For Quick Alerts
  ALLOW NOTIFICATIONS  
  For Daily Alerts

  ಅಲ್ಲಿ ರಾಜಮೌಳಿ, ರಾಜ್ ಕುಮಾರ್ ಹಿರಾನಿ...ನಮ್ಮಲ್ಲಿ ಯಾರು.?

  By Bharath Kumar
  |

  'ಬಾಹುಬಲಿ' ಅಂತಹ ಬಹುದೊಡ್ಡ ಹಿಟ್ ಸಿನಿಮಾ ನೀಡಿದ ರಾಜಮೌಳಿ ಇಂದು ಜಗತ್ತಿನ 'ಸ್ಟಾರ್' ಡೈರೆಕ್ಟರ್ ಆಗಿದ್ದಾರೆ. ಈಗ 'ಸಂಜು' ಅಂತಹ ಮೆಗಾ ಹಿಟ್ ಚಿತ್ರ ನೀಡಿರುವ ರಾಜ್ ಕುಮಾರ್ ಹಿರಾನಿ ಬಾಲಿವುಡ್ ನ ದಿ ಬೆಸ್ಟ್ ನಿರ್ದೇಶಕರಲ್ಲಿ ಒಬ್ಬರು.

  ಇವರಿಬ್ಬರು ಈಗ ಭಾರತೀಯ ಚಿತ್ರರಂಗದ ಮೇನ್ ಅಟ್ರಾಕ್ಷನ್. ರಾಜಮೌಳಿ ಸಿನಿಮಾ ಆಗಲಿ, ಅಥವಾ ರಾಜ್ ಕುಮಾರ್ ಹಿರಾನಿ ಸಿನಿಮಾವಾಗಲಿ ಹಿಟ್ ಆಗೋದೋ ಖಚಿತ, ದುಡ್ಡ ಮಾಡೋದು ಖಚಿತ. ಇದಕ್ಕೆ ಸಾಕ್ಷಿ ನಾವೇ ಕೊಡ್ತೀವಿ. ಇಂತವರ ಹಾದಿಯಲ್ಲಿ ಹೆಜ್ಜೆ ಹಾಕೋದಕ್ಕೆ ನಮ್ಮಲ್ಲೂ ನಿರ್ದೇಶಕರಿದ್ದಾರೆ. ಒಂದೊಂದು ಚಿತ್ರವನ್ನ ಯೋಚನೆ ಮಾಡಿ ಡೈರೆಕ್ಷನ್ ಮಾಡ್ತಿರುವ ಯಂಗ್ ಮೇಕರ್ಸ್ ಇದ್ದಾರೆ.

  ರಾಜಮೌಳಿ ಮತ್ತು ರಾಜ್ ಕುಮಾರ್ ಹಿರಾನಿಗೂ ಏನ್ ಸಂಬಂಧ.? ಇವರಿಬ್ಬರಿಗು ಕನ್ನಡ ಇಂಡಸ್ಟ್ರಿಗೂ ಏನ್ ಲಿಂಕ್ ಅಂತ ತಿಳಿದುಕೊಳ್ಳಲು ಈ ಸ್ಟೋರಿ ಪೂರ್ತಿ ಓದಿ.....

  ರಾಜಮೌಳಿ ಮಾಡಿರೋದು 12

  ರಾಜಮೌಳಿ ಮಾಡಿರೋದು 12

  ದಕ್ಷಿಣ ಭಾರತದ ಖ್ಯಾತ ನಿರ್ದೇಶಕ ರಾಜಮೌಳಿ ಇದುವರೆಗು ನಿರ್ದೇಶನ ಮಾಡಿರುವುದು ಬರೋಬ್ಬರಿ 12 ಸಿನಿಮಾಗಳು. ಈ 12 ಸಿನಿಮಾಗಳಲ್ಲಿ ಒಂದೇ ಒಂದು ಚಿತ್ರದಲ್ಲೂ ಇವರ ಡೈರೆಕ್ಷನ್ ಚೆನ್ನಾಗಿಲ್ಲ, ಅಥವಾ ಸಿನಿಮಾ ಚೆನ್ನಾಗಿಲ್ಲ ಎಂದು ವಿಮರ್ಶೆ ಬಂದಿಲ್ಲ. ಇದು ರಾಜಮೌಳಿಯ ಬಹುದೊಡ್ಡ ಯಶಸ್ಸು.

