»   » ಚಿತ್ರಮಂದಿರಗಳಲ್ಲಿ ಶ್ರೀಮುರಳಿ 'ಉಗ್ರ' ತಾಂಡವ

ಚಿತ್ರಮಂದಿರಗಳಲ್ಲಿ ಶ್ರೀಮುರಳಿ 'ಉಗ್ರ' ತಾಂಡವ

Posted By:
Subscribe to Filmibeat Kannada

ಹಲವಾರು ವಿಶೇಷಗಳಿಂದ ಕೂಡಿರುವ ಚಿತ್ರ 'ಉಗ್ರಂ'. ಸುದೀರ್ಘ ಸಮಯದ ಬಳಿಕ ನಟ ಶ್ರೀಮುರಳಿ ಅವರು ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಈ ಬಾರಿ ಅವರ 'ಉಗ್ರಂ' ತಾಂಡವವನ್ನು ನೋಡಲು ಪ್ರೇಕ್ಷಕರು ತುದಿಗಾಲಲ್ಲಿ ನಿಂತಿದ್ದಾರೆ.

ಇಂಕ್ ಫೈನೈಟ್ ಅವರ ಪ್ರಥಮ ನಿರ್ಮಾಣದ ಹಾಗೂ ಪ್ರಶಾಂತ್ ನೀಲ್ ಅವರ ಮೊದಲ ನಿರ್ದೇಶನದ ಉಗ್ರಂ ಚಿತ್ರ ಇದೇ ಶುಕ್ರವಾರ (ಫೆ.21) ಬಿಡುಗಡೆ ಆಗುತ್ತಿದೆ. ನೀಲ್ ಜೊತೆ ಚಿತ್ರಕಥೆ ಸಹಾಯ ಕೆ ರಾಮ್ ಒದಗಿಸಿದ್ದಾರೆ. ಜನಪ್ರಿಯ ನಾಯಕ ಶ್ರೀಮುರಳಿ ಜೊತೆ ನಾಯಕಿಯಾಗಿ ಚೆಲುವೆ ಹರಿಪ್ರಿಯಾ ಅವರು ಅಭಿನಯಿಸಿದ್ದಾರೆ. ಇದೊಂದು ಅಪಾರ ವೆಚ್ಚದ ಚಿತ್ರ ಹಲವು ವಿಶೇಷಗಳನ್ನು ಒಳಗೊಂಡಿದೆ. [ಮುರಳಿ ಉಗ್ರಂ 'ದರ್ಶನ'ಕ್ಕೆ ಚಾಲೆಂಜಿಂಗ್ ಸ್ಟಾರ್ ಸಾಥ್]


ರಾಮ್ ಲೀಲಾ ಹಿಂದಿ ಸಿನಿಮಾಗೆ ಛಾಯಾಗ್ರಹಣ ಮಾಡಿದ ರವಿ ವರ್ಮಾನ್ ಅವರು ಮೊದಲ ಭಾರಿಗೆ ಕನ್ನಡ ಸಿನೆಮಾದಲ್ಲಿ ತಮ್ಮ ಚಾಕಚಕ್ಯತೆಯನ್ನು ನೀಡಿದ್ದಾರೆ. ನಗರದ ಹೈ ಲ್ಯಾಂಡ್ ಹೊಟೇಲ್ ಶ್ರೀರಾಮ್ ರೆಡ್ಡಿ ಅವರ ಮೊಮ್ಮಗ ಪ್ರಶಾಂತ್ ನೀಲ್ ಅವರು ಗುಲ್ಬರ್ಗಾ, ಕೆ ಜಿ ಎಫ್ ಸ್ಥಳಗಳಲ್ಲಿ ಚಿತ್ರೀಕರಣ ಮಾಡಿದ್ದಾರೆ.

ತಾಳ್ಮೆಯೇ ಮೂಲ ಮಂತ್ರ, ಅದು ಮೀರಿದರೆ ಏನಾಗುವುದು ಎಂಬ ವಿಚಾರ ಪ್ರಸ್ತಾಪ ಆಗಿರುವ 'ಉಗ್ರಂ' ಸಿನೆಮವನ್ನು ತೂಗುದೀಪ ಸಂಸ್ಥೆ ವಿತರಣೆ ಮಾಡುತ್ತಿದೆ. ವಿದೇಶದಿಂದ ತಾಯಿಯ ಸಮಾಧಿ ಅನ್ನು ಹುಡುಕಿಕೊಂಡು ಬರುವ ನಾಯಕಿ ಹರಿಪ್ರಿಯಾ ನಿತ್ಯಾ ಪಾತ್ರದಲ್ಲಿ ಅನುಭವಿಸುವ ವಿಪರ್ಯಾಸ, ಪ್ರೀತಿ, ಪ್ರೇಮ ಈ ಸಿನಿಮಾದ ಕೆಲವು ಅಂಶಗಳಲ್ಲಿ ಇದೆ.

ರವಿ ಬರ್ಸೂರ್ ಅವರ ಸಂಗೀತ ಇರುವ ಚಿತ್ರದ ಪಾತ್ರವರ್ಗದಲ್ಲಿ ತಿಲಕ್ ಶೇಕರ್, ಅತುಲ್ ಕುಲಕರ್ಣಿ, ಜೈ ಜಗದೀಶ್, ಅವಿನಾಷ್, ಪದ್ಮಜ ರಾವ್, ಸುರೇಶ್ಚಂದ್ರ, ಪ್ರದೀಪ್, ಶರತ್, ತುಂಗಾ ಹಾಗೂ ಇತರರು ತಾರಾಗಣದಲ್ಲಿ ಇದ್ದಾರೆ. (ಒನ್ಇಂಡಿಯಾ ಕನ್ನಡ)

English summary
Sri Murali and Haripriya lead pair Kannada movie Ugramm releasing on 21st February. The film is produced by Inkfinite Pictures. India's top-most cinematographer, Ram-Leela famed Ravi Varman makes debut in Kannada Film with Ugramm.
Please Wait while comments are loading...