Don't Miss!
- News
ಪ್ರಶ್ನೆ ಪತ್ರಿಕೆ ಸೋರಿಕೆ ಹಿನ್ನೆಲೆ ಗುಜರಾತ್ನಲ್ಲಿ ಜೂನಿಯರ್ ಕ್ಲರ್ಕ್ ನೇಮಕಾತಿ ಪರೀಕ್ಷೆ ರದ್ದು, ಓರ್ವನ ಬಂಧನ
- Sports
ಫಿಟ್ನೆಸ್ ಪರೀಕ್ಷೆಯಲ್ಲಿ ಸಂಜು ಸ್ಯಾಮ್ಸನ್ ತೇರ್ಗಡೆ: ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿಗೆ ಬುಮ್ರಾ ವಾಪಸ್?
- Automobiles
'ಮಹೀಂದ್ರಾ ಸ್ಕಾರ್ಪಿಯೊ ಎನ್' ಈ ರೂಪಾಂತರಗಳಿಗೆ ಬರೋಬ್ಬರಿ 2 ವರ್ಷ ಕಾಯಬೇಕು..
- Lifestyle
Horoscope Today 29 Jan 2023: ಭಾನುವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Finance
ಅಭ್ಯರ್ಥಿಯ ಸಂದರ್ಶನ ಮಾಡುತ್ತಿದ್ದಾಗಲೇ ಗೂಗಲ್ ಎಚ್ಆರ್ ವಜಾ!
- Technology
ಒಪ್ಪೋ ಕಂಪೆನಿಯ ಈ ಸ್ಮಾರ್ಟ್ಫೋನ್ ಮೇಲೆ ಭಾರಿ ನಿರೀಕ್ಷೆ? ಲಾಂಚ್ ಯಾವಾಗ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಸುಂಟರಗಾಳಿ-ಬಿರುಗಾಳಿ ಎಲ್ಲಾ ಬರುತ್ತೆ: ಅವರ ನಿರ್ಧಾರಕ್ಕೆ ಬದ್ಧ ಎಂದ ಸುಚೇಂದ್ರ ಪ್ರಸಾದ್
ಪವಿತ್ರಾ ಲೋಕೇಶ್ ಹಾಗೂ ನರೇಶ್ ಪ್ರಕರಣ ದಿನದಿಂದ ದಿನಕ್ಕೆ ಹಲವು ತಿರುವುಗಳನ್ನು ಪಡೆಯುತ್ತಿದೆ. ಇತ್ತೀಚೆಗೆ ಇಬ್ಬರೂ ಲಿವ್ ಇನ್ ರಿಲೇಷನ್‌ಶಿಫ್‌ನಲ್ಲಿದ್ದಾರೆ ಎಂದು ನರೇಶ್ ಮೂರನೇ ಪತ್ನಿ ರಮ್ಯಾ ರಘುಪತಿ ಆರೋಪ ಮಾಡಿದ್ದರು. ಈ ಆರೋಪಗಳಿಗೆ ನರೇಶ್ ಮುಂದೆ ಬಂದು ಪ್ರತಿಕ್ರಿಯೆ ನೀಡಿದ್ದರೂ, ಪವಿತ್ರಾ ಲೋಕೇಶ್ ಮಾತ್ರ ಸೀನ್‌ಗೆ ಎಂಟ್ರಿಯಾಗಿರಲಿಲ್ಲ.
ಕಳೆದ ನಾಲ್ಕೈದು ದಿನಗಳಿಂದ ನಡೆದ ಬೆಳವಣಿಗಳ ಬಳಿಕ ಪವಿತ್ರಾ ಲೋಕೇಶ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಸುಚೇಂದ್ರ ಪ್ರಸಾದ್ ಹಾಗೂ ತನ್ನ ನಡುವೆ ಮದುವೆಯಾಗಿಲ್ಲ ಎಂದು ಹೇಳಿಕೆ ನೀಡಿದ್ದರು. ಈ ಬೆನ್ನಲ್ಲೇ ಸುಚೇಂದ್ರ ಪ್ರಸಾದ್ ಕೂಡ ಪ್ರತಿಕ್ರಿಯೆ ನೀಡಿದ್ದಾರೆ.
