»   » ಸ್ಟೈಲಿಶ್ ಸ್ಟಾರ್ ಪ್ರೇಮ್ 'ದಳಪತಿ' ಫಸ್ಟ್ ಲುಕ್ ಔಟ್

ಸ್ಟೈಲಿಶ್ ಸ್ಟಾರ್ ಪ್ರೇಮ್ 'ದಳಪತಿ' ಫಸ್ಟ್ ಲುಕ್ ಔಟ್

Posted By:
Subscribe to Filmibeat Kannada

ಯಾವುದೇ ಒಂದು ಚಿತ್ರಕ್ಕೆ 'ಫಸ್ಟ್ ಲುಕ್' ಬಹಳ ಮುಖ್ಯ. ಚಿತ್ರದ ಫಸ್ಟ್ ಲುಕ್ಕೇ ಚಿತ್ರದ ಅರ್ಧ ಕಥೆ ಹೇಳಿಬಿಡುತ್ತದೆ. ಪ್ರೇಕ್ಷಕರು, ಅಭಿಮಾನಿಗಳ ಪಾಲಿಗೆ ಫಸ್ಟ್ ಲುಕ್ ಈಸ್ ಬೆಸ್ಟ್ ಲುಕ್. ಇದೀಗ ಲವ್ಲಿ ಸ್ಟಾರ್ ಪ್ರೇಮ್ ಹಾಗೂ ಕೃತಿ ಕರಬಂಧ ಅಭಿನಯದ 'ದಳಪತಿ' ಚಿತ್ರದ ಫಸ್ಟ್ ಲುಕ್ ಹೊರಬಿದ್ದಿದೆ.

ಲವ್ಲಿ ಸ್ಟಾರ್ ಪ್ರೇಮ್ ಅವರ ಸ್ಟೈಲಿಶ್ ಲುಕ್, ನಾಯಕಿ ಕೃತಿ ಕರಬಂಧ ಅವರ ಲವ್ಲಿ ಲುಕ್ ಪೋಸ್ಟರ್ ನ ಪ್ರಮುಖ ಆಕರ್ಷಣೆ. ಪ್ರಶಾಂತ್ ರಾಜ್ ಅವರು ಆಕ್ಷನ್ ಕಟ್ ಹೇಳುತ್ತಿರುವ ಈ ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದೆ. ಒಟ್ಟು ಐವತ್ತು ದಿನಗಳಲ್ಲಿ ಚಿತ್ರೀಕರಣ ಮುಗಿಸಲು ಚಿತ್ರತಂಡ ಯೋಜಿಸಿದೆ.

Stylish Star Prem Dalapathi first look out

ಈ ಚಿತ್ರದ ಎರಡು ಬಗೆಯ ಆಯಾಮಗಳಿಂದ ಕೂಡಿದೆ ಎನ್ನುತ್ತಾರೆ ಪ್ರಶಾಂತ್. ಚಿತ್ರದ ಮೊದಲರ್ಧ ಕ್ಲಾಸ್ ಗೆ ಇಷ್ಟವಾದರೆ, ದ್ವಿತೀಯಾರ್ಧ ಮಾಸ್ ಮೆಚ್ಚುವಂತಿದೆ ಎನ್ನುತ್ತಾರೆ ಅವರು. ಚಿತ್ರದಲ್ಲಿನ ನಾಲ್ಕು ಆಕ್ಷನ್ ದೃಶ್ಯಗಳು ಗಮನಾರ್ಹ ಎನ್ನುತ್ತಾರೆ ನಾಯಕ ನಟ ಪ್ರೇಮ್. ಅದಕ್ಕೆ ತಕ್ಕಂತೆಯೇ ಫಸ್ಟ್ ಲುಕ್ ಸಹ ಇರುವುದು ವಿಶೇಷ.

ಇನ್ನು ಚಿತ್ರದಲ್ಲಿ ಕೃತಿ ಅವರದು ಪಕ್ಕದ್ಮನೆ ಹುಡುಗಿಯ ಥರಹದ ಪಾತ್ರವಂತೆ. ಈ ಹಿಂದಿನ ಚಿತ್ರಗಳಿಗೆ ಹೋಲಿಸಿದರೆ ಇದು ಸಂಪೂರ್ಣ ಭಿನ್ನವಾದ ಪಾತ್ರ ಹಾಗೂ ಅಷ್ಟೇ ಭಿನ್ನವಾದ ಗೆಟಪ್ ಎನ್ನುತ್ತಾರೆ ಕೃತಿ. ಇನ್ನು ಈ ಚಿತ್ರಕ್ಕೆ ಚರಣ್ ಅವರ ಸಂಗೀತ ಸಂಯೋಜನೆ ಇದೆ. ಈ ಮೂಲಕ ಹೊಸ ಸಂಗೀತ ನಿರ್ದೇಶಕರಾಗಿ ಅವರು ಹೊರಹೊಮ್ಮಲಿದ್ದಾರೆ.

ಈ ಚಿತ್ರಕ್ಕೆ ಗಿರೀಶ್ ಅವರ ಛಾಯಾಗ್ರಹಣ, ಜೋನಿ ಹರ್ಷ ಅವರ ಸಂಕಲನ, ರವಿವರ್ಮ ಹಾಗೂ ಮಾಸ್ ಮಾದ ಅವರ ಸಾಹಸ ಸಂಯೋಜನೆ ಇದೆ. ದಸರಾ ಹಬ್ಬಕ್ಕೆ 'ದಳಪತಿ' ಪ್ರೇಕ್ಷಕರ ಮುಂದಿರುತ್ತಾನೆ ಎನ್ನುತ್ತಾರೆ ಪ್ರಶಾಂತ್ ರಾಜ್. (ಏಜೆನ್ಸೀಸ್)

English summary
Stylish Star Prem and actress Kriti Kharabanda lead Dalapathi first look out. The movie being directed by Prashanth Raj of 'Love Guru' fame. Prashanth's brother Naveen is producing this film along with his friend.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada