For Quick Alerts
  ALLOW NOTIFICATIONS  
  For Daily Alerts

  ಪ್ರವೀಣ್-ಭಜರಂಗಿ ಲೋಕಿಯ 'ಸ್ಟ್ರೈಕರ್' ಫೆಬ್ರವರಿ 22ಕ್ಕೆ ರಿಲೀಸ್

  |

  'ಚೂರಿಕಟ್ಟೆ' ಖ್ಯಾತಿಯ ನಟ ಪ್ರವೀಣ್ ತೇಜ ಅಭಿನಯದ ಹೊಸ ಸಿನಿಮಾ 'ಸ್ಟ್ರೈಕರ್' ಫೆಬ್ರವರಿ 22 ರಂದು ತೆರೆಕಾಣುತ್ತಿದೆ. ಸದ್ಯ ಟ್ರೈಲರ್ ಮೂಲಕ ಸದ್ದು ಮಾಡ್ತಿರುವ ಈ ಸಿನಿಮಾ ತುಂಬಾ ವಿಭಿನ್ನವಾಗಿ ಮೂಡಿಬಂದಿದೆ.

  ಇದೊಂದು ಸೈಕಲಾಜಿಕಲ್ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರವಾಗಿದ್ದು, ಡಿಫ್ರೆಂಟ್ ಶೇಡ್ ಗಳಲ್ಲಿ ಪ್ರವೀಣ್ ನಟಿಸಿದ್ದಾರೆ. ಯಾವುದೇ ಘಟನೆ ನೋಡಿದರೂ ಇದು ಮೊದಲೇ ಎಲ್ಲೋ ನಡೆದಿತ್ತು ಎಂಬಂತೆ ನಾಯಕನಿಗೆ ಭಾಸವಾಗುತ್ತದೆ. ಯಾವುದು ನಿಜ, ಯಾವುದು ಭ್ರಮೆ ಎಂಬುದು ತಿಳಿಯದಂತಹ ಸ್ಥಿತಿ ಆತನದ್ದು. ಇಂತಹ ಪಾತ್ರದಲ್ಲಿ ಪ್ರವೀಣ್ ಬಣ್ಣ ಹಚ್ಚಿದ್ದು, ಇಡೀ ಸಿನಿಮಾ ಈ ಪಾತ್ರದ ಸುತ್ತ ನಡೆಯುತ್ತೆ.

  'ಸ್ಟ್ರೈಕರ್' ಆಟಕ್ಕೆ ಸ್ಟ್ರೈಟ್ ಆಗಿ ಬಂದ ಪ್ರವೀಣ್

  ಇದೇ ಮೊದಲ ಬಾರಿಗೆ ಭಜರಂಗಿ ಲೋಕಿ ಪಾಸಿಟಿವ್ ಪಾತ್ರದಲ್ಲಿ ನಟಿಸಿರುವುದು ವಿಶೇಷ. ಪೊಲೀಸ್ ಆಫೀಸರ್ ಆಗಿ ಸೌರವ್ ಲೋಕಿ ಕಾಣಿಸಿಕೊಂಡಿದ್ದು, ಚಿತ್ರದ ಧಮ್ ಹೆಚ್ಚಿಸಿದ್ದಾರೆ.

  'ಮುಂಗಾರು ಮಳೆ 2' 'ನೀವು ಕರೆ ಮಾಡಿದ ಚಂದಾದಾರರು' ಚಿತ್ರದಲ್ಲಿ ನಟಿಸಿದ್ದ ಶಿಲ್ಪಾ ಮಂಜುನಾಥ್ ನಾಯಕಿಯಾಗಿ ನಟಿಸಿದ್ದಾರೆ.

  ಇನ್ನುಳಿದಂತೆ ಗರುಡಾದ್ರಿ ಆರ್ಟ್ಸ್ ಬ್ಯಾನರ್ ಅಡಿಯಲ್ಲಿ ರಮೇಶ್ ಬಾಬು, ಶಂಕರಪ್ಪ, ಸುರೇಶ್ ಬಾಬು ಜತೆಯಾಗಿ ನಿರ್ಮಾಣ ಮಾಡಿದ್ದಾರೆ ಸಿನಿಮಾ ತಯಾರಾಗಿದೆ. ಪವನ್ ತ್ರಿವಿಕ್ರಮ್ ಈ ಚಿತ್ರವನ್ನ ನಿರ್ದೇಶನ ಮಾಡಿದ್ದಾರೆ. ಹೀಗೆ, ಒಂದೊಳ್ಳೆ ಕಥೆ-ಚಿತ್ರಕಥೆಯ ಮೂಲಕ ಎಲ್ಲರ ಗಮನ ಸೆಳೆದಿರುವ ಈ ಸಿನಿಮಾ ಇದೇ ತಿಂಗಳು ಚಿತ್ರಮಂದಿರಕ್ಕೆ ಬರ್ತಿದೆ.

  Read more about: praveen ಪ್ರವೀಣ್
  English summary
  Kannada actor Praveen Tej, Saurav Lokesh, Shilpa Manjunath Starrer STRIKER movie will release on february 22nd.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X