ 20) ಸೆಟ್ಟೇರಿರುವ 'ಬಘೀರ' ಸಿನಿಮಾದ ಹೈಲೈಟ್ ಏನು? ತಿಳಿಯಲು ಮುಂದೆ ಓದಿ.

'ಬಘೀರ'ಗೆ ಸ್ಟೋರಿ ಬರೆದಿದ್ದು ಪ್ರಶಾಂತ್ ನೀಲ್
'ಕೆಜಿಎಫ್ 2' ಮೆಗಾ ಬ್ಲಾಕ್ ಬಸ್ಟರ್ ಆಗುತ್ತಿದ್ದಂತೆ ಪ್ರಶಾಂತ್ ನೀಲ್ ಸ್ಟೋರಿ ಬಗ್ಗೆ ಎಲ್ಲರೂ ಮಾತಾಡುವಂತಾಗಿದೆ. ಮಾಸ್, ಆಕ್ಷನ್ ಸ್ಟೋರಿಯನ್ನೇ ಹೆಚ್ಚು ಇಷ್ಟ ಪಡುವ ಪ್ರಶಾಂತ್ ನೀಲ್ ಮತ್ತೊಂದು ಕಥೆಯನ್ನು ಹೆಣೆದಿದ್ದಾರೆ. ಅದುವೇ 'ಬಘೀರ' ಈಗಾಗಲೇ ರಿಲೀಸ್ ಆಗಿರುವ ಮೋಷನ್ ಪೋಸ್ಟರ್ ನೋಡಿದ ಮೇಲಂತೂ ಇದೂ ಕೂಡ ರಗಡ್ ಮಾಸ್ ಸಿನಿಮಾ ಎಂಬುದು ಕಣ್ಮುಚ್ಚಿಕೊಂಡು ಹೇಳಬಹುದು. ಇನ್ನು 'ಬಘೀರ'ಗೆ ಪ್ರಶಾಂತ್ ನೀಲ್ ಕಥೆ ಎಂದಾಗ, ಸಿನಿಪ್ರಿಯರ ಕಿವಿಗಳು ನೆಟ್ಟಗಾಗಿವೆ. ಮತ್ತೊಂದು ಮಾಸ್ ಸಿನಿಮಾ ನೋಡುವುದಕ್ಕೆ ಜನರು ತುದಿಗಾಲಲ್ಲಿ ನಿಂತಿದ್ದಾರೆ.
ಶ್ರೀಮುರಳಿ
'ಮದಗಜ'
ಸಕ್ಸಸ್
ಮೀಟ್ನಲ್ಲಿ
'ಮದಗಜ
2'
ಘೋಷಣೆ:
ಏನಂತಿದೆ
ಸ್ಯಾಂಡಲ್ವುಡ್?
|
ಶ್ರೀಮುರಳಿ ರಗಡ್ ಪೊಲೀಸ್ ಆಫೀಸರ್!
ರೋರಿಂಗ್ ಸ್ಟಾರ್ ಶ್ರೀಮುರಳಿ ರಗಡ್ ಪೊಲೀಸ್ ಆಫೀಸರ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಮಾಸ್ ಲುಕ್‌ನಲ್ಲಿ ಮತ್ತೆ ತೆರೆ ಮೇಲೆ ಬರಲಿದ್ದು, ಮಾಸ್ ಆಕ್ಷನ್ ಫೀಲ್ ಸಿನಿಮಾ ಇದಾಗಿರುತ್ತೆ. 'ಮದಗಜ' ಬಳಿಕ ಶ್ರೀಮುರಳಿ ಸಾಕಷ್ಟು ತಯಾರಿ ಮಾಡಿಕೊಂಡು ಮತ್ತೆ ಅಖಾಡಕ್ಕೆ ಇಳಿಯುತ್ತಿದ್ದಾರೆ. 'ಬಘೀರ'ನಾಗಿ ಶ್ರೀಮುರಳಿ ಮತ್ತೆ ಉಗ್ರಂ ಸ್ವರೂಪ ತಾಳುತ್ತಾರಾ? ಅನ್ನೋದು ರೋರಿಂಗ್ ಸ್ಟಾರ್ ಅಭಿಮಾನಿಗಳಲ್ಲಿ ಕುತೂಹಲ ಕೆರಳಿಸಿದೆ.

'ಬಘೀರ' ಸಾರಥಿಯ ಬ್ಯಾಕ್‌ಗ್ರೌಂಡ್ ಎನು?
'ಬಘೀರ' ಸಿನಿಮಾದ ನಿರ್ದೇಶನದ ಜವಾಬ್ದಾರಿಯನ್ನು ಹೊಂಬಾಳೆ ಫಿಲ್ಮ್ಸ್ ನಿರ್ದೇಶಕ ಡಾ. ಸೂರಿಗೆ ವಹಿಸಿದೆ. ಡಾ. ಸೂರಿ ಈ ಹಿಂದೆ ಯಶ್ ಹಾಗೂ ರಮ್ಯಾ ಅಭಿನಯದ 'ಲಕ್ಕಿ' ಸಿನಿಮಾವನ್ನು ನಿರ್ದೇಶನ ಮಾಡಿದ್ದರು. ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ತಕ್ಕಮಟ್ಟಿಗೆ ಸದ್ದು ಮಾಡಿತ್ತು. ಬಳಿಕ ಕ್ವಾಟ್ಲೆ ಸತೀಶ ಸಿನಿಮಾದಲ್ಲೂ ಡಾ.ಸೂರಿ ನೀನಾಸಂ ಸತೀಶ್ ಸ್ನೇಹಿತನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
50
ದಿನ
ಪೂರೈಸಿದ
'ಮದಗಜ',
2023ಕ್ಕೆ
ಇದೇ
ಟೀಮ್ನಿಂದ
ಮತ್ತೊಂದು
ಸಿನಿಮಾ

'ಬಘೀರ'ನ ಬಗ್ಗೆ ಶ್ರೀಮುರಳಿ ಹೇಳಿದ್ದೇನು?
'ಬಘೀರ' ಸಿನಿಮಾ ಮುಹೂರ್ತಕ್ಕೂ ಮುನ್ನ ಶ್ರೀಮುರಳಿ ಭರ್ಜರಿ ತಯಾರಿ ನಡೆಸಿದ್ದಾರೆ. ಜಿಮ್‌ನಲ್ಲಿ ಕಸರತ್ತು ನಡೆಸಿದ್ದಾರೆ. ದೇಹವನ್ನು ಮತ್ತೆ ಕಟುಮಸ್ತಾಗಿ ಮಾಡಿಕೊಂಡು ಅಖಾಡಕ್ಕೆ ಇಳಿದಿದ್ದಾರೆ. ಅಲ್ಲದೆ ಇದು ಶ್ರೀಮುರಳಿ ಕರಿಯರ್‌ನಲ್ಲಿ ಸಿಕ್ಕಿರುವ ಅತ್ಯುತ್ತಮ ಸಿನಿಮಾ ಎಂಬ ಮಾತುಗಳು ಕೂಡ ಕೇಳಿಬರುತ್ತಿದೆ. ಸುಮಾರು ಎರಡು ವರ್ಷಗಳಿಂದ ಶ್ರೀಮುರಳಿ 'ಬಘೀರ'ನಿಗಾಗಿ ಕಥೆ ಹೆಣೆಯುತ್ತಿದ್ದಾರೆ.