»   » 'ಮಳೆ'ಯಲ್ಲಿ ಪ್ರೇಮ್ ಕೊಡೆ ಹಿಡಿಯೋದು ಯಾರಿಗೆ?

'ಮಳೆ'ಯಲ್ಲಿ ಪ್ರೇಮ್ ಕೊಡೆ ಹಿಡಿಯೋದು ಯಾರಿಗೆ?

By: ಜೀವನರಸಿಕ
Subscribe to Filmibeat Kannada

ಚಾರ್ಮಿನಾರ್ ಚಿತ್ರದಿಂದ ಮತ್ತೆ ಸಕ್ಸಸ್ ನ ಟ್ರ್ಯಾಕ್ ಗೆ ಬಂದ ಲವ್ಲೀ ಸ್ಟಾರ್ ಪ್ರೇಮ್ ಈಗ 'ಮಳೆ' ಚಿತ್ರದ ಮೂಲಕ ಸ್ಟೈಲಿಷ್ ಸ್ಟಾರ್ ಆದರು. ಮೊದಲು ಶುರುವಾಗಬೇಕಿದ್ದ 'ಮಳೆ' ಚಿತ್ರ ಸದ್ಯ ನಿಂತುಹೋಗಿದೆ. ನವೆಂಬರ್ 15ರಿಂದ ಮಳೆ ಶೂಟಿಂಗ್ ಶುರುವಾಗಬೇಕಿತ್ತು.

ಆದರೆ 'ಬ್ರಹ್ಮ' ಚಿತ್ರ ಲೇಟಾಗ್ತಿರೋದ್ರಿಂದ ಸ್ವಲ್ಪ ನಿಧಾನವಾಗಿ ಶುರುವಾಗಲಿದೆ. ಮಳೆಯಲ್ಲಿ ಪ್ರೇಮ್ ಕೊಡೆ ಹಿಡಿಯೋದು ಯಾರಿಗೆ ಅನ್ನೋ ಕುತೂಹಲ ಎಲ್ಲರಲ್ಲೂ ಶುರುವಾಗಿದೆ. ದೊಡ್ಡ ಹೀರೋಯಿನ್ ಒಬ್ಬರನ್ನ ಪ್ರೇಮ್ ಗೆ ಜೋಡಿಯಾಗಿಸಬೇಕು ಅಂತ ಕಾದಿರೋ ನಿರ್ದೇಶಕ ತೇಜಸ್ ಅವರು ರಾಧಿಕಾ ಪಂಡಿತ್ ಆದ್ರೆ ಓಕೆ ಅಂತಿದ್ದಾರೆ. [ಲವ್ಲಿ ಸ್ಟಾರ್ ಪ್ರೇಮ್ ಮುಡಿಗೆ ಹೊಸ ಬಿರುದು]


ರಾಧಿಕಾ ಸಿಗದಿದ್ರೆ ಸ್ಟಾರ್ ಸಿನಿಮಾಗಳಲ್ಲಿ ಬಿಜಿಯಾಗಿ ಇರೋ ಬ್ಯೂಟಿ ಕೃತಿ ಖರಬಂದ ಅವರನ್ನ ಹೀರೋಯಿನ್ನಾಗಿ ಮಾಡ್ಬೇಕು ಅನ್ನೋ ಯೋಚನೆಯೂ ಇದೆ.
ಇವರಿಬ್ಬರೂ ಸದ್ಯ ದೊಡ್ಡ ದೊಡ್ಡ ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ. ಆದರೆ ಈ ಹಿಂದೆ ಪ್ರೇಮ್ ಗೆ ಅಮೂಲ್ಯಾ ಜೋಡಿ ಅಂತ ಸುದ್ದಿಯಾಗಿತ್ತು.

ಕಡೆಗೆ ಯಾರೂ ಸಿಗದಿದ್ರೆ ಪರಭಾಷೆಯ ಹೀರೋಯಿನ್ ಗೆ ಗಾಳ ಹಾಕಬೇಕಾಗುತ್ತೆ ಅನ್ನೋ ಯೋಚನೆ ನಿರ್ದೇಶಕರದ್ದು. 'ಮಳೆ' ನಿಂತು ಹೋಗಿರೋದ್ರಿಂದ ಪ್ರೇಮ್ ಈಗ 'ಫೇರ್ ಅಂಡ್ ಲವ್ಲಿ' ಚಿತ್ರದಲ್ಲಿ ಬಿಜಿ. ಈ 'ಫೇರ್ ಅಂಡ್ ಲವ್ಲಿ'ಯಲ್ಲಿ ಪ್ರೇಮ್ ಗೆ ಜೋಡಿಯಾಗಿರೋದು 'ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ' ಹುಡುಗಿ ಶ್ವೇತಾ ಶ್ರೀವಾತ್ಸವ್.

English summary
Stylish Star Prem's 'Male' shooting stalled because of producer R Chandru busy with his directional 'Brahma' movie with Upendra. The heroine also not finalized yet for Male.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada