»   » ಮಹೇಶ್ ಬಾಬು ಕುಟುಂಬದ ಬಗ್ಗೆ ಅಚ್ಚರಿ ಹೇಳಿಕೆ ನೀಡಿದ ಶ್ರೀರೆಡ್ಡಿ

ಮಹೇಶ್ ಬಾಬು ಕುಟುಂಬದ ಬಗ್ಗೆ ಅಚ್ಚರಿ ಹೇಳಿಕೆ ನೀಡಿದ ಶ್ರೀರೆಡ್ಡಿ

Posted By:
Subscribe to Filmibeat Kannada

'ಕಾಸ್ಟಿಂಗ್ ಕೌಚ್' ವಿರುದ್ಧ ಪ್ರತಿಭಟನೆ ಮಾಡಿದ್ದ ತೆಲುಗು ನಟಿ ಶ್ರೀರೆಡ್ಡಿ ಈಗಾಗಲೇ ಇಂಡಸ್ಟ್ರಿಯಲ್ಲಿ ಸಂಚಲನ ಸೃಷ್ಟಿಸಿದ್ದಾರೆ. ನೇರವಾದ ಆರೋಪಗಳ ಮೂಲಕ ಹಲವು ಸಿನಿ ಕಲಾವಿದರು, ನಿರ್ಮಾಪಕರು, ನಿರ್ದೇಶಕರ ಮೇಲೆ ದೌರ್ಜನ್ಯ ಆರೋಪ ವರಿಸಿದ್ದಾರೆ.

ಇದೀಗ, ಮತ್ತಿಬ್ಬರು ಸ್ಟಾರ್ ನಿರ್ಮಾಪಕರ ಮೇಲೆ ಈಗ ಅಚ್ಚರಿ ಹೇಳಿಕೆ ನೀಡಿದ್ದಾರೆ. ಕೋನ ವೆಂಕಟ್, ಅಭಿರಾಮ್ ದಗ್ಗುಬಾಟಿ, ವೈವಾ ಹರ್ಷ, ಕೊರಟಲಾ ಶಿವ ನಂತರ ಈಗ ನಿರ್ಮಾಪಕ ಸುರೇಶ್ ಬಾಬು (ರಾಣಾ ದಗ್ಗುಬಾಟಿ ತಂದೆ) ಮತ್ತು ನಿರ್ಮಾಪಕ ದಿಲ್ ರಾಜು ವಿರುದ್ಧ ಮಾತನಾಡಿದ್ದಾರೆ.

'ಕಾಸ್ಟಿಂಗ್ ಕೌಚ್' ಶ್ರೀರೆಡ್ಡಿಗೆ ಚಾನ್ಸ್ ಕೊಡ್ತಾರಂತೆ ಖ್ಯಾತ ನಿರ್ದೇಶಕ

ಇದರ ಜೊತೆಗೆ ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಫ್ಯಾಮಿಲಿ ಬಗ್ಗೆಯೂ ಕಾಮೆಂಟ್ ಮಾಡಿದ್ದು, ಈ ಹೇಳಿಕೆ ಎಲ್ಲರಿಗೂ ಅಚ್ಚರಿ ನೀಡಿದೆ. ಅಷ್ಟಕ್ಕೂ, ಶ್ರೀರೆಡ್ಡಿ ಫೇಸ್ ಬುಕ್ ನಲ್ಲಿ ಬರೆದುಕೊಂಡಿರುವ ಸ್ಟೇಟಸ್ ಏನು.? ಮುಂದೆ ಓದಿ.....

ಎನ್.ಟಿ.ಆರ್ ಒಬ್ಬರೇ ದೇವರು

ತೆಲುಗು ಚಿತ್ರರಂಗದ ದಿಗ್ಗಜ ನಟ ಎನ್.ಟಿ.ಆರ್ ಒಬ್ಬರೇ ಮಹಾನುಬಾವರು. ಇಂಡಸ್ಟ್ರಿ ಇವರನ್ನ ದೇವರೆಂದು ಬಿಂಬಿಸಿದೆ ಎಂದು ಶ್ರೀರೆಡ್ಡಿ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಇಂಡಸ್ಟ್ರಿಯನ್ನ ನಾಲ್ಕು ಕುಟುಂಬ ನಿಯಂತ್ರಿಸುತ್ತಿದೆ

