»   » 'ಅಪ್ಪಯ್ಯ'ನ ಅಪ್ಪಾಲೆತಿಪ್ಪಾಲೆಗೆ ಚಿತ್ರಮಂದಿರಗಳು ಸಜ್ಜು

'ಅಪ್ಪಯ್ಯ'ನ ಅಪ್ಪಾಲೆತಿಪ್ಪಾಲೆಗೆ ಚಿತ್ರಮಂದಿರಗಳು ಸಜ್ಜು

Posted By:
Subscribe to Filmibeat Kannada

'ಅಪ್ಪಯ್ಯ'ನ ಆಟಕ್ಕೆ ಚಿತ್ರಮಂದಿರಗಳು ಸಜ್ಜಾಗಿವೆ. ಒಂದು ನೈಜ ಕಥೆಯನ್ನು ಅಷ್ಟೇ ಸರಳವಾಗಿ ನಿರೂಪಿಸಿ ಮನಸ್ಸಿಗೆ ಹಾಗೂ ಹೃದಯಕ್ಕೆ ಹತ್ತಿರವಾಗುವಂತೆ ಚಿತ್ರೀಕರಣ ಮಾಡಿದ್ದಾರೆ ಖ್ಯಾತ ನಿರ್ದೇಶಕ ಎಸ್ ನಾರಾಯಣ್. ಅವರ ನಿರ್ದೇಶನದ ಅಪ್ಪಯ್ಯ ಚಿತ್ರ ಈ ವಾರ (ಸೆ.13) ಬಿಡುಗಡೆಯಾಗುತ್ತಿದೆ.

ಈ ಬಾರಿ ಎಸ್ ನಾರಾಯಣ್ ಅವರು ನಿಜ ಜೀವನದಲ್ಲಿ ನಡೆದಿರುವ ಘಟನೆಗಳನ್ನೇ ಕಥೆಯಾಗಿಸಿದ್ದಾರೆ. ಜನಪ್ರಿಯ ನಾಯಕ ಶ್ರೀನಗರ ಕಿಟ್ಟಿ ಹಾಗೂ ಸುಂದರ ಚೆಲುವೆ ಭಾಮಾ ಅವರ ಮುಖ್ಯ ಪಾತ್ರಗಳಲ್ಲಿ ಅಭಿನಯಿಸಿರುವ ಈ ಚಿತ್ರವನ್ನು ಶ್ರೀಮತಿ ಭಾಗ್ಯವತಿ ಕಂಬೈನ್ಸ್ ಅಡಿಯಲ್ಲಿ ಭಾಗ್ಯವತಿ ಹಾಗೂ ಪವನ್ ಕಾರ್ತಿಕ್ ಅವರು ನಿರ್ಮಾಣ ಮಾಡಿದ್ದಾರೆ.


ಎಸ್ ನಾರಾಯಣ ಅವರ ಈ ಮಹತ್ವಾಕಾಂಕ್ಷೆಯ ಚಿತ್ರ ಸೆನ್ಸಾರ್ ಮಂಡಲಿಯಿಂದ ಯು/ಎ ಪಡೆದಿದೆ. ಯಶಸ್ವಿ ಚಿತ್ರಗಳ ನಿರ್ದೇಶಕ, ನಿರ್ಮಾಪಕ, ನಟ ಎಸ್ ನಾರಾಯಣ್ ಅವರು ಈ ಸಲ 'ಅಪ್ಪಯ್ಯ' ಚಿತ್ರೀಕರಣಕ್ಕೆ ಹಳ್ಳಿಗಾಡಿನ ಪರಿಸರ ಆರಿಸಿಕೊಂಡಿದ್ದಾರೆ.

ಎಸ್ ನಾರಾಯಣ್ ಹಾಗೂ ಕವಿರಾಜ್ ಅವರ ಸಾಹಿತ್ಯವಿದೆ. ಹಾಡುಗಳನ್ನು ಎಸ್ ನಾರಾಯಣ್ ಅವರು ರಾಗ ಸಂಯೋಜನೆ ಮಾಡಿದ್ದಾರೆ. ಧರ್ಮ ವಿಶ್ ಅವರು ಹಿನ್ನಲೆ ಸಂಗೀತವನ್ನು ಕೊಟ್ಟಿದ್ದಾರೆ.

ಆಶರಾಣಿ, ಇಂದ್ರಕುಮಾರ್, ಸುರೇಶ್ ಚಂದ್ರ, ನಂದ ಹಾಗೂ ಇನ್ನಿತರರು ಇರುವ ಈ ಚಿತ್ರಕ್ಕೆ ಜಗದೀಶ್ ವಾಲಿ ಅವರ ಛಾಯಾಗ್ರಹ ಇದೆ. ಡಿಫರೆಂಟ್ ಡ್ಯಾನಿ ಅವರ ಸಾಹಸ ಸಂಯೋಜನೆಯು ಚಿತ್ರದ ಪ್ರಮುಖ ಅಂಶ. (ಒನ್ಇಂಡಿಯಾ ಕನ್ನಡ)

English summary
S Narayan written,directed and co-produced Kannada romantic film Appayya slated for release on 13th September. It is produced under Bhagyavathi Combines. Srinagar Kitty and Bhama are in the lead roles.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada