For Quick Alerts
  ALLOW NOTIFICATIONS  
  For Daily Alerts

  ಎಂಟು ಸರ್ಕಾರಿ ಶಾಲೆ ದತ್ತು ಪಡೆದ ನಟ ಸುದೀಪ್

  |

  ನಟ ಸುದೀಪ್ ತಮ್ಮ ಸಮಾಜ ಸೇವಾ ಕಾರ್ಯವನ್ನು ಮುಂದುವರೆಸಿದ್ದಾರೆ. ಕೊರೊನಾ ಸಮಯದಲ್ಲಿ ಸಾಕಷ್ಟು ಸಹಾಯ ಮಾಡಿದ್ದ ಸುದೀಪ್ ಇದೀಗ ಮಹತ್ವದ ಕಾರ್ಯವೊಂದಕ್ಕೆ ಕೈ ಜೋಡಿಸಿದ್ದಾರೆ.

  ಚಿರು ಮಗನಿಗೆ ಹೈದರಾಬಾದ್ ನಿಂದ ಬಂದು ದುಬಾರಿ ಗಿಫ್ಟ್ | Filmibeat Kannada

  ರಾಜ್ಯದ ಹಲವು ಮುಖಂಡರುಗಳು ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಅವುಗಳ ಅಭಿವೃದ್ಧಿ ಕಾರ್ಯವನ್ನು ಮಾಡುತ್ತಿದ್ದಾರೆ. ಇದರಲ್ಲಿ ಸುದೀಪ್ ಸಹ ಒಬ್ಬರು.

  'ವಿಲ್ಸನ್‌ ಗಾರ್ಡನ್‌ ಟು ಫ್ಯಾಂಟಮ್': ಜಾಕ್ ಮಂಜುಗೆ ಶುಭಕೋರಿದ ಸುದೀಪ್

  ನಟ ಸುದೀಪ್ ಒಟ್ಟು ಎಂಟು ಸರ್ಕಾರಿ ಶಾಲೆಗಳನ್ನು ದತ್ತು ಪಡೆದಿದ್ದು, ಅವುಗಳ ಮೂಲಸೌಕರ್ಯ ಅಭಿವೃದ್ಧಿ, ಗುಣಮಟ್ಟ ಸುಧಾರಣೆಗೆ ಸುದೀಪ್ ನೆರವು ನೀಡಲಿದ್ದಾರೆ.

  ಸಿಎಂ ಯಡಿಯೂರಪ್ಪ ಅವರು ಹತ್ತು ಸರ್ಕಾರಿ ಶಾಲೆಗಳನ್ನು ದತ್ತು ಪಡೆದಿದ್ದಾರೆ. ಉಪಮಖ್ಯಮಂತ್ರಿ ಅಶ್ವತ್ಥನಾರಾಯಣ್ ಅವರು ಎಂಟು ಸರ್ಕಾರಿ ಶಾಲೆಗಳನ್ನು ದತ್ತು ಪಡೆದಿದ್ದಾರೆ.

  'ಕರ್ನಾಟಕದಲ್ಲೇ ಶೂಟಿಂಗ್ ಮಾಡಿ' ಎಂದ ಅಭಿಮಾನಿಗೆ ಸುದೀಪ್ ಕೊಟ್ಟ ಉತ್ತರ

  ಸೇಂಟ್ ಜೋಸೆಫ್ ಮಹಾವಿದ್ಯಾಲಯ 18 ಶಾಲೆಗಳು, ರಾಜೀವ್ ಗಾಂಧಿ ವಿವಿ 10 ಶಾಲೆಗಳು ಹೀಗೆ ಇನ್ನೂ ಹಲವು ವಿವಿಗಳು, ಖಾಸಗಿ ಸಂಸ್ಥೆಗಳು, ಉದ್ಯಮಿಗಳು ಸರ್ಕಾರಿ ಶಾಲೆಗಳನ್ನು ದತ್ತು ಪಡೆದಿದ್ದಾರೆ. ಸರ್ಕಾರವೂ ಸಹ ವಿವಿಧ ಖಾಸಗಿ ಕಂಪೆನಿಗಳಿಗೆ ಶಾಲೆಗಳನ್ನು ದತ್ತು ಪಡೆಯುವಂತೆ ಮನವಿ ಮಾಡಿದೆ.

  ರಾಜ್ಯದಲ್ಲಿ 45 ಸಾವಿರ ಸರ್ಕಾರಿ ಶಾಲೆಗಳಿದ್ದು, ಅವುಗಳಲ್ಲಿ 20 ಸಾವಿರ ಸರ್ಕಾರಿ ಶಾಲೆಗಳನ್ನು ದತ್ತು ಸ್ವೀಕಾರ ಮಾಡಿಸುವ ಗುರಿಯನ್ನು ಹೊಂದಲಾಗಿದೆ. ಶಾಲೆಗಳಿಗೆ ಹೈಟೆಕ್ ಶೌಚಾಲಯ, ಗ್ರಂಥಾಲಯ, ಹೈಟೆಕ್ ತರಗತಿಗಳು ಇನ್ನೂ ಹಲವು ಸೌಲಭ್ಯಗಳನ್ನು ದತ್ತು ಪಡೆದವರು ಒದಗಿಸಲಿದ್ದಾರೆ.

  English summary
  Actor Sudeep took for adopt eight government schools for development. CM Yeddiyurappa took 10 schools for development.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X