ತೆಲುಗು ಇಂಡಸ್ಟ್ರಿಯನ್ನ ನಾಲ್ಕು ಕುಟುಂಬಗಳು ನಿಯಂತ್ರಿಸುತ್ತಿದೆ ಎಂದು ಪದೇ ಪದೇ ಹೇಳುತ್ತಿದ್ದ ಶ್ರೀರೆಡ್ಡಿ ಈಗ ಅವರ ಹೆಸರುಗಳನ್ನ ಕೂಡ ಪ್ರಸ್ಥಾಪಿಸಿದ್ದಾರೆ. ಅಲ್ಲು ಅರವಿಂದ್, ಸುರೇಶ್ ಬಾಬು, ದಿಲ್ ರಾಜು, ಸುನೀಲ್ ಅವರ ಹೆಸರುಗಳನ್ನ ಬಹಿರಂಗಪಡಿಸಿದ್ದಾರೆ.

ಶ್ರೀರೆಡ್ಡಿಗೆ ಕೌಂಟರ್ ಕೊಟ್ಟಿದ್ದಕ್ಕೆ ಕನ್ನಡ ಚಿತ್ರ ನಟಿ ಕವಿತಾಗೆ ಬೆದರಿಕೆ.!

ಸುರೇಶ್ ಬಾಬು ಹಿಟ್ಲರ್

ನಿರ್ಮಾಪಕ ಸುರೇಶ್ ಬಾಬು ಹಿಟ್ಲರ್ ರೀತಿ ಮನುಷ್ಯ ಎಂದು ಕಿಡಿಕಾರಿದ್ದಾರೆ. ಕೇವಲ ಸುರೇಶ್ ಬಾಬು ಮಾತ್ರವಲ್ಲ, ನಿರ್ಮಾಪಕ ದಿಲ್ ರಾಜು ಅವರನ್ನ ಕೂಡ ಟಾರ್ಗೆಟ್ ಮಾಡಿರುವ ನಟಿ, ದಿಲ್ ಇಲ್ಲದೇ ಡಲ್ ರಾಜು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಹೇಶ್ ಬಾಬು ಫ್ಯಾಮಿಲಿ ಇಲ್ಲ

''ತಾನು ಆರೋಪಿಸಿರುವ ನಾಲ್ಕು ಕುಟುಂಬಗಳಲ್ಲಿ ಮಹೇಶ್ ಬಾಬು ಅವರ ಕುಟುಂಬ ಇಲ್ಲ''ವೆಂದು ಶ್ರೀರೆಡ್ಡಿ ಸ್ಪಷ್ಟಪಡಿಸಿದ್ದಾರೆ. ಮಹೇಶ್ ಅವರ ತಂದೆ ಹಿರಿಯ ನಟ ಕೃಷ್ಣ ಅವರು 'ದೇವರೆಂದು' ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪವನ್ ಕಲ್ಯಾಣ್ ವಿವಾದಕ್ಕೆ ಹೊಸ ಟ್ವಿಸ್ಟ್ ನೀಡಿದ ಶ್ರೀರೆಡ್ಡಿ

ಮಹೇಶ್ ಬಾಬು ಗ್ರೇಟ್

ಸಮಾಜಕ್ಕೆ ಒಂದೊಳ್ಳೆ ಸಂದೇಶಗಳನ್ನ ನೀಡುವಂತಹ ಸಿನಿಮಾಗಳನ್ನ ಮಾಡುತ್ತಾ, ಯುವಕರಿಗೆ ಸ್ಫೂರ್ತಿ ತುಂಬುತ್ತಿರುವ ಮಹೇಶ್ ಬಾಬು ಗ್ರೇಟ್ ವ್ಯಕ್ತಿ. ಅವರ ಅಭಿಮಾನಿಗಳು ಕೂಡ ಕೂಲ್ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

English summary
Telugu actress Sri Reddy’s protest against Casting couch in Telugu Film Industry has already created lot of buzz. After revealing big names including Kona Venkat, Abhiram Daggubati, the controversial actress Sri Reddy is now targeting Suresh Babu (the father of Abhiram Daggubati) and Dil Raju.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X