  'ಸ್ಟೂಡೆಂಟ್ ನಂ 1' ಟು 'ಬಾಹುಬಲಿ 2'

  'ಸ್ಟೂಡೆಂಟ್ ನಂ 1' ಟು 'ಬಾಹುಬಲಿ 2'

  2001ರಲ್ಲಿ ಜೂನಿಯರ್ ಎನ್.ಟಿ.ಆರ್ ಅಭಿನಯದ 'ಸ್ಟೂಡೆಂಟ್ ನಂ 1' ಚಿತ್ರಕ್ಕೆ ಚೊಚ್ಚಲ ಬಾರಿಗೆ ಡೈರೆಕ್ಷನ್ ಹೇಳಿದ ರಾಜಮೌಳಿ, ನಂತರ 'ಸಿಂಹಾದ್ರಿ', 'ಸೈ', 'ಚತ್ರಪತಿ', 'ವಿಕ್ರಮಾರ್ಕುಡು', 'ಯಮದೊಂಗ', 'ಮಗಧೀರ', 'ಮರ್ಯಾದ ರಾಮನ್ನ', 'ರಾಜನ್ನ', 'ಈಗ', 'ಬಾಹುಬಲಿ ದಿ ಬಿಗಿನಿಂಗ್', 'ಬಾಹುಬಲಿ ದಿ ಕನ್ ಕ್ಲೂಷನ್' ಅಂತಹ ಬ್ಲ್ಯಾಕ್ ಬಸ್ಟರ್ ಸಿನಿಮಾಗಳನ್ನೇ ನೀಡಿದ್ದಾರೆ.

  ರಾಜ್ ಕುಮಾರ್ ಮಾಡಿದ್ದು 5

  ರಾಜ್ ಕುಮಾರ್ ಮಾಡಿದ್ದು 5

  ಅದೇ ರೀತಿ ಬಾಲಿವುಡ್ ನ ಖ್ಯಾತ ನಿರ್ದೇಶಕ ರಾಜ್ ಕುಮಾರ್ ಹಿರಾನಿ ಇದುವರೆಗೂ ನಿರ್ದೇಶನ ಮಾಡಿರುವುದು ಕೇವಲ 5 ಸಿನಿಮಾ. ಈ ಎಲ್ಲ ಚಿತ್ರಗಳು ಸೂಪರ್ ಹಿಟ್ ಅಷ್ಟೇ ಅಲ್ಲ, ಬಾಲಿವುಡ್ ಬಾಕ್ಸ್ ಆಫೀಸ್ ನಲ್ಲಿ ಧೂಳಿಪಟ ಮಾಡಿರುವ ದಾಖಲೆಗಳನ್ನ ಹೊಂದಿದೆ.

  'ಮುನ್ನಬಾಯ್' ಟು 'ಸಂಜು'

  'ಮುನ್ನಬಾಯ್' ಟು 'ಸಂಜು'

  ಸಂಜಯ್ ದತ್ ಅಭಿನಯದ 'ಮುನ್ನಬಾಯ್ ಎಂಬಿಬಿಎಸ್' ಚಿತ್ರಕ್ಕೆ ಮೊದಲ ಬಾರಿಗೆ ನಿರ್ದೇಶಕರಾದ ರಾಜ್ ಕುಮಾರ್ ಹಿರಾನಿ, ನಂತರ 'ಲಗೋ ರಹೋ ಮುನ್ನಬಾಯ್', '3 ಈಡಿಯೆಟ್ಸ್', 'ಪಿಕೆ', ಈಗ 'ಸಂಜು' ಸಿನಿಮಾ ಮಾಡಿದ್ದಾರೆ. ಒಂದಕ್ಕಿಂತ ಮತ್ತೊಂದು ಚಿತ್ರ ಹಿಟ್ ಮತ್ತು ಬಾಕ್ಸ್ ಆಫೀಸ್ ಶೇಕ್ ಮಾಡಿದೆ.

