For Quick Alerts
  ALLOW NOTIFICATIONS  
  For Daily Alerts

  'Mr.ಐರಾವತ' ಟಿಕೆಟ್ ಬೆಲೆ ಅಬ್ಬಬ್ಬಾ...ಅಷ್ಟೊಂದಾ.?!

  By Harshitha
  |

  ಸಾಮಾನ್ಯವಾಗಿ ಒಂದು ಸಿನಿಮಾ ಟಿಕೆಟ್ ಬೆಲೆ ಎಷ್ಟು? ಸಿಂಗಲ್ ಸ್ಕ್ರೀನ್ ಥಿಯೇಟರ್ ನಲ್ಲಿ ಮ್ಯಾಕ್ಸಿಮಂ ಅಂದ್ರೆ 180-200 ರೂಪಾಯಿ. ಮಲ್ಟಿಪ್ಲೆಕ್ಸ್ ನಲ್ಲಾದ್ರೆ 300-400 ರೂಪಾಯಿ. ಅದು ಭಾಷೆ, ದಿನ ಮತ್ತು ಡಿಮ್ಯಾಂಡ್ ಆಧಾರದ ಮೇಲೆ.

  ನಮ್ಮ ಕನ್ನಡ ಚಿತ್ರಗಳಿಗೆ ಬ್ಲಾಕ್ ನಲ್ಲಿ 1000 ರೂಪಾಯಿವರೆಗೂ ಒಂದು ಟಿಕೆಟ್ ಓಡಿರಬಹುದು. ಆದ್ರೆ, ಈಗ ನಾವು ಹೇಳುವುದಕ್ಕೆ ಹೊರಟಿರುವ ಮ್ಯಾಟರ್ ಕೇಳಿದ್ರೆ, ನೀವೇ ನಿಮ್ಮ ಬಾಯಿ ಮೇಲೆ ಬೆರಳಿಡುತ್ತೀರಾ....

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'Mr.ಐರಾವತ' ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ. ಅಕ್ಟೋಬರ್ 1 ರಂದು 'Mr.ಐರಾವತ' ತೆರೆಗೆ ಅಪ್ಪಳಿಸುತ್ತಿದೆ. ವಿದೇಶಗಳಲ್ಲೂ ಏಕಕಾಲಕ್ಕೆ ರಿಲೀಸ್ ಆಗುತ್ತಿರುವ ಈ ಚಿತ್ರದ ಟಿಕೆಟ್ ಬುಕ್ಕಿಂಗ್ ಇನ್ನೂ ಶುರುವಾಗಿಲ್ಲ. ['ಮಿಸ್ಟರ್ ಐರಾವತ' ಡಬ್ಬಿಂಗ್ ಮುಗಿಸಿದ ಮಾ.ವಿನೀಶ್]

  ಅಷ್ಟು ಬೇಗ 'Mr.ಐರಾವತ' ಚಿತ್ರದ ಮೊದಲ ಟಿಕೆಟ್ ನ ತಾವೇ ಖರೀದಿಸಬೇಕು ಅಂತ ಸೃಜನ್ ಲೋಕೇಶ್ ಡಿಸೈಡ್ ಮಾಡಿದ್ರೇನೋ, ಅದರಂತೆ ಮೇನ್ ಥಿಯೇಟರ್ ಬೆಂಗಳೂರಿನ ಕೆ.ಜಿ.ರೋಡ್ ನಲ್ಲಿರುವ ಸಂತೋಷ್ ಚಿತ್ರಮಂದಿರದಲ್ಲಿ 'Mr.ಐರಾವತ' ಚಿತ್ರದ ಫಸ್ಟ್ ಟಿಕೆಟ್ ಕೊಂಡುಕೊಂಡಿದ್ದಾರೆ. [ಸೆನ್ಸಾರ್ ಅಂಗಳದಿಂದ 'Mr.ಐರಾವತ' ಪಾಸ್.! ರಿಲೀಸ್ ಯಾವಾಗ?]

  ಅದು ಎಷ್ಟು ದುಡ್ಡು ಕೊಟ್ಟು ಗೊತ್ತಾ? ಬರೋಬ್ಬರಿ ಒಂದು ಲಕ್ಷ ರೂಪಾಯಿ..! ಅಚ್ಚರಿ ಅಂದ್ರೂ ನೀವು ನಂಬಲೇಬೇಕು. ನಂಬಲ್ಲ ಅಂದ್ರೆ, ಫೇಸ್ ಬುಕ್ ನಲ್ಲಿ ಸಂದೇಶ್ ನಾಗರಾಜ್ ಹಾಕಿರುವ ಈ ಸ್ಟೇಟಸ್ ನೋಡಿ.

  ಯೆಸ್, ಹೇಳಿ ಕೇಳಿ ಸೃಜನ್ ಲೋಕೇಶ್ ದರ್ಶನ್ ರವರಿಗೆ ಆಪ್ತರು. 'Mr.ಐರಾವತ' ಚಿತ್ರಕ್ಕೆ ಶುಭವಾಗಲಿ ಅನ್ನುವ ಕಾರಣಕ್ಕೆ ಸೃಜನ್ ಲೋಕೇಶ್ ದೊಡ್ಡ ಮೊತ್ತ ಕೊಟ್ಟು ಬೋಣಿ ಮಾಡಿದ್ದಾರೆ. ಕ್ರೇಜಿ ಅನ್ನೋದು ಇದಕ್ಕೆ ಇರಬೇಕು ಅಲ್ವೇ.

  English summary
  Kannada Actor Srujan Lokesh has pre booked Darshan starrer 'Mr.Airavata' ticket for Rs.1 Lakh. A.P.Arjun directorial 'Mr.Airavata' is releasing on October 1st.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X