ಆಕೆಗೆ
ಆಸೆ
ಜಾಸ್ತಿ,
ಆ
ಮಹಾನುಭಾವನೊಂದಿಗೂ
ಇನ್ನು
6
ತಿಂಗಳು
ಅಷ್ಟೇ':
ಸುಚೇಂದ್ರ
ಪ್ರಸಾದ್!
ಈ ಹಿಂದೆ ಸುಚೇಂದ್ರ ಪ್ರಸಾದ್ ನಟಿ ಪವಿತ್ರಾ ಲೋಕೇಶ್ ಅವರ ವಿರುದ್ಧ ಕನ್ನಡದ ನ್ಯೂಸ್ ಚಾನೆಲ್ ಒಂದರಲ್ಲಿ ಹೇಳಿಕೆ ನೀಡಿದ್ದರು. ಸುಚೇಂದ್ರ ಪ್ರಸಾದ್ ಹೇಳಿಕೆಗೆ ಪವಿತ್ರಾ ಲೋಕೇಶ್ ತಿರುಗೇಟು ನೀಡಿದ್ದಾರೆ. ಈಗ ಸುಚೇಂದ್ರ ಪ್ರಸಾದ್ ಕೂಡ ಮಾಧ್ಯಮವೊಂದಕ್ಕೆ ಪವಿತ್ರಾ ಲೋಕೇಶ್ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಟಿವಿ9 ಕನ್ನಡಕ್ಕೆ ನೀಡಿದ ಸಂದರ್ಶನದ ಡಿಟೈಲ್ಸ್ ಇಲ್ಲಿದೆ.

ವಿವಾಹದ ಬಗ್ಗೆ ಸುಚೇಂದ್ರ ಪ್ರಸಾದ್ ಹೇಳಿದ್ದೇನು?
ಪವಿತ್ರಾ ಲೋಕೇಶ್ ನಟ-ನಿರ್ದೇಶಕ ಸುಚೇಂದ್ರ ಪ್ರಸಾದ್ ಅವರೊಂದಿಗೆ ಮದುವೆ ಬಗ್ಗೆ ಮಾಹಿತಿ ನೀಡಿದ್ದರು. ನಾನು ಸುಚೇಂದ್ರ ಪ್ರಸಾದ್ ಅವರನ್ನು ಮದುವೆನೇ ಆಗಿಲ್ಲ ಎಂದು ಪವಿತ್ರಾ ಲೋಕೇಶ್ ಹೇಳಿದ್ದರು. ಈ ಮದುವೆ ವಿಷಯಕ್ಕೆ ಸುಚೇಂದ್ರ ಪ್ರಸಾದ್ ಪ್ರತಿಕ್ರಿಯಿಸಿದ್ದಾರೆ. "ಪವಿತ್ರ ಅವ್ರೊಂದಿಗೆ ನನ್ನದು ಪಾಣಿಗ್ರಹಣ. ಕೈ ಹಿಡಿದು ನಡೆಯುತ್ತೇನೆ. ನಡೆಸಿಕೊಳ್ಳುತ್ತೇನೆ ಎಂದು ಒಪ್ಪಿಕೊಂಡಿದ್ದು. ಹಾಗಾಗಿ ಕೈ ಹಿಡಿದಿದ್ದನ್ನು ಪಾಲಿಸುವುದು ನನ್ನ ಧರ್ಮ ಎಂದು ಪಾಲಿಸಿದ್ದೇನೆ." ಎಂದು ಹೇಳಿದ್ದಾರೆ.
Exclusive:ನಟಿ
ಪವಿತ್ರಾ
ಲೋಕೇಶ್
ಹಾಗೂ
ತೆಲುಗು
ನಟನ
ನರೇಶ್
ಮದುವೆ:
ಅಸಲಿ
ಮ್ಯಾಟರ್
ಏನು?

ಪವಿತ್ರಾ ಯಾವುದೇ ನಿರ್ಧಾರಕ್ಕೆ ಬದ್ಧ
" ಅವರು ಎಂತಹದ್ದೇ ತೀರ್ಮಾನ. ಯಾವುದೇ ಸಂದರ್ಭದಲ್ಲಿ ಸೌಕರ್ಯ ಎಂದು ಹೇಳುತ್ತಾರೋ ಅದಕ್ಕೆ ನಾನು ಬದ್ಧನಿದ್ದೇನೆ. ಅವರೊಟ್ಟಿಗೆ ಎಂತಹದ್ದೇ ಸ್ಥಿತಿಯಲ್ಲೂ ಪಾಲಿಸಬೇಕಾದ ಧರ್ಮವಿದೆ. ಆ ಧರ್ಮವನ್ನು ನಾನು ಪಾಲಿಸುತ್ತೇನೆ." ಎಂದಿದ್ದಾರೆ.