  ಆಲ್ ಟೈಂ ಹಿಟ್ ಕೊಟ್ಟ ಉಪೇಂದ್ರ

  ಆಲ್ ಟೈಂ ಹಿಟ್ ಕೊಟ್ಟ ಉಪೇಂದ್ರ

  ಇನ್ನು ಸ್ಯಾಂಡಲ್ ವುಡ್ ನಲ್ಲಿ ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶನದ ಸಿನಿಮಾಗಳು ಆಲ್ ಮೋಸ್ಟ್ ಹಿಟ್ ಆಗಿದೆ. 'ತರ್ಲೆ ನನ್ ಮಕ್ಳು', 'ಶ್', 'ಓಂ', 'ಆಪರೇಷನ್ ಅಂತ', 'ಓಂಕಾರಂ', 'ಸ್ವಸ್ತಿಕ್', 'ಎ', 'ಉಪೇಂದ್ರ', 'ಸೂಪರ್' ಹಾಗೂ 'ಉಪ್ಪಿ 2' ಸಿನಿಮಾಗಳಿಗೆ ಉಪ್ಪಿ ಡೈರೆಕ್ಷನ್ ಮಾಡಿದ್ದಾರೆ. ಉಪ್ಪಿ ಡೈರೆಕ್ಷನ್ ಅಂದ್ರೆ ಕುತೂಹಲ ಕೂಡ ಹಾಗೆ ಇರುತ್ತೆ.

  ಚೇತನ್-ಸಂತೋಷ್

  ಚೇತನ್-ಸಂತೋಷ್

  ಇನ್ನು ಯುವ ನಿರ್ದೇಶಕರ ಪೈಕಿ ಚೇತನ್ ಕುಮಾರ್ ಹಾಗೂ ಸಂತೋಷ್ ಅನಂದ್ ರಾಮ್ ಅವರ ಬಗ್ಗೆ ಹೆಚ್ಚಿನ ನಂಬಿಕೆ ಇದೆ. 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಮತ್ತು 'ರಾಜಕುಮಾರ' ಅಂತಹ ಸೂಪರ್ ಹಿಟ್ ಸಿನಿಮಾ ನೀಡಿರುವ ಸಂತೋಷ್ ಈಗ ಪುನೀತ್ ಜೊತೆ ಮೂರನೇ ಚಿತ್ರ ಮಾಡ್ತಿದ್ದಾರೆ. 'ಬಹುದ್ದೂರ್' ಮತ್ತು 'ಭರ್ಜರಿ' ಸಿನಿಮಾ ಮಾಡಿದ್ದ ಚೇತನ್ 'ಭರಾಟೆ' ಸಿನಿಮಾ ಮಾಡ್ತಿದ್ದಾರೆ. ಇವರಿಬ್ಬರ ಮೇಲೂ ನಂಬಿಕೆ ಹೆಚ್ಚಿದೆ. ರಾಜಮೌಳಿ, ರಾಜ್ ಕುಮಾರ್ ರೀತಿಯಲ್ಲಿ ಇವರನ್ನ ನೋಡುವ ಬಯಕೆ ಕನ್ನಡ ಕಲಾಭಿಮಾನಿಗಳಿಗೆ ಇದೆ. 'ಉಗ್ರಂ' ಚಿತ್ರ ನಿರ್ದೇಶಿಸಿ ಕೆ.ಜಿ.ಎಫ್ ಚಿತ್ರ ಮಾಡುತ್ತಿರುವ ಪ್ರಶಾಂತ್ ನೀಲ್ ಬಗ್ಗೆಯೂ ನಿರೀಕ್ಷೆ ಹೆಚ್ಚಿದೆ.

  'ರಾ' ಕಿಂಗ್ ಸೂರಿ

  'ರಾ' ಕಿಂಗ್ ಸೂರಿ

  ದುನಿಯಾ, ಜಾಕಿ, ಜಂಗ್ಲಿ, ಕಡ್ಡಿಪುಡಿ, ಕೆಂಡಸಂಪಿಗೆ, ದೊಡ್ಮನೆ ಹುಡ್ಗ, ಟಗರು, ಇಂತಿ ನಿನ್ನ ಪ್ರೀತಿಯ ಸಿನಿಮಾಗಳನ್ನ ಮಾಡಿರುವ ದುನಿಯಾ ಸೂರಿ ಮೇಲೆಯೂ ಭರವಸೆ ಹೆಚ್ಚಿದೆ.

  English summary
  Telugu director ss rajamouli and bollywood director rajkumar hirani has most successful directors in indian cinema. who is in kannada.?

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X