»   » 'ಲೇಡಿ ಆರಮುಗಂ' ಅಬ್ಬರ ಕಂಡು ಕಿಚ್ಚ ಸುದೀಪ್ ಶಾಕ್.!

'ಲೇಡಿ ಆರಮುಗಂ' ಅಬ್ಬರ ಕಂಡು ಕಿಚ್ಚ ಸುದೀಪ್ ಶಾಕ್.!

Posted By:
Subscribe to Filmibeat Kannada

''ಶಾಕ್ ಆಯ್ತಾ......ಆಗಿರಲೇಬೇಕು....ಆಗಿರಲೇಬೇಕು ಅಂತ ತಾನೇ ನಿನ್ನ ಈ ಜಾಗಕ್ಕೆ ಕರ್ಕೊಂಡು ಬಂದಿದ್ದು. ನಿಂಗೆ ಪ್ರಮೋಷನ್ ಕೊಟ್ಟಿದ್ದು ನಿನ್ ಡಿಪಾರ್ಟ್ ಮೆಂಟೇ, ಆದ್ರೆ, ಮಾಗಡಿ ರೋಡ್ ಗೆ ಪೋಸ್ಟಿಂಗ್ ಹಾಕಿಸಿದ್ದು ನಾನು........'' ಎಸ್, ಈ ಡೈಲಾಗ್ ಯಾವ ಚಿತ್ರದ್ದು ಅಂತ ಬಹುಶಃ ಬಹುತೇಕರಿಗೆ ಗೊತ್ತಿರುತ್ತೆ. ಕಿಚ್ಚ ಸುದೀಪ್ ಮತ್ತು ರವಿಶಂಕರ್ ಅಭಿನಯದ 'ಕೆಂಪೇಗೌಡ' ಚಿತ್ರದ ಫೇಮಸ್ ಡೈಲಾಗ್ ಇದು.

ಈಗ ಈ ಡೈಲಾಗ್ ಹೇಳಿಯೇ ಒಬ್ಬ ಯುವತಿ ಕಿಚ್ಚ ಸುದೀಪ್ ಅವರ ಗಮನ ಸೆಳೆದಿದ್ದಾರೆ. ಆಡಿಷನ್ ವೊಂದರಲ್ಲಿ ಭಾಗವಹಿಸಿದ್ದ ಈ ಯುವತಿ, 'ಕೆಂಪೇಗೌಡ' ಚಿತ್ರದಲ್ಲಿ ರವಿಶಂಕರ್ ಅವರು ಹೇಳಿರುವ ಮಾಸ್ ಡೈಲಾಗ್ ನ್ನ ಹೇಳಿ, ಅದಕ್ಕೆ ತಕ್ಕ ಅಭಿನಯ ಮಾಡಿ ತೋರಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೋಡುಗರು ಈ ಯುವತಿಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ದೇಶದ 'ಮೋಸ್ಟ್ ಡಿಸೈರೇಬಲ್ ವ್ಯಕ್ತಿ' ಪಟ್ಟಿಯಲ್ಲಿ ಸುದೀಪ್ ಗೆ ಸ್ಥಾನ

Sudeep Appreciates to Lady Arumugam

ಈ ವಿಡಿಯೋವನ್ನ ಈಗ ಅಭಿನಯ ಚಕ್ರವರ್ತಿ ಸುದೀಪ್ ನೋಡಿದ್ದು, ಯುವತಿಯ ಆಕ್ಟಿಂಗ್ ಕಂಡು ಸ್ವತಃ ಸುದೀಪ್ ಕೂಡ ಶಾಕ್ ಆಗಿದ್ದಾರೆ. ಯುವತಿಯ ಡೈಲಾಗ್ ಡಿಲಿವರಿ ಮತ್ತು ಆಕ್ಟಿಂಗ್ ನೋಡಿ ಹ್ಯಾಟ್ಸಪ್ ಎಂದು ಟ್ವೀಟ್ ಮಾಡಿದ್ದಾರೆ.

ಕಟ್ಟಾ ವಿರೋಧಿಗಳಿಗೆ ಕಿಚ್ಚ ಸುದೀಪ್ ಕೊಟ್ಟ ಉತ್ತರವೇನು.?

ಯುವತಿ ಹೇಳಿರುವ ಮಾಸ್ ಡೈಲಾಗ್ ವಿಡಿಯೋ ಮುಂದಿದೆ ನೋಡಿ

English summary
Kannada Actor Kiccha Sudeep has taken his twitter account to Appreciates Lady Arumugam Powerful Dialogue.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada