twitter
    For Quick Alerts
    ALLOW NOTIFICATIONS  
    For Daily Alerts

    ಲೋಕೇಶ್ ಕುಟುಂಬದ ಹೊಸ ಸಾಧನೆ: ಇನ್ಮುಂದೆ ಯಾರೂ ಮಾಡಲಾಗದು.!

    |

    Recommended Video

    ಲೋಕೇಶ್ ಕುಟುಂಬದ ಹೊಸ ಸಾಧನೆ | FILMIBEAT KANNADA

    ಗುಬ್ಬಿ ವೀರಣ್ಣ ನಿರ್ಮಿಸಿದ್ದ ಮೂಕಿ ಚಿತ್ರ 'ಹೀಸ್ ಲವ್ ಅಫೆರ್'ನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಸುಬ್ಬಯ್ಯ ನಾಯ್ಡು ಅವರು, ಕನ್ನಡದ ಮೊದಲ ವಾಕ್ಚಿತ್ರ (1934) 'ಸತಿ ಸುಲೋಚನಾ'ದಲ್ಲಿ ನಾಯಕರಾಗುವ ಮೂಲಕ, ಕನ್ನಡ ಚಿತ್ರರಂಗದ ಮೊದಲ ನಾಯಕ ನಟ ಎಂಬ ದಾಖಲೆ ಬರೆದರು.

    ಅವರ ಮಗ ನಟ ಲೋಕೇಶ್ ಕೂಡ ಕನ್ನಡ ಸಿನಿಮಾರಂಗದಲ್ಲಿ ವಿಶೇಷ ಸ್ಥಾನಮಾನ ಹೊಂದಿದ್ದಾರೆ. ನಾಯಕ, ಖಳನಾಯಕ, ಹಾಸ್ಯನಟ, ಪೋಷಕ ನಟ ಹೀಗೆ ಎಲ್ಲ ಪಾತ್ರಗಳನ್ನ ನಿರ್ವಹಿಸಿದ ದಿಗ್ಗಜ. ಲೋಕೇಶ್ ಅವರ ಪತ್ನಿ ಗಿರಿಜಾ ಲೋಕೇಶ್ ಕೂಡ ಸಿನಿಮಾ ನಟಿ.

    ಗಜನ ಜೊತೆ ಸೃಜನಿಗೂ ಸಿಕ್ತು ಹೊಸ ಬಿರುದು ಗಜನ ಜೊತೆ ಸೃಜನಿಗೂ ಸಿಕ್ತು ಹೊಸ ಬಿರುದು

    ಇವರಿಬ್ಬರ ನಂತರ ಸೃಜನ್ ಲೋಕೇಶ್ ಕೂಡ ಸ್ಯಾಂಡಲ್ ವುಡ್ ಪ್ರವೇಶ ಮಾಡಿ, ತಮ್ಮ ತಾತ, ತಂದೆ-ತಾಯಿಯ ಅವರ ವೃತ್ತಿಯನ್ನ ಮುಂದುವರಿಸುತ್ತಿದ್ದಾರೆ. ಈಗ ಇನ್ನೊಂದು ಪೀಳಿಗೆಯನ್ನ ಮುಂದೆ ಕರೆದುಕೊಂಡು ಬಂದ ಸೃಜನ್, ತಮ್ಮ ಮಗನನ್ನು ಸಿನಿಮಾರಂಗಕ್ಕೆ ಪ್ರವೇಶ ಮಾಡಿದ್ದಾರೆ. ಈ ಸಂತಸದ ಸಂದರ್ಭದಲ್ಲಿ ಸೃಜನ್ ಕುಟುಂಬ ಮಾಡಿದ ಒಂದು ವಿಶೇಷ ದಾಖಲೆಯನ್ನ ಹೇಳಿಕೊಂಡರು. ಏನದು.? ಮುಂದೆ ಓದಿ....

    ಲೋಕೇಶ್ ಗೆ ಸುಬ್ಬಯ್ಯ ನಾಯ್ಡು ಆಕ್ಷನ್ ಕಟ್

    ಲೋಕೇಶ್ ಗೆ ಸುಬ್ಬಯ್ಯ ನಾಯ್ಡು ಆಕ್ಷನ್ ಕಟ್

    ಸೃಜನ್ ಲೋಕೇಶ್ ಅವರ ತಂದೆ ಲೋಕೇಶ್ ಅವರ ಅಭಿನಯಿಸಿದ ಮೊದಲ ಸಿನಿಮಾ 'ಭಕ್ತ ಪ್ರಹ್ಲಾದ' (1958). ಈ ಚಿತ್ರವನ್ನ ನಿರ್ದೇಶನ ಮಾಡಿದ್ದು, ಸೃಜನ್ ಅವರ ತಾತ ಸುಬ್ಬಯ್ಯ ನಾಯ್ಡು. ಲೋಕೇಶ್ ಅವರಿಗೆ ಅವರ ತಂದೆ ಆಕ್ಷನ್ ಕಟ್ ಹೇಳಿದ್ರು. ಇದೇ ಹೆಸರಿನಲ್ಲಿ ಡಾ ರಾಜ್ ಕುಮಾರ್ ಕೂಡ ಸಿನಿಮಾ ಮಾಡಿದ್ರು. ಅದು 1983ರಲ್ಲಿ ಬಿಡುಗಡೆಯಾಗಿತ್ತು.

    ಸೃಜನ್ ಲೋಕೇಶ್ ನಗುವಿನ ಹಿಂದೆ ಇರುವ ಕಣ್ಣೀರ ಕಹಾನಿ ಬಯಲುಸೃಜನ್ ಲೋಕೇಶ್ ನಗುವಿನ ಹಿಂದೆ ಇರುವ ಕಣ್ಣೀರ ಕಹಾನಿ ಬಯಲು

    ಸೃಜನ್ ಗೆ ಲೋಕೇಶ್ ಆಕ್ಷನ್ ಕಟ್

    ಸೃಜನ್ ಗೆ ಲೋಕೇಶ್ ಆಕ್ಷನ್ ಕಟ್

    ಸೃಜನ್ ಲೋಕೇಶ್ ಅಭಿನಯದ ಮೊದಲ ಸಿನಿಮಾ 'ಭುಜಂಗಯ್ಯನ ದಶಾವತಾರ'. 1991ರಲ್ಲಿ ತೆರೆಕಂಡಿದ್ದ ಈ ಚಿತ್ರವನ್ನ ಲೋಕೇಶ್ ಅವರೇ ನಟಿಸಿ, ನಿರ್ದೇಶನ ಮಾಡಿ, ನಿರ್ಮಾಣ ಕೂಡ ಮಾಡಿದ್ದರು. ಈ ಚಿತ್ರದಲ್ಲಿ ಮಾಸ್ಟರ್ ಸೃಜನ್ ಬಾಲನಟನಾಗಿ ಅಭಿನಯಿಸಿದ್ದರು. ಹೀಗಾಗಿ, ಮಗನಿಗೆ ಮೊದಲು ಆಕ್ಷನ್ ಕಟ್ ಹೇಳಿದ್ದು ತಂದೆ ಲೋಕೇಶ್.

    ಮತ್ತೆ ಬಿಗ್ ಸ್ಕ್ರೀನ್ ಗೆ ಬಂದ ಸೃಜ : ಹರಿಪ್ರಿಯಾ ಜೊತೆ ಮಜಾಮತ್ತೆ ಬಿಗ್ ಸ್ಕ್ರೀನ್ ಗೆ ಬಂದ ಸೃಜ : ಹರಿಪ್ರಿಯಾ ಜೊತೆ ಮಜಾ

    ಮಗನಿಗೆ ಸೃಜನ್ ಆಕ್ಷನ್ ಕಟ್

    ಮಗನಿಗೆ ಸೃಜನ್ ಆಕ್ಷನ್ ಕಟ್

    ಈಗ ಅದೇ ಸಂಪ್ರದಾಯವನ್ನ ಮುಂದುವರಿಸಿದ ಸೃಜನ್ ಲೋಕೇಶ್ ತಮ್ಮ ಮಗನಿಗೆ ತಾವೇ ಮೊದಲ ಸಲ ಆಕ್ಷನ್ ಕಟ್ ಹೇಳಿದ್ದಾರೆ. ಹೌದು, ಸೃಜನ್ ಲೋಕೇಶ್ ನಟಿಸಿ, ನಿರ್ಮಾಣ ಮಾಡುತ್ತಿರುವ 'ಎಲ್ಲಿದ್ದೆ ಇಲ್ಲಿ ತನಕ' ಚಿತ್ರದಲ್ಲಿ ಸೃಜನ್ ಮಗ ಸುಕೃತ್ ಮೊದಲ ಬಾರಿಗೆ ಕಾಣಿಸಿಕೊಳ್ಳುತ್ತಿದ್ದು, ಮಗನ ದೃಶ್ಯಕ್ಕೆ ಸೃಜನ್ ನಿರ್ದೇಶನ ಮಾಡಿದ್ದಾರೆ. ಉಳಿದಂತೆ ಸಿನಿಮಾವನ್ನ ತೇಜಸ್ವಿ ನಿರ್ದೇಶನ ಮಾಡ್ತಿದ್ದಾರೆ.

    ಬಂಡೆ ಮಹಾಕಾಳಮ್ಮನ ಮೇಲೆ ಅದ್ಹೇಗೆ 'ಗಜ-ಸೃಜ'ಗೆ ಅಪಾರ ನಂಬಿಕೆ.?ಬಂಡೆ ಮಹಾಕಾಳಮ್ಮನ ಮೇಲೆ ಅದ್ಹೇಗೆ 'ಗಜ-ಸೃಜ'ಗೆ ಅಪಾರ ನಂಬಿಕೆ.?

    ತಲೆಮಾರಿನಿಂದ ಟ್ರೆಂಡ್ ಇದು

    ತಲೆಮಾರಿನಿಂದ ಟ್ರೆಂಡ್ ಇದು

    ಇದು ಕಲಾವಿದನ ಕುಟುಂಬ ಹಾಗೂ ಸಿನಿಮಾರಂಗದಲ್ಲಿ ದಾಖಲಾಗಿರುವ ಅಪರೂಪದ ಸಾಧನೆ ಮತ್ತು ದಾಖಲೆ ಎನ್ನಬಹುದು. ಈ ರೀತಿಯಾದ ಕ್ಷಣ ಮತ್ತೆ ಬರುತ್ತಾ ಗೊತ್ತಿಲ್ಲ. ಆದ್ರೆ, ಸೃಜನ್ ಲೋಕೇಶ್ ಕುಟುಂಬಕ್ಕೆ ಇದು ಖುಷಿಯ ವಿಚಾರವೇ ಸರಿ.

    'ಎಲ್ಲಿದ್ದೆ ಇಲ್ಲಿ ತನಕ' ಆರಂಭ

    'ಎಲ್ಲಿದ್ದೆ ಇಲ್ಲಿ ತನಕ' ಆರಂಭ

    'ಎಲ್ಲಿದ್ದೆ ಇಲ್ಲಿ ತನಕ' ಸಿನಿಮಾ ಆರಭವಾಗಿದೆ. ದರ್ಶನ್, ರವಿಚಂದ್ರನ್ ಮತ್ತು ಹಿರಿಯ ನಟಿ ಜಯಂತಿ ಈ ಚಿತ್ರಕ್ಕೆ ಚಾಲನೆ ನೀಡಿದ್ದಾರೆ. ಸೃಜನ್ ನಾಯಕನಾಗಿದ್ದು, ಹರಿಪ್ರಿಯಾ ಜೋಡಿಯಾಗಿದ್ದಾರೆ. ಅರ್ಜುನ್ ಜನ್ಯ ಸಂಗೀತ, ತೇಜಸ್ವಿ ನಿರ್ದೇಶನವಿದೆ. ಲೋಕೇಶ್ ಪ್ರೊಡಕ್ಷನ್ ನಲ್ಲೇ ಈ ಸಿನಿಮಾ ತಯಾರಾಗಿದೆ.

    English summary
    Kannada actor srujan lokesh's son sukruth acted in 'ellidde illi tanaka' movie. it is the first movie of his son.
    Tuesday, December 11, 2018, 13:43
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X