twitter
    For Quick Alerts
    ALLOW NOTIFICATIONS  
    For Daily Alerts

    ಹೆಸರಲ್ಲೇ 'ಸ್ಟೋರಿ' ಹೊಂದಿರುವ ಚಿತ್ರದ ಕಥೆಯೇನು?

    |
    <ul id="pagination-digg"><li class="previous"><a href="/news/kannada-movie-story-kathe-release-jagadish-kr-direction-069575.html">« Previous</a>

    Thilak Pratap
    ನಿರ್ವಾಣ ಫಿಲಂಸ್ ಬ್ಯಾನರ್ ಅಡಿಯಲ್ಲಿ ಜಗದೀಶ್ ಕೆಆರ್ ನಿರ್ಮಿಸಿ ನಿರ್ದೇಶಿಸಿರುವ ಈ 'story ಕಥೆ' ಚಿತ್ರದಲ್ಲಿ ಪ್ರತಾಪ್ ನಾರಾಯಣ್, ತಿಲಕ್ ಶೇಖರ್, ನೇಹಾ ಪಾಟೀಲ್ ಹಾಗೂ ಪಾರ್ವತಿ ನಾಯರ್ ಮುಖ್ಯ ತಾರಾಗಣದಲ್ಲಿದ್ದಾರೆ. ಚಿರಪರಿಚಿತ ಸಂಗೀತ ನಿರ್ದೇಶಕ ರಘು ದೀಕ್ಷಿತ್ ಸಹೋದರ ವಾಸು ದೀಕ್ಷಿತ್ ಹಾಗೂ ಸತೀಶ್ ಬಾಬು ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಸತೀಶ್ ಕುಮಾರ್ ಛಾಯಾಗ್ರಹಣ ಹಾಗೂ ಹರೀಶ್ ಕೊಟ್ಪಾಡಿ ಸಂಕಲನ ಚಿತ್ರಕ್ಕಿದೆ.

    ಈಗಾಗಲೇ ಆಡಿಯೋ ಬಿಡುಗಡೆಯಾಗಿದ್ದು ಚಿತ್ರದ ಎಲ್ಲಾ ಹಾಡುಗಳಿಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ ಎಂದಿದೆ ಚಿತ್ರತಂಡ. ತಮ್ಮ ನಿರ್ಮಾಣ ಹಾಗೂ ನಿರ್ದೇಶನದ ಚಿತ್ರದ ಬಗ್ಗೆ ಮಾತನಾಡಿರುವ ಜಗದೀಶ್ ಕೆಆರ್, 'story ಕಥೆ' ಸ್ಟೋರಿ ಕಥೆ ವಿಭಿನ್ನ ಹಾಗೂ ವಿಶಿಷ್ಠ ಸಿನಿಮಾ. ಹೆಸರಿನಲ್ಲಿ ಮಾತ್ರವಲ್ಲದೇ ಕಥೆ, ಚಿತ್ರಕಥೆ, ಸಂಭಾಷಣೆ, ನಿರೂಪಣೆ ಎಲ್ಲವೂ ಇದರಲ್ಲಿ ತೀರಾ ವಿಭಿನ್ನ.

    ಒಟ್ಟಾರೆಯಾಗಿ ಈ ಚಿತ್ರದ ಮೇಕಿಂಗ್ ಕನ್ನಡದಲ್ಲಿ ಹೊಸ ರೀತಿಯದು. ಕಥೆಯಿದೆ, ಕಥೆ ಚೆನ್ನಾಗಿದೆ. ಚಿತ್ರಕಥೆಯಿದೆ, ಅದೂ ಸೂಪರ್. ನಿರೂಪಣೆಯೂ ನವಿರಾಗಿದ್ದು ಎಲ್ಲಾ ವರ್ಗದ ಪ್ರೇಕ್ಷಕರಿಗೆ ಇಷ್ಟವಾಗುವಂತಿದೆ" ಎಂದಿದ್ದಾರೆ ಮೊದಲ ಬಾರಿಗೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯೊಂದಿಗೆ ನಿರ್ದೇಶನವನ್ನೂ ಮಾಡಿರುವ ನವನಿರ್ದೇಶಕ ಜಗದೀಶ್ ಕೆಆರ್.

    ಒಟ್ಟಿನಲ್ಲಿ, ಹೆಸರಿನಲ್ಲೇ 'story ಕಥೆ' ಹೊಂದಿರುವ ಈ ಚಿತ್ರವು ಬರುವ ತಿಂಗಳ ಮೊದಲ ವಾರದಲ್ಲಿ ತೆರೆಗೆ ಬರಲಿದೆ. ಸಿಂಗಲ್ ಸ್ಕ್ರೀನ್ ಹಾಗೂ ಮಲ್ಟಿಫ್ಲೆಕ್ಸ್ ಎರಡರಲ್ಲೂ ಬಿಡುಗಡೆಯಾಗಲಿರುವ ಈ ಚಿತ್ರ, ಹೆಸರಿಗೆ ತಕ್ಕಂತೆ 'story, ಕಥೆ' ಹೊಂದಿರಬಹುದು ಎಂಬುದು ಗಾಂಧಿನಗರದ ಲೆಕ್ಕಾಚಾರ. ಈ ಆಕರ್ಷಕ ಚಿತ್ರದ ಬಿಡುಗಡೆಯನ್ನು ಕನ್ನಡ ಸಿನಿಪ್ರೇಕ್ಷಕರು ಕಾಯುತ್ತಿದ್ದಾರೆ.

    ಮುಂದಿನ ತಿಂಗಳು ತೆರೆಗೆ ಬರಲಿರುವ ಈ ಚಿತ್ರವು ಜನರ ನಿರೀಕ್ಷೆ ಮೀರಿ ಯಶಸ್ವಿಯಾಗಲಿದೆ ಎಂಬುದು ಪ್ರತಿಭೆಯನ್ನು ನಂಬಿರುವ ಆತ್ಮವಿಶ್ವಾಸ ತುಂಬಿರುವ ನಿರ್ದೇಶಕ ಜಗದೀಶ್ ಕೆಆರ್ ಹಾಗೂ ಚಿತ್ರತಂಡದ ಮಾತು. ನಿರೀಕ್ಷೆ ನಿಜವಾಗಬಹುದೇ? ಆಗಲಿ ಎಂಬುದು ಆರು ಕೋಟಿಗೂ ಮೀರಿದ ಕನ್ನಡಿಗರ ಆಸೆ... (ಒನ್ ಇಂಡಿಯಾ ಕನ್ನಡ)

    <ul id="pagination-digg"><li class="previous"><a href="/news/kannada-movie-story-kathe-release-jagadish-kr-direction-069575.html">« Previous</a>

    English summary
    Upcoming Director Jagadish KR Directed Kannada Movie Story Kathe to release in next month on November 2012. Thilak shekar and Pratap Narayan are in the Lead Role and Neha Patil and Parvathi Nayar are the Heroines for this movie. Vasu Dixith and Satish Babu are the Music Directors. &#13; &#13;
    Thursday, November 15, 2012, 16:38
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X