ಸಂಸಾರದಲ್ಲಿ ಎಲ್ಲವೂ ಬರುತ್ತೆ
"ಸುಂಟರಗಾಳಿ ಬಿರುಗಾಳಿ ಎಲ್ಲವೂ ಬರುತ್ತೆ. ನಮಗೆ ಉಸಿರಾಟದ ಗಾಳಿ ಬೇಕು. ಹಾಗಾಗಿ ಮಕ್ಕಳಿಗೆ ತಾಯಿ ಬೇಕು. ನಾವೆಲ್ಲರೂ ಜವಾಬ್ದಾರಿಯುಳ್ಳ ಮಾಧ್ಯಮದವರಾದ್ದರಿಂದ ಮಕ್ಕಳ ಮೇಲೆ ಎಂತಹ ದುಷ್ಪರಿಣಾಮ ಬೀರಬಹುದು ಎಂಬ ಎಚ್ಚರಿಕೆ ಇಟ್ಟುಕೊಂಡೇ ತುಂಬಾ ಜವಾಬ್ದಾರಿಯುತವಾಗಿ ನಿಭಾಯಿಸಬೇಕು ಎಂಬ ಬಗ್ಗೆ ಮಾತ್ರ ಸ್ಪಷ್ಟವಾದ ನಿಲುವು ಮತ್ತು ತೀರ್ಮಾನವಿದೆ. ನಾವೆಲ್ಲವೂ ಏನು ಯೋಚನೆ ಮಾಡುತ್ತಿದ್ದೇವೆ ಅದರಿಂದಾಗಿ ಮಕ್ಕಳು ಎಷ್ಟು ನಲುಗಬಹುದು ಎಂದು ಯೋಚನೆ ಮಾಡಿದಾಗಲೆಲ್ಲಾ ಮನಸ್ಸು ವಿಚಲಿತವಾಗುತ್ತೆ."
ರಾಖಿ
ಕಟ್ಟಿಯಾದರೂ
ಪವಿತ್ರಾ
ಅನ್ನು
ಮನೆಯಲ್ಲೇ
ಇರಿಸಿಕೊಳ್ಳುವೆ:
ಸವಾಲು
ಹಾಕಿದ
ನರೇಶ್!?

ನನ್ನ ಧರ್ಮ ಪಾಲಿಸುತ್ತೇನೆ
"ಮಾಧ್ಯಮಗಳಲ್ಲಿ ವಿಷಯ ಬಂದಾಗ ನಾನು ಅವರನ್ನು ವಿಚಾರಿಸಿದಾಗ, ಇದರಲ್ಲಿ ಹುರುಳು-ತಿರುಳು ಎಂದು ಹೇಳಿದ್ದನ್ನು ನಾನು ಖಂಡಿತವಾಗಿಯೂ ಮಾನ್ಯ ಮಾಡಿದ್ದೇನೆ. ನಮ್ಮ ಹಿರಿಯರು ಹಾಕಿ ಕೊಟ್ಟ ಅಂದ ಶ್ರದ್ಧೆಯನ್ನು ನಾನು ಪಾಲಿಸಬೇಕಾದ ಅನಿವಾರ್ಯತೆ ನನಗಿದೆ. ಯಾರು ಯಾವುದನ್ನು ಅನುಸರಿಸಿ ಪಾಲಿಸುತ್ತಾರೋ ಅದೇ ಧರ್ಮ. ನಾನೇನು ಒಪ್ಪಿಕೊಂಡಿದ್ದೇನೋ ಆ ಮಾರ್ಗದಲ್ಲಿ ಅವರು ತೆಗೆದುಕೊಳ್ಳುವ ಯಾವುದೇ ತೀರ್ಮಾನಕ್ಕೆ ನಾನು ಬದ್ಧವಾಗಿದ್ದೇನೆ." ಎಂದು ಸುಚೇಂದ್ರ ಪ್ರಸಾದ್ ತಿಳಿಸಿದ್ದಾರೆ.