For Quick Alerts
  ALLOW NOTIFICATIONS  
  For Daily Alerts

  ಸಲ್ಮಾನ್ ಖಾನ್ ಸಹೋದರನ ಹುಟ್ಟುಹಬ್ಬ ಆಚರಿಸಿದ ಸುದೀಪ್ ಮತ್ತು ತಂಡ

  |

  ಕಿಚ್ಚ ಸುದೀಪ್ ಎಲ್ಲ ಚಿತ್ರರಂಗದಲ್ಲೂ ಗೆಳೆಯರನ್ನು ಹೊಂದಿದ್ದಾರೆ. ಬಾಲಿವುಡ್‌ನಲ್ಲಿಯಂತೂ ಸುದೀಪ್‌ಗೆ ಗೆಳೆಯರು ತುಸು ಹೆಚ್ಚೇ. ಅದರಲ್ಲಿಯೂ ಬಾಲಿವುಡ್‌ನ ಭಾಯಿಜಾನ್ ಸಲ್ಮಾನ್ ಖಾನ್‌ರ ಆಪ್ತ ಗೆಳೆತನ ಸುದೀಪ್ ಅವರಿಗಿದೆ.

  ಕೇವಲ ಸಲ್ಮಾನ್ ಖಾನ್ ಮಾತ್ರವೇ ಅಲ್ಲ ಅವರ ಸಹೋದರರೊಟ್ಟಿಗೂ ಸುದೀಪ್ ಅವರದ್ದು ಆತ್ಮೀಯ ಗೆಳೆತನ. ಎರಡು ದಿನದ ಹಿಂದೆ ಸಲ್ಮಾನ್ ಖಾನ್‌ರ ಸಹೋದರ ಸೋಹೆಲ್ ಖಾನ್‌ರ ಹುಟ್ಟುಹಬ್ಬ ಸಂಭ್ರಮಾಚರಣೆ ನಡೆದಿದ್ದು, ಸುದೀಪ್ ಹಾಗೂ ಅವರ ವಿಕ್ರಾಂತ್ ರೋಣ ಚಿತ್ರತಂಡ ಸೋಹೆಲ್ ಖಾನ್ ಅವರ ಹುಟ್ಟುಹಬ್ಬವನ್ನು ಆಚರಿಸಿದೆ.

  ಹುಟ್ಟುಹಬ್ಬದ ಪಾರ್ಟಿ ಸುದೀಪ್ ಮನೆಯಲ್ಲಿ ನಡೆದಿದೆ ಎನ್ನಲಾಗುತ್ತಿದೆ. ಪಾರ್ಟಿಯಲ್ಲಿ ಸುದೀಪ್ ಪತ್ನಿ ಪ್ರಿಯಾ, ಮಗಳು ಸಾನ್ವಿ, ನಿರ್ಮಾಪಕ ಜಾಕ್ ಮಂಜು, ಜೀ ಕನ್ನಡದ ರಾಘವೇಂದ್ರ ಹುಣಸೂರು, ಅಕುಲ್ ಬಾಲಾಜಿ, ಸಂಗೀತ ನಿರ್ದೇಶಕ ಅಜಿತ್ ಲೋಕನಾಥ್, ವಾಸುಕಿ ವೈಭವ್, ವಿಕ್ರಾಂತ್ ರೋಣ ನಿರ್ದೇಶಕ ಅನುಪ್ ಭಂಡಾರಿ, ಪ್ರವೀಣ್ ಗೌಡ ಇನ್ನೂ ಹಲವರು ಹುಟ್ಟುಹಬ್ಬದ ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ.

  ಮೂಲಗಳ ಪ್ರಕಾರ ಸುದೀಪ್ ನಟನೆಯ 'ವಿಕ್ರಾಂತ್ ರೋಣ' ಸಿನಿಮಾದ ಹಿಂದಿ ಆವೃತ್ತಿಯ ವಿತರಣೆ ಹಕ್ಕನ್ನು ಸೋಹೆಲ್ ಖಾನ್ ಪಡೆದಿದ್ದಾರೆ ಎನ್ನಲಾಗುತ್ತಿದ್ದು, ಇದೇ ಕಾರಣಕ್ಕಾಗಿ ಅವರು ಬೆಂಗಳೂರಿಗೆ ಬಂದಿದ್ದು ಆ ಸಮಯದಲ್ಲಿ ಹುಟ್ಟುಹಬ್ಬದ ಆಚರಣೆ ನಡೆದಿದೆ ಎನ್ನಲಾಗುತ್ತಿದೆ.

  ಇಡೀಯ ಚಿತ್ರತಂಡ ಸೋಹೆಲ್ ಖಾನ್ ಅವರೊಟ್ಟಿಗೆ ಕೇಕ್ ಕತ್ತರಿಸಿ ಪಾರ್ಟಿ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಸೋಹೆಲ್ ಖಾನ್, ಸುದೀಪ್ ಅವರನ್ನು ತಬ್ಬಿಕೊಂಡಿರುವ ಚಿತ್ರಗಳು ಸಹ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

  ಸುದೀಪ್‌ಗೆ ಸೋಹೆಲ್ ಖಾನ್ ಹಾಗೂ ಸಲ್ಮಾನ್ ಖಾನ್ ಅವರುಗಳ ಗೆಳೆತನ ಹಳೆಯದ್ದು. ಸುದೀಪ್ ಅವರು ಸಲ್ಮಾನ್ ಖಾನ್ ನಟನೆಯ 'ದಬಂಗ್ 3' ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಈ ಹಿಂದೆಯೂ ಕೆಲವು ಹಿಂದಿ ಸಿನಿಮಾಗಳಲ್ಲಿ ಸುದೀಪ್ ನಟಿಸಿದ್ದಾರೆ. ಮಹಾರಾಷ್ಟ್ರದ ಮಾಜಿ ಸಿಎಂ ಮಗ, ನಟ ರಿತೇಶ್ ದೇಶ್‌ಮುಖ್‌ ಜೊತೆಗೂ ಸುದೀಪ್‌ ಅವರದ್ದು ಅತ್ಯಾಪ್ತ ಗೆಳೆತನ. ನೆರೆ-ಹೊರೆಯ ಚಿತ್ರರಂಗದಲ್ಲಿಯೂ ಸುದೀಪ್ ಅವರು ಹಲವರು ಆಪ್ತ ಗೆಳೆಯರನ್ನು ಹೊಂದಿದ್ದಾರೆ.

  English summary
  Actor Sudeep and Vikrant Rona movie team celebrated Sohail Khan's birthday. Video and photos of birthday party went viral on social media.
  Wednesday, December 22, 2021, 21:22
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X