»   » 'ಪ್ಯಾರ್ಗೆ' ಪಾರುಲ್ ಮೇಲೆ ಬೀದಿ ನಾಯಿಗಳ ಅಟ್ಟಹಾಸ.!

'ಪ್ಯಾರ್ಗೆ' ಪಾರುಲ್ ಮೇಲೆ ಬೀದಿ ನಾಯಿಗಳ ಅಟ್ಟಹಾಸ.!

Posted By:
Subscribe to Filmibeat Kannada

'ಪ್ಯಾರ್ಗೆ ಆಗ್ಬುಟೈತೆ' ಖ್ಯಾತಿಯ ಕನ್ನಡ ನಟಿ ಪಾರುಲ್ ಯಾದವ್ ಮೇಲೆ ಐದು ಬೀದಿ ನಾಯಿಗಳು ಅಟ್ಟಹಾಸ ಮೆರೆದಿವೆ.

ಘಟನೆ ಹಿನ್ನಲೆ: ಮುಂಬೈನ ಜೋಗೀಶ್ವರ್ ಬೀದಿಯಲ್ಲಿ ಇರುವ ತಮ್ಮ ಅಪಾರ್ಟ್ಮೆಂಟ್ ಸುತ್ತ ಮುತ್ತ ನಟಿ ಪಾರುಲ್ ಯಾದವ್ ನಿನ್ನೆ (ಜ.23, ಸೋಮವಾರ) ಸಂಜೆ ವಾಕಿಂಗ್ ಮಾಡುತ್ತಿದ್ದರು. ಆಗ ಪಾರುಲ್ ಜೊತೆ ಅವರ ಸಾಕು ನಾಯಿ ಕೂಡ ಇತ್ತು.

Stray Dogs attacks Kannada Actress Parul Yadav in Mumbai

ಇದ್ದಕ್ಕಿದ್ದಂತೆ ಪಾರುಲ್ ಯಾದವ್ ಮೇಲೆ ಐದು ಬೀದಿ ನಾಯಿಗಳು ಎರಗಿವೆ. ಏಕಕಾಲಕ್ಕೆ ಐದು ನಾಯಿಗಳು ದಾಳಿ ಮಾಡಿದ್ರಿಂದ ತಲೆ, ಕೈ ಮತ್ತು ಬಲಗಾಲಿಗೆ ಗಂಭೀರ ಪೆಟ್ಟಾಗಿದೆ.[ನಟಿ ಪಾರುಲ್ ಯಾದವ್ ಗೆ ಪ್ಯಾರ್ ಗೆ ಆಗ್ಬುಟೈತಾ? ಯಾರ ಜೊತೆ?]

''ತಲೆಯಲ್ಲಿ 3 ಸೆ.ಮಿ ನಷ್ಟು ಗಾಯವಾಗಿದೆ. ಕೋಕಿಲಾ ಬೆನ್ ಆಸ್ಪತ್ರೆ ಚಿಕಿತ್ಸೆ ನೀಡಲಾಗುತ್ತಿದೆ. ನಿನ್ನೆ ತುಂಬಾ ಬ್ಲೀಡಿಂಗ್ ಆಗ್ತಿತ್ತು. ಇವತ್ತು ಗಾಬರಿ ಪಡುವಂಥದ್ದು ಏನೂ ಇಲ್ಲ'' ಅಂತ ಸಹೋದರಿ ಶೀತಲ್ ಖಾಸಗಿ ವಾಹಿನಿಗೆ ತಿಳಿಸಿದ್ದಾರೆ.

ಮನುಷ್ಯತ್ವ ಇಲ್ಲದ ಜನ: ''ನಾಯಿ ಕಡಿತಕ್ಕೆ ಒಳಗಾಗಿ ಕಿರುಚಾಡುತ್ತಿದ್ದರೂ, ಸುತ್ತಮುತ್ತ ನಿಂತಿದ್ದ ಮುಂಬೈ ಜನತೆ ಪಾರುಲ್ ರಕ್ಷಣೆಗೆ ಬರಲಿಲ್ಲ'' ಅಂತ ಇದೇ ವೇಳೆ ಪಾರುಲ್ ಸಹೋದರಿ ಬೇಸರ ವ್ಯಕ್ತಪಡಿಸಿದ್ದಾರೆ.

English summary
Five Stray Dogs attacked Kannada Actress Parul Yadav Yesterday (Jan 23) in Mumbai. She is getting treatment in Kokila Ben Hospital.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada