»   » ಕದ್ದು-ಮುಚ್ಚಿ ಮದುವೆ ಆಗಿದ್ದಾರಂತೆ ನಟಿ ಶೃತಿ ಹರಿಹರನ್: ಹೌದಾ.?

ಕದ್ದು-ಮುಚ್ಚಿ ಮದುವೆ ಆಗಿದ್ದಾರಂತೆ ನಟಿ ಶೃತಿ ಹರಿಹರನ್: ಹೌದಾ.?

Posted By:
Subscribe to Filmibeat Kannada
Sruthi Hariharan gives clarity about her marraige gossip

''ಬ್ಯೂಟಿಫುಲ್ ಮನಸ್ಸಿನ ನಟಿ ಶೃತಿ ಹರಿಹರನ್ ಮದುವೆ ಆಗ್ಬಿಟ್ಟಿದ್ದಾರಂತೆ'' ಹಾಗಂತ ಗಾಂಧಿನಗರದ ಗಲ್ಲಿಗಲ್ಲಿಗಳಲ್ಲಿ ಗುಲ್ಲೋ ಗುಲ್ಲು. ಇದನ್ನ ಕೇಳಿದವರಂತೂ ಬಾಯ್ಮೇಲೆ ಬೆರಳಿಟ್ಟುಕೊಂಡಿದ್ದಾರೆ.

ಶೃತಿ ಹರಿಹರನ್ ಸದ್ಯ ಕನ್ನಡದ ಟಾಪ್ ನಟಿಯರಲ್ಲಿ ಒಬ್ಬರು. ಜೊತೆಗೆ ಕೈ ತುಂಬ ಸಿನಿಮಾಗಳಿವೆ. ಹೀಗಿರುವಾಗ ಇದ್ದಕ್ಕಿದ್ದ ಹಾಗೆ ನಟಿ ಶೃತಿ ಮದುವೆ ಆಗಿದ್ದಾರೆ ಎಂಬ ಸುದ್ದಿ ಕೇಳಿಬಂದಿದೆ.

ತಮ್ಮ ಬಗ್ಗೆ ಕೇಳಿ ಬಂದಿರುವ ಇಂತಹ ವದಂತಿಗಳ ಬಗ್ಗೆ ಸ್ವತಃ ಶೃತಿ ಹರಿಹರನ್ ಈಗ ಉತ್ತರಿಸಿದ್ದಾರೆ. ಮುಂದೆ ಓದಿ..

ಶೃತಿ ಹರಿಹರನ್ ಪ್ರತಿಕ್ರಿಯೆ

ಕನ್ನಡದ ನಟಿ ಶೃತಿ ಹರಿಹರನ್ ಮದುವೆ ಆಗಿದ್ದಾರೆ ಎಂಬ ಸುದ್ದಿ ಎಲ್ಲ ಕಡೆ ಹರಿದಾಡಿತ್ತು. ಈಗ ಇದೇ ವಿಚಾರದ ಬಗ್ಗೆ ಸ್ವತಃ ಶೃತಿ ಹರಿಹರನ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ನನ್ನ ಗಮನಕ್ಕೆ ಬಂದಿದೆ

''ಮಾಧ್ಯಮಗಳಲ್ಲಿ ನನ್ನ ಮದುವೆಯ ಬಗ್ಗೆ ಬರುತ್ತಿರುವ ಸುದ್ದಿ ನನ್ನ ಗಮನಕ್ಕೆ ಬಂದಿದೆ. ನಾನು ಬೆಳಗ್ಗೆ ಈ ಸುದ್ದಿ ನೋಡಿದೆ. ಇದು ನನಗೂ ಕೂಡ ಹೊಸ ಸುದ್ದಿ...'' ಅಂತ ಹೇಳಿ ಶೃತಿ ಹರಿಹರನ್ ನಕ್ಕರು.

ಎಲ್ಲರಿಗೂ ಹೇಳಿ ಮದುವೆ ಆಗ್ತೀನಿ..

''ಮದುವೆ ಎಲ್ಲರಿಗೂ ಆಗುತ್ತದೆ. ನನ್ನ ಕುಟುಂಬ ಕೂಡ ಮದುವೆಯ ಬಗ್ಗೆ ಹೇಳುತ್ತಿದ್ದಾರೆ. ನಾನು ಮದುವೆ ಆಗುತ್ತೇನೆ. ಮದುವೆ ಆಗುವಾಗ ಎಲ್ಲರಿಗೂ ಹೇಳಿ ಆಗುತ್ತೇನೆ'' - ಶೃತಿ ಹರಿಹರನ್, ನಟಿ

ಡ್ಯಾನ್ಸ್ ಮಾಸ್ಟರ್ ಅಲ್ಲ

''ನಾನು ಡ್ಯಾನ್ಸ್ ಮಾಸ್ಟರ್ ಜೊತೆ ಮದುವೆ ಆಗಿದ್ದೇನೆ ಅಂತ ಸುದ್ದಿ ಬಂದಿದೆ. ಆದರೆ ನಾನು ಮದುವೆ ಆಗುತ್ತಿರುವುದು ಡ್ಯಾನ್ಸ್ ಮಾಸ್ಟರ್ ಅಲ್ಲ. ನನಗೆ ಅವರು ತುಂಬ ವರ್ಷದಿಂದ ಗೊತ್ತು. ನಾನು ಚಿತ್ರರಂಗಕ್ಕೆ ಬರುವುದಕ್ಕೂ ಮುಂಚೆಯಿಂದ ಅವರ ಪರಿಚಯ ನನಗೆ ಇದೆ'' - ಶೃತಿ ಹರಿಹರನ್, ನಟಿ

ಒಮ್ಮೆ ಶ್ರುತಿ ಹರಿಹರನ್ ಕಡೆ ತಿರುಗಿ ನೋಡಿ ಪುನೀತ್

ರೂಮರ್ ಅಷ್ಟೆ

''ಇದೆಲ್ಲ ರೂಮರ್ ಅಷ್ಟೆ'' ಎಂದು ಶೃತಿ ಹರಿಹರನ್ ಕಡ್ಡಿ ತುಂಡು ಮಾಡಿದ ಹಾಗೆ ಹೇಳಿದ್ದಾರೆ. ಸೋ, ಸುಮ್ಮನೆ ಅವರ ಮದುವೆ ಬಗ್ಗೆ ಏನೇನೋ ಸುದ್ದಿ ಹಬ್ಬಿಸಬೇಡಿ.

'ರಾಜರಥ'ದಲ್ಲಿ ಸವಾರಿ ಮಾಡಲಿರುವ ಶ್ರುತಿ ಹರಿಹರನ್

ಸಿಂಧು ಲೋಕನಾಥ್ ವಿವಾಹ

ಕನ್ನಡದ ನಟಿ ಸಿಂಧು ಲೋಕನಾಥ್ ಇತ್ತೀಚಿಗಷ್ಟೆ ಮಡಿಕೇರಿಯಲ್ಲಿ ಮದುವೆ ಆಗಿದ್ದರು. ಈ ವಿಷಯ ನಾಲ್ಕು ದಿನಗಳ ಬಳಿಕ ಮಾಧ್ಯಮಗಳಿಗೆ ಗೊತ್ತಾಯಿತು.

English summary
Kannada Actress 'Sruthi Hariharan' clarified about her marriage gossip.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada